‘ಸಿ.ಟಿ. ರವಿ’ಯವರಿಗೆ ‘ಲೂಟಿ ರವಿ’ ಎಂದದ್ದು ಸಿದ್ಧರಾಮಯ್ಯರಲ್ಲ. . .

ಸುದ್ದಿ360 ದಾವಣಗೆರೆ, ಸೆ.13: ಸಿ .ಟಿ .ರವಿಯವರಿಗೆ ‘ಲೂಟಿ ರವಿ’ ಎಂಬ ಅನ್ವರ್ಥನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ. ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ರವಿಯವರನ್ನು ಲೂಟಿ ರವಿ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ‌ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕೀಳು‌ ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಗೆ ಪ್ರದರ್ಶಿಸಿದ್ದಾರೆ ಎಂದು ಯುವ ಕಾಂಗ್ರೆಸ್ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಸಿಟಿ ರವಿಯವರ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರ … Read more

ಚಿಂತನಾ ಶಕ್ತಿ ಬೆಳವಣಿಗೆಗೆ ಶ್ರದ್ಧೆ, ಏಕಾಗ್ರತೆ , ಪರಿಶ್ರಮಗಳು  ಅತ್ಯಗತ್ಯ: ಜಿ ಆರ್ ಷಣ್ಮುಖಪ್ಪ

ಲಯನ್ಸ್ ಕ್ಲಬ್ ನಿಂದ ವಿದ್ಯಾರ್ಥಿಗಳಿಗೆ  ಕನ್ನಡ ರತ್ನಕೋಶ ವಿತರಣೆ ಸುದ್ದಿ360 ದಾವಣಗೆರೆ, ಸೆ.13: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆ, ಏಕಾಗ್ರತೆ, ಸತತ ಪರಿಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಆಗ ಅವರ ಚಿಂತನಾ ಶಕ್ತಿ ಬೆಳವಣಿಗೆಯಾಗುತ್ತದೆ ಅದು ಅವರ ಭವಿಷ್ಯವನ್ನು ಕಟ್ಟಿಕೊಡುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ  ಜಿ ಆರ್ ಷಣ್ಮುಖಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅತ್ತಿಗೆರೆಯ ಪಟೇಲ್ ನಂದಪ್ಪ ಹೊರಟ್ಟಿಗೌಡ್ರು ಕಲ್ಲಪ್ಪ ಪ್ರೌಢ ಶಾಲೆಯಲ್ಲಿ ದಾವಣಗೆರೆಯ ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ  ಕನ್ನಡ ರತ್ನಕೋಶ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ … Read more

ಮಠಾಧೀಶರು ಮದುವೆಯಾಗುವುದು ಸೂಕ್ತ: ಶ್ರೀ ಪ್ರಣವಾನಂದ ಸ್ವಾಮೀಜಿ

ಸುದ್ದಿ360, ದಾವಣಗೆರೆ ಸೆ.12: ಭಾರತದ ಸನಾತನ ಹಿಂದೂ ಧರ್ಮ ಪರಂಪರೆಯಲ್ಲಿ ಪರಿಪೂರ್ಣ ಸನ್ಯಾಸ ಎಂಬುದು ಎಂದಿಗೂ ಇಲ್ಲವೇ ಇಲ್ಲ. ಸ್ವಾಮೀಜಿಗಳು ವಿವಾಹವಾಗಿ, ಸಂಸಾರದೊಂದಿಗೆ ಮಠ ನಡೆಸಿಕೊಂಡು ಹೋಗುವುದು ಸೂಕ್ತ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಶ್ರೀಗಳು, ಈ ಹಿಂದೆ ವಿಶ್ವಗುರು ಬಸವಣ್ಣನವರ ಆದಿಯಾಗಿ ಬಹುತೇಕ ಗುರುಗಳು ಸಂಸಾರಿಗಳಾಗಿದ್ದರು. ಶಂಕರಾಚಾರ್ಯರು ಒಬ್ಬ ರಾಜನೊಳಗೆ ಪರಕಾಯ ಪ್ರವೇಶ ಮಾಡಿ … Read more

ವಿದ್ಯುತ್‌ ತಿದ್ದುಪಡಿ ಮಸೂದೆ ಜಾರಿಗೆ ವಿರೋಧಿಸಿ ರೈತರ ಪ್ರತಿಭಟನೆ – ಮನವಿ

ಸುದ್ದಿ360, ದಾವಣಗೆರೆ ಸೆ.12: ರೈತರ, ಗ್ರಾಹಕರ ವಿದ್ಯುತ್‌ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಾವಣಗೆರೆ  ಜಿಲ್ಲಾ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು. ನಗರದ ಪಿಬಿ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಇರುವ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಚೇರಿಯಿಂದ ಬೈಕ್ ನಲ್ಲಿ ಪ್ರತಿಭಟನಾ ರ್ಯಾಲಿ … Read more

ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್- ಸೌಜನ್ಯಗೆ ದ್ವಿತೀಯ ಸ್ಥಾನ

ಸುದ್ದಿ360, ದಾವಣಗೆರೆ ಸೆ.12: ಇಂದು ಕಣ್ಣೂರು ಸ್ಪೋರ್ಟ್ಸ್ ಅಕಾಡೆಮಿ ರಾಣೇಬೆನ್ನೂರ ನಲ್ಲಿ ಏರ್ಪಡಿಸಲಾಗಿದ್ಧ ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಸೌಜನ್ಯ ವೈ ಎಮ್ ದ್ವಿತೀಯ ಸ್ಥಾನ  ಪಡೆದಿದ್ದಾರೆ. 12 ವರ್ಷದ ಒಳಗಿನ ವಯೋಮಿತಿಯಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನರಾಗಿರುವ  ದಾವಣಗೆರೆಯ ವೈ ಎಮ್. ಸೌಜನ್ಯಗೆ ಕರ್ನಾಟಕ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅಭಿನಂಸಿದ್ದಾರೆ.

ದಾವಣಗೆರೆ: ಗಾಂಜಾ ಮಾರಾಟ ಮಾಡುತ್ತಿದ್ದಾತನ ಬಂಧನ

ಸುದ್ದಿ360 ದಾವಣಗೆರೆ, ಸೆ.11: ಜಿಲ್ಲೆಯ ಹರಿಹರ ನಗರದ ಮನೆಯೊಂದರಲ್ಲಿ ಅಕ್ರಮ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಪೊಲೀಸರು ಆತನಿಂದ 14 ಸಾವಿರ ಮೌಲ್ಯದ 280 ಗ್ರಾಂ ಗಾಂಜಾ ಸೊಪ್ಪು, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಹರಿಹರ ನಗರದ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡಲಾಗಿತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ … Read more

ನಾರಾಯಣ ಗುರುವಿಗೆ ಸಿಎಂ ಅಪಮಾನ – ಶೀಘ್ರದಲ್ಲೇ ಬೆಂಗಳೂರು ಪಾದಯಾತ್ರೆ

ಸುದ್ದಿ360 ದಾವಣಗೆರೆ, ಸೆ.11: ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸರಕಾರದಿಂದ ನಿರಂತರವಾಗಿ ಅಪಮಾನ ಆಗುತ್ತಿದೆ. ಇದನ್ನು ಖಂಡಿಸಿ, ಮುಂದಿನ 10 ದಿನಗಳ ಒಳಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಚಿಂತನೆ ಇದೆ ಎಂದು ಚಿತ್ತಾಪುರ ತಾಲೂಕು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಬೇಕಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಮೂಲಕ … Read more

ಆಧ್ಯಾತ್ಮದೆಡೆ ಸಾಗಲು ಯೋಗವೇ ಮಾರ್ಗ: ಡಾ. ವಿದ್ಯಾ ಹಿರೇಮಠ

ನೋಬೆಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಪ್ರಶಸ್ತಿ ಪ್ರದಾನ ಸಮಾರಂಭ ಸುದ್ದಿ360 ದಾವಣಗೆರೆ, ಸೆ.10: ವ್ಯಕ್ತಿಯು ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇಮವನ್ನು ಪಡೆಯಲು ಯೋಗಾಭ್ಯಾಸ ಸೂಕ್ತ ಸಾಧನವಾಗಿದೆ ಎಂದು ಮಂಗಳೂರಿನ ಯೆನಾಪೋಯಾ ಪ್ರಕೃತಿ ಚಿಕಿತ್ಸಾ ಯೋಗ ಕಾಲೇಜಿನ ಉಪನ್ಯಾಸಕಿ ಡಾ. ವಿದ್ಯಾ ಹಿರೇಮಠ ಅಭಿಪ್ರಾಯಪಟ್ಟರು. ನಗರದ ಅರುಣ ಚಿತ್ರಮಂದಿರ ಬಳಿ ಇರುವ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸಮುದಾಯ ಭವನದಲ್ಲಿ ಶನಿವಾರ ಸಪ್ತರಿಷಿ ಯೋಗಾಸನ ಸ್ಪೋರ್ಟ್ಸ್ ಅಕಾಡೆಮಿ ಹಮ್ಮಿಕೊಂಡಿದ್ದ ನೋಬೆಲ್ ವರ್ಲ್ಡ್ ರೆಕಾರ್ಡ್ ಯೋಗಾಸನ ಪ್ರಶಸ್ತಿ … Read more

ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ. ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ … Read more

ಎಸಿಬಿ ರದ್ದು: ಬಲಗೊಂಡ ಲೋಕಾಯುಕ್ತ

ಸುದ್ದಿ360 ಬೆಂಗಳೂರು, ಸೆ.09:ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈ ಹಿಂದೆ ನೀಡಿದ್ದ ಅಧಿಕಾರಗಳನ್ನು ಮರುಸ್ಥಾಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಲಾಗಿದೆ. ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಪ್ರಕರಣಗಳು, ಬಾಕಿ ಉಳಿದಿರುವ ವಿಚಾರಣೆಗಳು, ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳು ಮತ್ತು ಖಾಸಗಿ ದೂರುಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!