ಕವಲುದಾರಿಯ ಸುಳಿವು ನೀಡಿದ್ದ ಸಚಿವ ಸೋಮಣ್ಣ ಕಣ್ಣೀರಿಟ್ಟಿದ್ದು ಯಾಕೆ

ಸುದ್ದಿ360 ಬೆಂಗಳೂರು ಮಾ.14: ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹದ ಮಾತುಗಳಿಗೆ ಸಚಿವ ಸೋಮಣ್ಣ ಉತ್ತರ ನೀಡಿದ್ದಾರೆ. ಅವರು ಇಂದು ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜಕೀಯ ಜೀವನ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ ಮತ್ತು ಕಟೀಲ್ ನನ್ನ ನಾಯಕರು ಎಂದು ಹೇಳಿದ ಅವರು ಬಿಜೆಪಿ ಬಿಟ್ಟು ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ  ಹಲವು ದಿನಗಳಿಂದ ಸಚಿವ ಸೋಮಣ್ಣನವರು ಬಿಜೆಪಿ ತೊರೆದು ಬೇರೆ … Read more

ಭ್ರಷ್ಟಾಚಾರ: ಬಿಜೆಪಿ ಅಧಿಕಾರ ದುರ್ಭಳಕೆ – ಮುಖ್ಯಮಂತ್ರಿಗಳ ರಾಜೀನಾಮೆಗೆ ಎಎಪಿ ಒತ್ತಾಯ

ಸುದ್ದಿ360, ದಾವಣಗೆರೆ ಮಾ 10: ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಮಿತಿಮೀರಿದ ಭ್ರಷ್ಟಾಚಾರ ಕೃತ್ಯವನ್ನು ಖಂಡಿಸಿ, ನಿಸ್ಸಾಹಾಯಕ‌ ಮಖ್ಯಮಂತ್ರಿಗಳು ಇದರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಅಗ್ರಹಿಸಿ ಆಮ್ ಆದ್ಮಿ ಪಕ್ಷ ಜಿಲ್ಲಾ ಘಟಕ ಮಾನ್ಯ ರಾಜ್ಯಪಾಲರಿಗೆ ಜಿಲ್ಲಾ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಇಂದು ನಗರದ ಜಯದೇವ ಸರ್ಕಲ್ ನಲ್ಲಿ ಜಮಾವಣೆಗೊಂಡ ಎಎಪಿ ಕಾರ್ಯಕರ್ತರು ರಾಜ್ಯ‌ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಮತ್ತು ಭ್ರಷ್ಟಾಚಾರದಲ್ಲಿ ನಿರತರಾದವರನ್ನು ರಕ್ಣಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಘೋಷೆಣೆಗಳನ್ನು ಕೂಗುತ್ತ ಮುಖ್ಯಮಂತ್ರಿಗಳ ನಡೆಯನ್ನು … Read more

ಸುಮಲತಾ ಅಂಬರೀಶ್ ಬಿಜೆಪಿ ಸೇರುವುದು ಬಹುತೇಕ ಖಚಿತ

ಸುದ್ದಿ360 ಬೆಂಗಳೂರು, ಮಾ.09: ಮಂಡ್ಯದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಒಲವು ಹೊಂದಿರುವ  ಮಂಡ್ಯ ಸಂಸದೆ ಸುಮಲತಾ ಅವರು ನಾಳೆ ಅಧಿಕೃತವಾಗಿ ಬಿಜೆಪಿ ಸೇರುವ ಸಾಧ್ಯತೆ ಇದೆ. ನಾಳೆ ಮಾ.10ರಂದು ಸುಮಲತಾ ಅಂಬರೀಶ್ ಮಹತ್ವದ ಪತ್ರಿಕಾಗೋಷ್ಟಿ ಕರೆದಿದ್ದಾರೆ. ಇದರಲ್ಲಿ ಸುಮಲತಾ ಅಧಿಕೃತವಾಗಿ ತಮ್ಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತು ಅವರ ಆಪ್ತರಾಗಿರುವ ಸಚ್ಚಿದಾನಂದ ಸೇರಿದಂತೆ ಹಲವು ನಾಯಕರು ಈ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಈ ಕುರಿತ ಮಾಧ್ಯಮದವರ ಪ್ರಶ್ನೆಗೆ … Read more

