ನಾಡಹಬ್ಬ ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಂಸದ ಬಿ.ವೈ.ರಾಘವೇಂದ್ರ ಕರೆ

ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ಸುದ್ದಿ360 ಶಿವಮೊಗ್ಗ, ಸೆ.15: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಯಸ್ಸಿನ ಇತಿ-ಮಿತಿ ಇಲ್ಲ. ಮನಸ್ಸು ಉಲ್ಲಸಿತವಾಗಿ, ಸಂತಸದಿಂದಿರಲು ಕ್ರೀಡೆ ಸಹಕಾರಿಯಾಗಿದ್ದು, ಎಲ್ಲರೂ ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಲಾಗಿದ್ದ 2022-23 ನೇ … Read more

ರಾಜ್ಯಮಟ್ಟದ ಅಬಾಕಸ್‌ ಸ್ಪರ್ಧೆಯಲ್ಲಿ ಸಿ. ಪ್ರಜ್ಞಾ ಚಾಂಪಿಯನ್

ಸುದ್ದಿ360 ದಾವಣಗೆರೆ, ಸೆ.15: ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿನಿ ಸಿ. ಪ್ರಜ್ಞಾ ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಗಂಗಾವತಿಯಲ್ಲಿ  ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯಲ್ಲಿ  ಭಾಗವಹಿಸಿ ಚಾಂಪಿಯನ್ ಶಿಪ್ ಪಡೆದಿದ್ದಾರೆ. ರಾಷ್ಟ್ರೋತ್ಥಾನ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನಿಂದ ಅಭಿನಂದಿಸಲಾಗಿದೆ.

ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಸುದ್ದಿ360 ರಾಮನಗರ, ಸೆ.15: ಹಾಸನ ಜಿಲ್ಲೆಯ ಹಿರಿಸಾವೆ ಹೋಬಳಿಯ ಪುರ್ ಗ್ರಾಮದ ಯುವಕ ಸೆ.14ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇದೀಗ ಮಾಗಡಿಯ ಜಡೆದೇವರ ಮಠದ ಪಕ್ಕದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕ ದರ್ಶನ್ (19) ಮಾಗಡಿಯ ಜಡೆದೇವರ ಮಠದ ವಿದ್ಯಾರ್ಥಿಯಾಗಿದ್ದು, ಯುವಕನ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿತ್ತು. ಇಂದು ಮುಂಜಾನೆ ಮಠದ ಪಕ್ಕದಲ್ಲೇ ಇರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ದರ್ಶನ್, ಜಡೇದೇವರ ಮಠದಲ್ಲಿ ಸಂಸ್ಕೃತ ಕಲಿಕೆಯ ವಿದ್ಯಾರ್ಥಿಯಾಗಿದ್ದನು ಎಂದು ಹೇಳಲಾಗಿದೆ. ಮೃತ ದೇಹವನ್ನು ಮಾಗಡಿಯ ಅಗ್ನಿಶಾಮಕ … Read more

ಜಿಎಂಐಟಿ ಉದ್ಯೋಗಾಧಿಕಾರಿಗೆ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ

ಸುದ್ದಿ360 ದಾವಣಗೆರೆ, ಸೆ.15: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಮುಂಬೈ ಮೂಲದ ಸ್ಕಿಲ್ ಅಕಾಡೆಮಿ ಸಂಸ್ಥೆಯಿಂದ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಈ ಸದಸ್ಯತ್ವದಿಂದ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ, ಹಲವು ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬಹುದಾಗಿದೆ ಇದಲ್ಲದೆ ವಿದ್ಯಾರ್ಥಿಗಳಿಗೆ ಕಂಪನಿಯ ಸಂದರ್ಶನ ಎದುರಿಸುವ ತಂತ್ರಗಳು ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಜ್ಞಾನ ನೀಡಬಹುದಾಗಿದೆ. … Read more

ಟ್ರೈನರ್‍ಗಳಿಂದ ಅರ್ಜಿ ಆಹ್ವಾನ

ಸುದ್ದಿ360 ಶಿವಮೊಗ್ಗ, ಸೆ.15: ಯುವ ಸಬಲೀಕರಣ ಇಲಾಖೆ ವತಿಯಿಂದ ನಿರ್ವಹಣೆ ಮಾಡುತ್ತಿರುವ ಶಿವಮೊಗ್ಗ ಜಿಲ್ಲಾ ಕ್ರೀಡಾ ಶಾಲೆ/ವಸತಿ ನಿಲಯಗಳಲ್ಲಿನ ಕ್ರೀಡಾಪಟುಗಳಿಗೆ ಹಾಕಿ, ಕುಸ್ತಿ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ತರಬೇತಿ ನೀಡಲು ನುರಿತ ಟ್ರೈನರ್‍ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ ಹಾಕಿ, ಕುಸ್ತಿ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ಎನ್‍ಐಎಸ್ ಸರ್ಟಿಫಿಕೇಟ್ ಕೋರ್ಸ್ ಅಥವಾ ಸರ್ಕಾರದಿಂದ ಅಂಗೀಕೃತ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಈ ಕ್ರೀಡೆಗಳಲ್ಲಿ ಅಂತರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾದವರು ಅರ್ಜಿ ಸಲ್ಲಿಸಬಹುದು. ಕನಿಷ್ಟ 21 … Read more

