ದೇವನಗರಿಯಲ್ಲಿ ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ

ಸುದ್ದಿ360 ದಾವಣಗೆರೆ ಡಿ.25:  ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ವಿದ್ಯಾನಗರದ ಶ್ರೀ ಈಶ್ವರ ದೇವಾಲಯದ ಬಳಿ ಅದ್ದೂರಿಯಾಗಿ ಕನ್ನಡ ರಥವನ್ನು ಬರಮಾಡಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ,  ಪಾಂಡೋಮಟ್ಟಿ ಶ್ರೀಗಳು, ಯರಗುಂಟಿ ಶ್ರೀಗಳು, ಹರಿಹರ ಮಾಜಿ ಶಾಸಕ ಬಿ.ಪಿ ಹರೀಶ್, ಸಾಹಿತಿ ಎನ್ ಟಿ. ಯರ್ರಿಸ್ವಾಮಿ,  ಕಸಾಪ ಕೋಶಾಧಿಕಾರಿ ರಾಘವೇಂದ್ರ ನಾಯರಿ, ರೇವಣಸಿದ್ದಪ್ಪ ಅಂಗಡಿ, ಪತ್ರಕರ್ತರಾದ ಜಿಗಳಿ ಪ್ರಕಾಶ್, … Read more

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಸುದ್ದಿ360 ದಾವಣಗೆರೆ ಡಿ.25: ನಗರದ ಎಸ್.ಓ.ಜಿ ಕಾಲೋನಿಯ ಫಕೀರಪ್ಪ ಗೋಕಾವಿ, ಚಂದ್ರಮ್ಮ ಗೋಕಾವಿ ಎಂಬ ವೃದ್ಧ ದಂಪತಿ ಒಂದೇ ದಿನ ಸಾವನ್ನಪ್ಪುವ ಮೂಲಕ ಸಾವಲ್ಲೂ ಒಂದಾಗಿದ್ದಾರೆ.85 ವರ್ಷದ ಫಕೀರಪ್ಪ ಗೋಕಾವಿ ಶನಿವಾರ (ಡಿ.24) ರಾತ್ರಿ ಹೃದಯಾಘಾತದಿಂದ ಮನೆಯಲ್ಲೇ ನಿಧನ ಹೊಂದಿದ್ದಾರೆ. ಪತಿಯ ನಿಧನ ಹೊಂದಿರುವರೆಂದು ತಿಳಿಯುತ್ತಿದ್ದಂತೆ ಪತ್ನಿ ಚಂದ್ರಮ್ಮ ಗೋಕಾವಿ ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.55 ವರ್ಷಗಳ ದಾಂಪತ್ಯ ಜೀವನ ನಡೆಸಿ, ಅನ್ಯೋನ್ಯವಾಗಿ ಬದುಕಿದ್ದ ದಂಪತಿಗಳು ಇಹಲೋಕ ತ್ಯಜಿಸುವ ಮೂಲಕ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಡಗರದ ಕ್ರಿಸ್ಮಸ್ ಆಚರಣೆ – ವಿಶ್ವಶಾಂತಿಗಾಗಿ ಪ್ರಾರ್ಥನೆ

ಸುದ್ದಿ360  ದಾವಣಗೆರೆ ಡಿ.25: ನಗರದಲ್ಲಿ ಕ್ರಿಸ್ಮಸ್ ಆಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿದ್ಯುತ್ ದೀಪಗಳ ಅಲಂಕಾರ, ಬಗೆಬಗೆಯ ಸಿಹಿ ತಿನಿಸುತಗಳ ಖಾದ್ಯ ತಯಾರಿಸಿ ಬಾಂಧವರಲ್ಲಿ ವಿನಿಮಯ ಮಾಡಿಕೊಂಡು ಸಂಭ್ರಮಿಸುವ ಮತ್ತು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲಾಯಿತು. ನಗರದ ಪ್ರಮುಖ ಕ್ರೈಸ್ತ ಧಾರ್ಮಿಕ ಕೇಂದ್ರಗಳಾಗಿರುವ ಪಿ.ಜೆ. ಬಡಾವಣೆಯ ಸಂತ ಥೋಮಸರ ದೇವಾಲಯ, ನಿಜಲಿಂಗಪ್ಪ ಬಡಾವಣೆಯ ಸಂತ ಜೋಸೆಫರ ಕ್ಯಾಥಲಿಕ್ ದೇವಾಲಯ, ಜಾಲಿನಗರದ ಜೆಎಂಬಿ ಚರ್ಚ್, ನಿಟ್ಟುವಳ್ಳಿಯ ಗೋಲ್ ಮಿನಿಸ್ಟ್ರೀಸ್ ಚರ್ಚ್, ಸೇರಿದಂತೆ … Read more