ಯುಗಾದಿ ಪ್ರಯುಕ್ತ ಕಲಾಕುಂಚದಿಂದ ‘ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ’

ದಾವಣಗೆರೆ-ಮಾ.09: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ  ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಹಮ್ಮಿಕೊಳ್ಳಲಾಗಿದೆ ಎಂದು  ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ. ಮಾರ್ಚ್ 22 ರಂದು ಬುಧವಾರ ಬೆಳಿಗ್ಗೆ 8 ರಿಂದ 12 ಗಂಟೆಯೊಳಗೆ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸವವರು ಆಯಾ ಬಡಾವಣೆಗಳ ತೀರ್ಪುಗಾರರ ಈ ಕೆಳಗಿನ … Read more

ನಿವೃತ್ತ ಶಿಕ್ಷಕ ಬಿ.ಎಸ್. ಸಿದ್ಧರಾಮಪ್ಪ ನಿಧನ: ಕಂಬನಿ ಮಿಡಿದ ಅಪಾರ ಶಿಷ್ಯವೃಂದ

ಸುದ್ದಿ360 ದಾವಣಗೆರೆ / ಭದ್ರಾವತಿ ಮಾ.9: ವೃತ್ತಿ ಬದುಕಿನಲ್ಲಿ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಡಯಟ್ ವಿಜ್ಞಾನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಬಿ.ಎಸ್. ಸಿದ್ದರಾಮಪ್ಪ ಅವರು ಇಂದು ದಾವಣಗೆರೆಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಸುಮಾರು 35 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದ … Read more

ಮಾ.10,11 ರಂದು ದಾವಣಗೆರೆ ಜಿಲ್ಲೆಯಲ್ಲಿ ‘ಪ್ರಜಾಧ್ವನಿ’ – ಸಿದ್ಧರಾಮಯ್ಯ ಭಾಗಿ

ಸುದ್ದಿ360 ದಾವಣಗೆರೆ: ಜನರನ್ನು ಜಾಗೃತಿಗೊಳಿಸುವ ಪ್ರಜಾಧ್ವನಿ ಯಾತ್ರೆ ಈಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರಾರಂಭಗೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ 10 ಮತ್ತು 11 ರಂದು ನಡೆಯಲಿದೆ ಎಂದು ಕಾಂಗ್ರೆಸ್‍ ಜಿಲ್ಲಾ ಘಟಕದ ಅಧ್ಯಕ್ಷ  ಎಚ್. ಬಿ. ಮಂಜಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಎಂ. ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಸೇರಿದಂತೆ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ … Read more

ಮಾ.9: ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್‍ನಿಂದ ಸಾಂಕೇತಿಕ ಬಂದ್

ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ ಬಂದ್‍ಗೆ ಕರೆ ಸುದ್ದಿ360 ದಾವಣಗೆರೆ, ಮಾ.08: ರಾಜ್ಯಕ್ಕೆ ಕರಪ್ಷನ್ ಕ್ಯಾಪಿಟಲ್ ಕರ್ನಾಟಕ ಕಳಂಕ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ರವರೆಗೆ 2 ಗಂಟೆಗಳ ಕಾಲ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಸಾರ್ವಜನಿಕರು ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ತಿಳಿಸಿದರು. ಈ ಕುರಿತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ … Read more

