ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ 9 ಪತ್ರಕರ್ತರಿಗೆ ಮಾಧ್ಯಮ ಪ್ರಶಸ್ತಿ ಪ್ರಕಟ

davangere varadigarara kuta madhyama prashasti

ಸುದ್ದಿ360 ದಾವಣಗೆರೆ : ದಾವಣಗೆರೆ ಜಿಲ್ಲಾ ವರದಿಗಾರರ ಕೂಟವು ಪ್ರತಿವರ್ಷದಂತೆ ಈ ಬಾರಿಯೂ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, 9 ಜನ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಇದೇ ಆ.27ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿರುವ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಧ್ಯಮ ಪ್ರಶಸ್ತಿ ನೀಡುವ ಸಲುವಾಗಿ ರಚಿಸಲಾಗಿದ್ದ ಸಮಿತಿ ಸೋಮವಾರ ನಡೆದ ಸಭೆಯಲ್ಲಿ ಒಂಭತ್ತು ಜನ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರ್, … Read more

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಭಾಷಣ ಸ್ಪರ್ಧೆ ಚಿಕ್ಕಿ ರಂಗೋಲಿ ಸ್ಪರ್ಧೆ ಮತ್ತು ಚಿಕ್ಕ ಮಕ್ಕಳ ವೇಷಭೂಷಣ ಸ್ಪರ್ಧೆಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅಧ್ಯಕ್ಷತೆಯನ್ನ ಡಾ. ರವಿಕುಮಾರ್ ಎಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ವಾಮದೇವಪ್ಪ ಕಲೆ ಭಾಷೆ  ಹುಟ್ಟಿನಿಂದಲೇ ನೀಡಿದರೆ ಮುಂದಿನ  ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು ತಂದೆ ತಾಯಿಗಳು ಸಂಸ್ಕೃತಿ ಬಗ್ಗೆ ತಿಳಿ … Read more

ಕುವೆಂಪು ಕನ್ನಡ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಸುದ್ದಿ360 ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿನೂತನ ಮಹಿಳಾ ಸಮಾಜ (ರಿ.) ವಿನಾಯಕ ಬಡಾವಣೆ ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ಆ.15ರ ಮಂಗಳವಾರ ಬೆಳಗ್ಗೆ8.30ಕ್ಕೆ ಕುವೆಂಪು ಕನ್ನಡ ಭವನದ ಮುಂಭಾಗದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು  ದ್ವಜಾರೋಹಣ ಮಾಡಿ ಧ್ವಜ  ವಂದನೆ ಸ್ವೀಕರಿಸುವರು. ಬೆಳಗ್ಗೆ 11 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿನೂತನ ಮಹಿಳಾ … Read more

ಶೋಷಿತ ಸಮುದಾಯಗಳ ಧ್ವನಿ – ಕ್ರಾಂತಿಕಾರಿ ಹಾಡುಗಾರ ಗದ್ದರ್ ಅವರಿಗೆ ನುಡಿನಮನ

gaddar-nudinamana-shivamogga-suddi360

ಸುದ್ದಿ360 ಶಿವಮೊಗ್ಗ: ಕ್ರಾಂತಿಗೀತೆ, ಲಾವಣಿಗಳ ಮೂಲಕ ಶೋಷಿತ ಸಮುದಾಯಗಳ ಪ್ರತಿಭಟನೆಯ ಧ್ವನಿಯಾಗಿದ್ದ ಕ್ರಾಂತಿಕಾರಿ ಹಾಡುಗಾರ ಗದ್ದರ್ ಭಾನುವಾರ ಹೈದರಾಬಾದ್‍ನಲ್ಲಿ ವಿಧಿವಶರಾಗಿದ್ದಾರೆ. ಗದ್ದರ್ ಅಭಿಮಾನಿಗಳು ಅಗಲಿದ ಚೇತನಕ್ಕೆ ಗೌರವಪೂರ್ವಕವಾಗಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆ.9ರ ಬುಧವಾರದಂದು ಸಂಜೆ 5 ಗಂಟೆಗೆ ನಗರದ ಮೀಡಿಯಾಹೌಸ್‍ನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಸಮಾನ ಮನಸ್ಕ ಗೆಳೆಯರು ನುಡಿನಮನ ಸಭೆಗೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‍ ಸಂಖ್ಯೆ 8073502892 ಸಂಪರ್ಕಿಸಬಹುದಾಗಿದೆ. ಅವಿನಾಭಾವ ನಂಟು: ಗದ್ಧರ್  ಅವರು  ತಮ್ಮ ಕ್ರಾಂತಿಕಾರಿ ವಿಶಿಷ್ಠ ಲಾವಣಿಗಳ … Read more

ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದ್ರೋಹ – ಬೆಲೆ ಏರಿಕೆ ‘ಕೈ’ ಸರ್ಕಾರದ ಆರನೇ ಗ್ಯಾಂಟಿ: ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕಾಂಗ್ರೆಸ್ ‌ಸರ್ಕಾರದ ದುಬಾರಿ ದುನಿಯಾ. ಈ ಸರ್ಕಾರಕ್ಕೆ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಟ್ಚೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ,  ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, … Read more

ವಿವಿಧ ಕಂಪನಿಗಳಿಗೆ ಆಯ್ಕೆಯಾದ 2023 ಸಾಲಿನ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣ

Group photo unveiling of 2023 students

ಸುದ್ದಿ360, ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 2023ರ ಸಾಲಿನ ವಿವಿಧ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣಗೊಳಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ 2023ರ ಸಾಲಿನ  ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾದ ಒಟ್ಟು 610 ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಚಾಲನೆ ನೀಡಿದರು. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವೈ ಯು ಸುಭಾಷ್ ಚಂದ್ರ ಸಾತ್ ನೀಡಿದ್ದು ವಿಶೇಷವಾಗಿತ್ತು. ನಂತರ ಮಾತನಾಡಿದ ಪ್ರಾಂಶುಪಾಲರು, ಪ್ರತಿ … Read more

