ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಿದ ಖ್ಯಾತಿ ನೆಹರು  ಅವರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ನವೆಂಬರ್ 14: ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಿರುವ ಖ್ಯಾತಿ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಸಲ್ಲುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ಭಾರತದ ಪ್ರಥಮ ಪ್ರಧಾನಿ ಪಂಡಿತ್ ನೆಹರು ಅವರ ಜನ್ಮದಿನದ ಅಂಗವಾಗಿ ವಿಧಾನ ಸೌಧದ ಮುಂಭಾಗದಲ್ಲಿರುವ ಅವರ  ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ಕಾಣುತ್ತಿದ್ದ ನಮ್ಮ ರಾಷ್ಟ್ರದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ … Read more

ಕೇಸರಿ ಕಂಡರೆ ಏಕೆ ಸಿಟ್ಟು? ಎಲ್ಲದರಲ್ಲೂ ರಾಜಕಾರಣ ಸಲ್ಲದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ನವೆಂಬರ್ 14: ಎಲ್ಲದರಲ್ಲೂ ರಾಜಕಾರಣ ಮಾಡುವುದು ಬಹಳ ಕೆಳ ಮಟ್ಟದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ.  ಕೇಸರಿ ಕಂಡರೆ ಏಕೆ ಸಿಟ್ಟು? ಸ್ವಾಮಿ ವಿವೇಕಾನಂದರ ಹೆಸರಿನಲ್ಲಿಯೇ ಶಾಲಾ ಕೊಠಡಿಗಳನ್ನು  … Read more

ಎಪಿಸಿ ಕಪ್ ಚದುರಂಗ ಸ್ಪರ್ಧೆ ತನುಶ್ ಜೆ ಗೆ ಪ್ರಥಮ ಸ್ಥಾನ

ಸುದ್ದಿ360 ದಾವಣಗೆರೆ ನ. 13: ನಗರದ ವಿನಾಯಕ ಬಡಾವಣೆ ಯಲ್ಲಿರುವ ಆನಂದ್ ಪಿಯು ಕಾಲೇಜ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿತ್ತು  ಆನಂದ್ ಪಿಯು ಕಾಲೇಜಿನ ಅಧ್ಯಕ್ಷರಾದ ಆನಂದ್  ಚದುರಂಗ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಬುದ್ಧಿವಂತಿಕೆ ಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿಯಾಗಲಿದೆ. ಇದು ಬುದ್ಧಿವಂತರ ಆಟ ಅಲ್ಲ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಆಟ ಎಂದರು. ಇದೇ ರೀತಿ ಪ್ರತಿ ವರ್ಷವೂ ಎಪಿಸಿ ಕಪ್ ಚದುರಂಗ ಸ್ಪರ್ಧೆಯನ್ನು  … Read more

ಇಂದು, ಮುಂದು ಎಂದೆಂದೂ ಜನರೇ ನಮ್ಮ ಮಾಲೀಕರು : ಗಡಿಗುಡಾಳ್ ಮಂಜುನಾಥ್

“ಮನೆಯ ಬಾಗಿಲಿಗೆ ನಿಮ್ಮ ಸೇವಕ” ವಿಶೇಷ ಅಭಿಯಾನ ಸುದ್ದಿ360 ದಾವಣಗೆರೆ, ನ.13: ಈ ಹಿಂದೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ ವಿನೂತನ ಕಾರ್ಯಕ್ರಮವನ್ನು ರೂಪಿಸಿ ವಾರ್ಡ್‍ ನಿವಾಸಿಗಳ ಮನಗೆದ್ದಿದ್ದ ಮಹಾನಗರ ಪಾಲಿಕೆಯ ಎಂಸಿಸಿ ಬಿ ಬ್ಲಾಕ್ ನ ಸದಸ್ಯ ಗಡಿಗುಡಾಳ್ ಮಂಜುನಾಥ್ ಈಗ ಪ್ರತಿ ಭಾನುವಾರ ಒಂದು ಮುಖ್ಯರಸ್ತೆಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕಷ್ಟ ಕಾರ್ಪಣ್ಯ ವಿಚಾರಿಸಲು ಮುಂದಾಗಿದ್ದಾರೆ. “ಮನೆಯ ಬಾಗಿಲಿಗೆ ನಿಮ್ಮ ಸೇವಕ” ಕಾರ್ಯಕ್ರಮ ಇಂದು ಎಂಸಿಸಿ ಬಿ … Read more

ನರಬಲಿಗಾಗಿ 2 ತಿಂಗಳ  ಮಗು ಅಪಹರಣ : ಪೊಲೀಸರ ಕಾರ್ಯಾಚರಣೆಯಿಂದ ಮಗು ರಕ್ಷಣೆ

ಸುದ್ದಿ360 ಹೊಸದಿಲ್ಲಿ ನ.13: ಮೃತಪಟ್ಟಿದ್ದ ವ್ಯಕ್ತಿಯನ್ನು ಬದುಕಿಸಲು ಎರಡು ತಿಂಗಳ ಮಗುವೊಂದನ್ನು ನರಬಲಿ ಕೊಡುವ ಪ್ರಯತ್ನ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿರುವುದು ಬೆಳಕಿಗೆ ಬ೦ದಿದೆ. ಮೂಢನಂಬಿಕೆಗೆ ಗಂಟುಬಿದ್ದ ಆರೋಪಿ ಮಹಿಳೆ ಇತ್ತೀಚಿಗೆ ಮೃತಪಟ್ಟಿದ್ದ ಅಪ್ಪನನ್ನು ಬದುಕಿಸಲು ನರಬಲಿ ಕೊಡಲು ಮುಂದಾಗಿದ್ದಳು ಎಂದು ಪೊಲೀಸರ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.  ಸತ್ತ ಅಪ್ಪ ಮರಳಿ ಬದುಕಬೇಕೆಂದರೆ ಮಗುವೊಂದರ ನರಬಲಿಯಾಗಬೇಕು ಎಂದು ಜ್ಯೋತಿಷಿ ಹೇಳಿದ್ದರಂತೆ. ಪೊಲೀಸರ ಯಶಸ್ವೀ ಕಾರ್ಯಾಚರಣೆ ಪೊಲೀಸರ ಯಶಸ್ವೀ ಕಾರ್ಯಾಚರಣೆಯಿಂದ ಮಗುವನ್ನು ರಕ್ಷಿಸಲಾಗಿದೆ. ನರಬಲಿಗಾಗಿ ಮಗುವನ್ನು ಅಪಹರಿಸಿದ್ದ ಮಹಿಳೆಯನ್ನು … Read more

