ನೌಕಾ ದಳದಿಂದ ಯೋಗ ದಿನ

ಸುದ್ದಿ360  ಎಎನ್‍ಐ ಟ್ವೀಟ್ಸ್ : ಭಾರತೀಯ ನಾಕಾಪಡೆಯ ಯುದ್ಧನೌಕೆ ಐಎನ್‍ಎಸ್‍ ಸಾತ್ಪುರ, ಪೆಸಿಫಿಕ್‍ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದು, 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಮುದ್ರದಲ್ಲಿ ಸಾಮಾನ್ಯ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರಾಷ್ಟ್ರೀಯ ದಿನವನ್ನು ಆರಂಭಿಸಿತು.

ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ

ಸುದ್ದಿ360 ಬೆಂಗಳೂರು, ಜೂ.20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ … Read more

ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ

ಸುದ್ದಿ360 ಬೆಂಗಳೂರು, ಜೂ.19: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಮತ್ತು 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20, ನಾಳೆ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 1.45 ಕ್ಕೆ ಪ್ರಧಾನಿಯವರು (ಬೇಸ್) ಕ್ಯಾಂಪಸ್ ಗೆ ತೆರಳಿ, ಡಾ:ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, … Read more

ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ನವದೆಹಲಿ, ಜೂನ್ 18: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ … Read more

ಆಶ್ಚರ್ಯವಲ್ಲ ಪರಮಾಶ್ಚರ್ಯ! – 10,000 ಕೇಳಿದರೆ 50,000 ರೂ. ಕೊಟ್ಟ ಎಟಿಎಂ!!

ಸುದ್ದಿ360 ನಾಗಪುರ: ನಮ್ಮಲ್ಲಿನ ಎಟಿಎಂಗಳಲ್ಲಿ ಹಣ ಇದೆ ಅಂದ್ರೇ ದೊಡ್ಡ ವಿಷಯ. ಇನ್ನು ಆ ಎಟಿಎಂ ಹಣ ಕೊಟ್ಟಿತೆಂದರೆ ಅದೃಷ್ಟವೇ ಸರಿ. ಕೆಲವೊಮ್ಮೆ ನಮ್ಮ ಹಣ ನಮಗೆ ಕೊಡಲು ಎಟಿಎಂಗಳು ಸತಾಯಿಸುತ್ತವೆ. ಸಿಟಿಯಲ್ಲಿರುವ ಅಷ್ಟೂ ಎಟಿಎಂ ಕೇಂದ್ರಗಳನ್ನು ಸುತ್ತಾಡಿ ಬಂದರೂ ಒಂದು ಗರಿ ಗರಿ ನೋಟು ಹುಟ್ಟುವುದಿಲ್ಲ. ಹೀಗಿರುವಾಗ ಕಿತ್ತಳೆ ನಾಡು ನಾಗಪುರ ಜಿಲ್ಲೆಯಲ್ಲೊಂದು ಎಟಿಎಂ ಪವಾಡವನ್ನೇ ಸೃಷ್ಟಿಸಿದೆ! ಗ್ರಾಹಕರೊಬ್ಬರು 10,000 ರೂ. ಕೇಳಿದರೆ ಆ ಎಟಿಎಂ ಬರೋಬ್ಬರಿ 50,000 ರೂ. ದಯಪಾಲಿಸಿದೆ!! ಇದು ಆಶ್ಚರ್ಯವಲ್ಲ ಪರಮಾಶ್ಚರ್ಯ! … Read more

192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . .

ಇದೀಗ ದೇಶಿ ಹಸುವಿನ ಸಗಣಿಗೆ ಅಂತಾರಾಷ್ಟ್ರೀಯ ಬೇಡಿಕೆ ಜೈಪುರ:  ಕುವೈಟ್ ಕೃಷಿ ವಿಜ್ಞಾನಿಗಳ ವ್ಯಾಪಕ ಸಂಶೋಧನೆಯಿಂದಾಗಿ ಹಸುವಿನ ಸಗಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಇದೀಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತದಿಂದ ಹಸುವಿನ ಸಗಣಿ ಕುವೈತ್ ಗೆ ರಫ್ತಾಗುತ್ತಿದೆ. ಅದೂ ಎಷ್ಟು ಅಂತೀರ. . .? ಬರೋಬ್ಬರಿ 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತಾಗಲಿದೆ. ಈ ಸಂಗತಿಯನ್ನು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ. ಇದು ಭಾರತೀಯ ಪಶುಸಂಗೋಪನಾ ಉದ್ಯಮದ … Read more

ಮುಂದುವರೆದ ವಿಚಾರಣೆ ಇಂದು ಕೂಡ ರಾಹುಲ್ ಗಾಂಧಿಗೆ ಇಡಿ ಸಮನ್ಸ್

ನವದೆಹಲಿ, ಜೂ.15: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ವಿಚಾರಣೆಗೆ ಹಾಜರಾಗುವಂತೆ ರಾಹುಲ್ಗಾಂನಧಿಗೆ ಇಡಿ ಸಮನ್ಸ್ ನೀಡಿದೆ.ಸೋಮವಾರ, ಮಂಗಳವಾರ ಎರಡೂ ದಿನ ವಿಚಾರಣಗೆ ಒಳಪಡಿಸಲಾಗಿದ್ದು, ಈವರೆಗೆ ೧೮ ಗಂಟೆಗಳ ಕಾಲ ವಿಚಾರಣೆ ನಡೆದಿದೆ.ರಾಹುಲ್ಗಾಂಲಧಿ ವಿಚಾರಣೆಗೆ ಒಳಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದು, ಇಡಿ ಕಚೇರಿಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ.

error: Content is protected !!