ದಾವಣಗೆರೆ : ಬಾಕಿ ವೇತನ ಬಿಡುಗಡೆಗಾಗಿ ಜು.31ರಂದು ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಸುದ್ದಿ360 ದಾವಣಗೆರೆ- ದಾವಣಗೆರೆ ತಾಲೂಕು ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಎರಡು ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಸಿಊಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ )ಜಿಲ್ಲಾಧ್ಯಕ್ಷ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ. 31-7-23 ಸೋಮವಾರ ದಾವಣಗೆರೆ ಬೇತೂರು ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ತಮಗೆ ಕೂಡಲೇ ಎರಡು ತಿಂಗಳ … Read more

‘ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ನಾ ಕಂಡಂತೆ’ – ಸಾಮಾಜಿಕ ಹೋರಾಟಗಾರ ಮಂಜುನಾಥ್ ಕೈದಾಳೆಯವರ ಮಾತುಗಳಲ್ಲಿ. . .

ನಾ ಕಂಡಂತಹ ಜಿಲ್ಲಾಧಿಕಾರಿ  ಅಧಿಕಾರ ವಹಿಸಿಕೊಂಡ ಮೊದಲನೆಯ ಕೆಲಸ ಜಗಳೂರು ತಾಲೂಕಿನ ಕಡುಬಡತನದ ಒಂದು ಅಂಗವಿಕಲ ಕುಟುಂಬದ ಮನೆಗೆ ಬೇಟಿ ನೀಡಿ ಅವರಿಗೆ ಮಾಸಾಷನ ಪತ್ರ ನೀಡಿದ್ದು ಪತ್ರಿಕೆಯಲ್ಲಿ ಸಣ್ಣದಾಗಿ ವರದಿಯಾಯಿತು. ನಾನು ಕೂತುಹಲ ಮತ್ತು ಇಷ್ಟು ದಿವಸ ಈ ಕುಟುಂಬಕ್ಕೆ ಅಂಗವಿಕಲ ಮಾಸಾಶನ  ಸಿಗುತ್ತಿರಲಿಲ್ಲವೇ ಎನ್ನುವ ಪ್ರಶ್ನೆಯು ಮೂಡಿತು. ಆಗ ಮಾಹಿತಿಗಾಗಿ ಜಗಳೂರಿನ ನನಗೆ ಪರಿಚಯ ವಿರುವವರನ್ನು  ವಿಚಾರಿಸಿದಾಗ ತಿಳಿದದ್ದು ತುಂಬಾ ಬೇಸರವಾಯಿತು. ಅಲ್ಲಿಯವರೆಗೂ ಆ ಕುಟುಂಬಕ್ಕೆ ಆ ಸೌಲಭ್ಯವೇ ದೊರಕಿಲ್ಲ ಎನ್ನುವುದು ಬೇಸರ ಮೂಡಿಸಿತು. … Read more

ಜಿಎಂಐಟಿ ಎಂಬಿಎ ವಿಭಾಗದಲ್ಲಿ ಒಂದು ದಿನದ ಕಾರ್ಯಗಾರ “ಕೆನಡಾದಲ್ಲಿ ಉದ್ಯೋಗಾವಕಾಶಗಳು ಮತ್ತು ಸವಾಲುಗಳು”

gmit-davangere

ಸುದ್ದಿ360 ದಾವಣಗೆರೆ: ಕೆನಡಾ(canada) ದಲ್ಲಿ ಉದ್ಯೋಗವಕಾಶಗಳು (job opportunities) ಮತ್ತು ಸವಾಲುಗಳು ಎಂಬ ವಿಷಯವಾಗಿ ಒಂದು ದಿನದ ಕಾರ್ಯಾಗಾರ (Workshop) ವನ್ನು ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ (GMIT) ಎಂಬಿಎ (MBA) ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರವನ್ನು ಎಂಬಿಎ ವಿದ್ಯಾರ್ಥಿಗಳಿಗೆ ಅದರಲ್ಲೂ ಹೊರದೇಶಗಳಿಗೆ ಹೋಗಿ ದುಡಿಯುವ ಮತ್ತು ಸವಾಲುಗಳನ್ನು ಎದುರಿಸುವ ವಿದ್ಯಾರ್ಥಿಗಳಿಗಾಗಿಯೇ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕೆನಡಾ ದೇಶದಲ್ಲಿ ಹಲವು ವರ್ಷಗಳಿಂದ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ವೇಣುಗೋಪಾಲ್ ಎಸ್ ವಿದ್ಯಾರ್ಥಿಗಳೊಡನೆ ಬೆರೆತು ತಮ್ಮ ಅನುಭವದ ಮಾತುಗಳನ್ನು … Read more

ದಾವಣಗೆರೆ ಕೇಂದ್ರೀಯ ವಿದ್ಯಾಲಯದಲ್ಲಿ ‘ವನಮಹೋತ್ಸವ’ ಆಚರಣೆ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗ ಹಾಗೂ ಅರಣ್ಯ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವನಮಹೋತ್ಸವ ಪ್ರಯುಕ್ತ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಮರಗಳನ್ನು ಬೆಳೆಸುವ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಸಸಿ ನೆಡುವಿಕೆಯಲ್ಲಿ ಪಾಲ್ಗೊಂಡು ಅವುಗಳನ್ನು ಸಸಿಗಳ ಪಾಲನೆ ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಡಾ. … Read more

error: Content is protected !!