ಓಪಿಎಸ್: ಹೈಕಮಾಂಡ್‍ನೊಂದಿಗೆ ಚರ್ಚೆ – ಸಿದ್ಧರಾಮಯ್ಯ

ಸುದ್ದಿ360  ದಾವಣಗೆರೆ ಡಿ.25: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಪಕ್ಷದ ಹೈಕಮಾಂಡ್‍ನೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ. ಹೊಸ ಪಿಂಚಣಿ ಯೋಜನೆ (ಎನ್ ಪಿ ಎಸ್) ರದ್ದುಗೊಳಿಸಿ  ಓಪಿಎಸ್ ಜಾರಿಗೊಳಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರು ರಾಜಧಾನಿಯ ಸ್ವಾತಂತ್ರ್ಯ  ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಧರಣಿ ನಿರತರ ಅಹವಾಲು ಸ್ವೀಕರಿಸಿ ಮಾತನಾಡಿದರು. ನಾನ್ನ ಅಧಿಕಾರಾವಧಿಯಲ್ಲಿ  ಓಪಿಎಸ್ ಜಾರಿ ಮಾಡಲು ಸಾಧ್ಯವಿಲ್ಲ ಎಂದು ನಾನು … Read more

ಎಸ್ಸೆಸ್ಸೆಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಮೇಯರ್ ಎಚ್ಚರಿಕೆ

ಸುದ್ದಿ360  ದಾವಣಗೆರೆ ಡಿ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಒಡೆತನದ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಸಾಕಣೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಸ್ಸೆಸ್ಸೆಂ ಒಡೆತನದ ಕಲ್ಲೆಶ್ವರ ರೈಸ್‌ಮಿಲ್ ಆವರಣದಲ್ಲಿ ಅಕ್ರಮವಾಗಿ ಸಾಕಣೆ ಮಾಡಿದ್ದ ಜಿಂಕೆ, ಕೃಷ್ಣಮೃಗ, ನರಿ, ಮುಂಗುಸಿ, ಕಾಡುಹಂದಿ, ಗೌಜುಗ ಸಏರಿದಂತೆ ಸುಮಾರು ೩೦ಕ್ಕೂ ಅಧಿಕ ವನ್ಯಜೀವಿಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರಷ್ಟೇ ಹೊರತಾಗಿ ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. … Read more

ಮಹಾರಾಷ್ಟ್ರ ಮುಖ್ಯಮಂತ್ರಿಗಳು ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬಾರದು: ಸಿಎಂ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360, ಬೆಂಗಳೂರು, ನ. 22: ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿಗಳು ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆನ್ನುವ ತೀರ್ಮಾನ ಮಾಡಲಾಗಿದೆ. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ದಾಖಲೆಗಳನ್ನು ತರಿಸಿ … Read more

ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ಸುದ್ದಿ360 ದಾವಣಗೆರೆ ನ.18:  ಇತ್ತೀಚೆಗೆ ನಡೆದ ವಿವಿಧ ಕಂಪನಿಗಳ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟೆಕ್ ಮಹೇಂದ್ರ ಕಂಪನಿಯ ವತಿಯಿಂದ ಐದು ವಿದ್ಯಾರ್ಥಿಗಳು, ಹೆಕ್ಸಾವೇರ್ ಕಂಪನಿ ವತಿಯಿಂದ ಮೂರು ವಿದ್ಯಾರ್ಥಿಗಳು ಮತ್ತು ಆಪ್ಟಂ ಸಲ್ಯೂಷನ್ ಕಂಪನಿ ವತಿಯಿಂದ ಬಯೋಟೆಕ್ನಾಲಜಿ ವಿಭಾಗದ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನೂ ಅನೇಕ ಕಂಪನಿಗಳು 2023ಕ್ಕೆ ಹೊರ ಹೋಗುವ ವಿದ್ಯಾರ್ಥಿಗಳಿಗೆ ಸರದಿಯಲ್ಲಿದ್ದು, ಎಲ್ಲಾ ಅರ್ಹ … Read more

ಮಾಜಿ ಸಿಎಂ ಸಿದ್ಧರಾಮಯ್ಯಗೆ ಯಾವ ಕ್ಷೇತ್ರವೂ ಸುರಕ್ಷಿತವಾಗಿಲ್ಲ: ಸಚಿವ ಗೋವಿಂದ ಕಾರಜೋಳ ಲೇವಡಿ

ಚಾಮುಂಡೇಶ್ವರಿ ಕ್ಷೇತ್ರದ ಜನರು ಕೈಬಿಟ್ಟಾಗ ಬಾದಾಮಿ ಜನರು ಸಿದ್ದರಾಮಯ್ಯ ಕೈ ಹಿಡಿದಿದ್ದರು. ಅವರ ಸೇವೆ ಮಾಡುವುದು ಬಿಟ್ಟು ಈಗ ಬೇರೆ ಕ್ಷೇತ್ರ ಕ್ಕೆ ಹೋಗುತ್ತಿದ್ದಾರೆ. ಕೋಲಾರದಲ್ಲಿ ಸ್ಥಿತಿ ಸರಿಯಿಲ್ಲ, ಅಲ್ಲಿ ಮುನಿಯಪ್ಪನವರನ್ನು ಕಾಂಗ್ರೆಸ್ ನವರೇ ಸೋಲಿಸಿದ್ದಾರೆ. ಈ ಸರತಿ ಎಲ್ಲರಿಗೂ ಬರಲಿದೆ ಎಂದು ಹೇಳಿದ ಅವರು, ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಮರೆಯಬಾರದು’ .

ಹಾಲಿನ ದರ ಪರಿಷ್ಕರಣೆ: ನ. 20 ರ ನಂತರ ತೀರ್ಮಾನ – ಸಿಎಂ ಬೊಮ್ಮಾಯಿ

ಸುದ್ದಿ360 ಕಲಬುರಗಿ (ಸೇಡಂ) ನ.14: ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು. ಅವರು ಇಂದು ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು … Read more

ಹರಿಪ್ರಿಯ ಮೂಗೇರಿದ ಮೂಗುತಿ

ಸುದ್ದಿ360: ಮಂತ್ರಘೋಷಗಳ ಹಿಮ್ಮೇಳದಲ್ಲಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವೀಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಸೀರೆಯುಟ್ಟು ಸೂಜಿಗೆ ಮುಖವೊಡ್ಡಿರುವ ಹರಿಪ್ರಿಯಾ ಸಂಪ್ರದಾಯಿಕ ಶೈಲಿಯಲ್ಲಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚುವಾಗ ಆದ ನೋವಿಗೆ ಕಣ್ಣಾಲಿಗಳು ತುಂಬಿವೆಯಾದರೂ ಮಂದಹಾಸ ಬೀರಿರುವ ಹರಿಪ್ರಿಯಾ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. “ಬದುಕಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೇನೆ. ಆದರೆ ಅದ್ಯಾವುದೂ ರಿಯಲ್ ಆಗಿರಲಿಲ್ಲ. ಈಗ ನಿಮ್ಮೆದುರು ಕಾಣುತ್ತಿರುವುದು ಮಾತ್ರ ರಿಯಲ್. ನನಗಿದು ಬಹಳ ಖುಷಿ … Read more

error: Content is protected !!