ಬಿಪಾಶ ಬಸುಗೆ ತಾಯ್ತನದ ಸಂಭ್ರಮ: ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬೆಡಗಿ

ಸುದ್ದಿ360 ಮುಂಬಯಿ: ಬಾಲಿವುಡ್ ಖ್ಯಾತ ನಟಿ ಬಿಪಾಶ ಬಸು ಶನಿವಾರ ಮುಂಬೈಯ ಖಾಸಗಿ ಆಸ್ಪತ್ರೆ ಒಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಮಗುವಿಗೆ “ದೇವಿ ಬಸು ಸಿಂಗ್ ಗ್ರೋವರ್” ಎಂದು ಹೆಸರಿಡಲಾಗಿದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ಬಿಪಾಶ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ದಂಪತಿ ಶನಿವಾರ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ಈ ಖುಷಿ ಸಮಾಚಾರವನ್ನು ಸ್ಟಾರ್ ದಂಪತಿ … Read more

ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಎಫ್ಐಆರ್!

 ಸುದ್ದಿ360 ಸಿನೆಮಾ: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ ಪವನ್ ಕಲ್ಯಾಣ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ಒಂದನ್ನು ದಾಖಲಿಸಿದ್ದಾರೆ. ಹಾಗಂತ ಪವನ್ ಏನು ಅಪರಾಧ ಮಾಡಿಲ್ಲ. ಆದರೆ ಕಾರಿನ ಮೇಲೆ ಸ್ಟಂಟ್ ಮಾಡಿದ್ದಕ್ಕಾಗಿ ಪವನ್ ಕಲ್ಯಾಣ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿ ಸ್ಟಂಟ್ಗಳನ್ನು ಮಾಡಬೇಡಿ ಎಂದು ಯುವಜನತೆಗೆ, ಸಮಾಜಕ್ಕೆ ತಿಳಿ ಹೇಳುವ ಸ್ಥಾನದಲ್ಲಿರುವ ಒಬ್ಬ ಸ್ಟಾರ್ ಸೆಲೆಬ್ರಿಟಿ ಆಗಿದ್ದುಕೊಂಡು ಪವನ್ ಕಲ್ಯಾಣ್ ಈ ರೀತಿ ಮಾಡಿರುವುದು ಬೇಜವಾಬ್ದಾರಿತನ ಎಂದು … Read more

ನ.13ರಂದು ದಾವಣಗೆರೆ ಜಿಲ್ಲಾ ಸಿಪಿಐ ಸರ್ವ ಸದಸ್ಯರ ಸಭೆ

ಸುದ್ದಿ360 ದಾವಣಗೆರೆ ನ.12: ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಸರ್ವ ಸದಸ್ಯರ ಸಭೆಯು ನವೆಂಬರ್ 13ರ ಭಾನುವಾರ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ದಾವಣಗೆರೆ ಈರುಳ್ಳಿ ಮಾರ್ಕೆಟ್ ರಸ್ತೆಯಲ್ಲಿರುವ ಶೇಖರಪ್ಪ ನಗರದ ಕಾಂ. ಹೆಚ್ ಅಡಿವೆಪ್ಪ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಸಿಪಿಐ ಸರ್ವ ಸದಸ್ಯರ ಸಭೆಯನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಉದ್ಘಾಟಿಸಲಿದ್ದಾರೆ. ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಉಸ್ತುವಾರಿಗಳಾದ ಕಾಂ. … Read more

ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಅಜಯ್ ದ್ವಿತೀಯ

ಸುದ್ದಿ360 ಶಿವಮೊಗ್ಗ ನ. 12: ಶಿವಮೊಗ್ಗದ ಆಕ್ಸ್ ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ  ಕರಾಟೆ ತರಬೇತಿ ದಾರರಾದ  ಸನ್ ಸೈ  ಶ್ರೇಯಸ್ ರವರ ವಿದ್ಯಾರ್ಥಿ ಯಾದ  ಅಜಯ್ ಮಂಗಳೂರಿನ ಕಟೀಲಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 60 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು  ಪಡೆದಿದ್ದಾರೆ. ವಿಜೇತ ಕ್ರೀಡಾಪಟುವಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿದ್ದಾರೆ.

ಅಯೊಧ್ಯೆಗೆ ಸೀತೆಯ ದೊಡ್ಡ ನಮಸ್ಕಾರ !?

ಹೆಣ್ಣಿನ ಕ್ರಿಯಾಶೀಲತೆ ಸಹಿಸದ ಗಂಡಿನಿಂದ ದೌರ್ಜನ್ಯ: ಬಂಡಾಯ ಸಾಹಿತಿ ಡಾ. ಕಾಳೇಗೌಡ ಅಭಿಮತ

error: Content is protected !!