ಎಸ್ಎಸ್ಎಂ@55 ಹುಟ್ಟುಹಬ್ಬದ  ಅಂಗವಾಗಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ

ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು … Read more

ನೆಹರೂ ಒಳಾಂಗಣ ಕ್ರೀಡಾಂಗಣದ ವಿಷಯದಲ್ಲಿ ಕ್ರೀಡಾಧಿಕಾರಿಗಳ ಧೋರಣೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿ360 ಶಿವಮೊಗ್ಗ, ಸೆ. 14: ಶಿವಮೊಗ್ಗ ನಗರದಲ್ಲಿರುವ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆಯನ್ನು ಖಂಡಿಸಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ನೀಡಲು ಅನುವು ಮಾಡಿಕೊಡಬೇಕು ಎಂದು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 4ಶಟಲ್ ಕೋರ್ಟ್ ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದೆ ಎಂಬ ವಿಷಯವನ್ನೇ ನೆಪವಾಗಿಟ್ಟುಕೊಂಡು ಕ್ರೀಡಾಧಿಕಾರಿಯವರು ಬಹು ಬಳಕೆಗಾಗಿ ಸ್ಥಾಪಿಸಲ್ಪಟ್ಟ ನೆಹರು ಒಳಾಂಗಣ … Read more

ದಾವಣಗೆರೆ ಪೊಲೀಸರಿಂದ ನಾಲ್ಕು ಅಂತರ್ ಜಿಲ್ಲಾ ಕಳ್ಳರ ಬಂಧನ

ಸುದ್ದಿ360 ದಾವಣಗೆರೆ, ಸೆ.14: ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಆರೋಪಿಗಳಿಂದ 4,87,350 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ 6ನೇ ಕಲ್ಲು ಮತ್ತು ತುರ್ಚಗಟ್ಟ ಗ್ರಾಮದಲ್ಲಿ ರಾತ್ರಿ ಕನ್ನಕಳವು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಆ.28 ರಂದು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎಎಸ್‌ಪಿ ಕನಿಕಾ ಸಿಕ್ರಿವಾಲ್ … Read more

ಇಲ್ಲಿ ಚಿಮ್ಮುವ ನೀರಿಗೆ ಸುಂಕ ಕಟ್ಟೋರು ಯಾರು. . .?

ಸುದ್ದಿ360, ದಾವಣಗೆರೆ: ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ ನಿಜ ಆದರೆ ಇಲ್ಲಿ ಚಿಮ್ಮುವ ನೀರಿಗೆ ಯಾರ ಅಪ್ಪಣೆಯಾದರೂ ಇರಬೇಕಲ್ಲವಾ. . . .? ಅಪ್ಪಣೆ ಇರದಿದ್ದರೂ ಬೇಜಾವಾಬ್ದಾರಿ ಅಂತೂ ಇದ್ದೇ ಇದೆ ಎಂಬುದು ನಾಗರೀಕರು ಮಾತಾಡಿಕೊಳ್ಳುವ ಕಟು ಸತ್ಯ. ಈ ಮೂಲಕ ಇಲ್ಲಿ ವರದಿ ಮಾಡಲು ಹೊರಟಿರುವ ವಿಷಯ ಏನು ಅಂತೀರಾ. . . ನಗರದ ದೇವರಾಜು ಅರಸು ಬಡಾವಣೆ ಎ ಬ್ಲಾಕ್. ಇದು ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆಯ ಪಕ್ಕದ ಸರ್ವಿಸ್ ರಸ್ತೆಯಾಗಿದ್ದು, ಎಸ್ ಪಿ … Read more

ಹಿಂದಿ ಹೇರಿಕೆ ವಿರುದ್ಧ ನಾಳೆ ಡಿಡಿಪಿಐ ಕಚೇರಿ ಮುಂದೆ ಕರವೇ ಧರಣಿ (ಸೆ.14)

ಸುದ್ದಿ360 ದಾವಣಗೆರೆ, ಸೆ.13: ಹಿಂದಿ ಹೇರಿಕೆ ವಿರುದ್ಧ ಸೆ.14ರ ಬುಧವಾರ ಇಲ್ಲಿನ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿ ಎದುರು ಧರಣಿ ಹಮ್ಮಿಕೊಂಡಿರುವುದಾಗಿ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕ ಹಿಂದಿ ಹೇರಿಕೆ ವಿರುದ್ಧ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಕರವೇ ಯಾವುದೇ ಭಾಷೆಯನ್ನೂ ವಿರೋಧಿಸುವುದಿಲ್ಲ ಆದರೆ ಸರಕಾರ ಜನರ ತೆರಿಗೆ ಹಣ ಬಳಸಿ ಒಂದು ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು, ಕನ್ನಡ ನಾಡಿನಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರುವುದು … Read more

error: Content is protected !!