ಮಹಿಳೆ – ಬಣ್ಣ – ಬದುಕು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹಬ್ಬದ ನಿಮಿತ್ತ ಈ ಒಂದು ಲೇಖನ ಮಹಿಳೆಯರನ್ನು ಗೌರವಿಸುವ ಹಾಗೂ ಪ್ರಕೃತಿಯನ್ನು ಜೋಪಾನ ಮಾಡುವ ಪ್ರತಿಯೊಬ್ಬರ ಪರವಾಗಿ… – ಕೂಡ್ಲಿ ಸೋಮಶೇಖರ್ ಬದುಕು ವರ್ಣಮಯವಾಗಿರಬೇಕು ಎಂಬುದು ಎಲ್ಲರ ಆಶಯ, ಹಾರೈಕೆ ಕೂಡ. ವರ್ಣಮಯವಾದ ಈ ಪ್ರಕೃತಿಯಲ್ಲಿ ಮಾನವ ಜೀವಿ ಒಂದು ಸಣ್ಣ ತುಣುಕು ಮಾತ್ರವೇ ಎಂಬುದನ್ನು ಅರಿತರೆ ಬಹುಶಃ ಮಾನವ ತನ್ನ ಉದ್ಧಾರದೊಂದಿಗೆ ಸಕಲ ಜೀವರಾಶಿಯ ಉದ್ಧಾರಕ್ಕೂ ಮುಂದಾಗುತ್ತಾನೆ. ತಾನು ವಾಸಿಸುವ ಪ್ರಕೃತಿಯ ಮೇಲೆ ಅನಾದಿಕಾಲದಿಂದಲೂ ದೌರ್ಜನ್ಯ ವೆಸಗುತ್ತ ಬಂದ … Read more

ಚನ್ನಗಿರಿಯಲ್ಲಿ ಭವ್ಯ ಮೆರವಣಿಗೆ || ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ ಇದ್ದೆ- ಪಕ್ಷದಿಂದ ಉಚ್ಚಾಟನೆಗೊಂಡಿದ್ದೇನೆ ಎಂದ ಮಾಡಾಳು ವಿರೂಪಾಕ್ಷಪ್ಪ

ಸುದ್ದಿ360 ದಾವಣಗೆರೆ ಮಾ. 7: ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪರನ್ನು ಅಭಿಮಾನಿಗಳು ಸಮರವೀರರಂತೆ ಬಿಂಬಿಸಿ ಭವ್ಯ ಸ್ವಾಗತ  ಮಾಡಿದ್ದಾರೆ. ಕೆಎಸ್ ಡಿ ಎಲ್ ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ  ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ನವರು ತಮ್ಮ ಜಾಮೀನು ಅರ್ಜಿ ಮಂಜೂರು ಆದ ಕೆಲವೇ ಗಂಟೆಗಳಲ್ಲಿ ಚನ್ನಗಿರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ … Read more

ಎಷ್ಟು ದುಡ್ಡು ಕೊಟ್ಟರೆ ನಿಮ್ಮಹಣದ ದಾಹ ತೀರುತ್ತದೆ? – ಬಿಜೆಪಿಗೆ ರಣದೀಪ್ ಸಿಂಗ್ ಸುರ್ಜಿವಾಲ ತಾಕೀತು

ಬಿಟ್ಟರೆ ಬಿಜೆಪಿಯವರು ಕರ್ನಾಟಕವನ್ನೇ ಮಾರುತ್ತಾರೆ! – ಸುರ್ಜಿವಾಲ ಸುದ್ದಿ360 ದಾವಣಗೆರೆ ಮಾ.6: ‘ಮುಖ್ಯಮಂತ್ರಿ ಬೊಮ್ಮಾಯಿಯವರೇ, ನಳೀನ್ ಕುಮಾರ್ ಕಟೀಲ್ ಹಾಗೂ ಜೆ.ಪಿ. ನಡ್ಡಾ ಅವರೇ ನಿಮ್ಮ ಬಿಜೆಪಿಗೆ ಹಣದ ದಾಹ ಎಷ್ಟಿದೆ ಎಂಬುದನ್ನು ಹೇಳಿ. ಎಷ್ಟು ದುಡ್ಡು ಕೊಟ್ಟರೆ ನಿಮ್ಮ ದಾಹ ತೀರುತ್ತದೆ ಎಂದು ತಿಳಿಸಿಬಿಡಿ. ಕರ್ನಾಟಕದ ಜನತೆಯೊಂದಿಗೆ ನಾವೆಲ್ಲರೂ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ನಿಮಗೆ ಹಣ ಹೊಂದಿಸಿಕೊಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಬಿಜೆಪಿಯ ಭ್ರಷ್ಟಾಚಾರ ಕುರಿತು ಗುಡುಗಿದ್ದಾರೆ. … Read more

error: Content is protected !!