ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಗೆ ಜಿಎಂಐಟಿ ಕಾಲೇಜಿನ ಎರಡು ತಂಡಗಳು

ಸುದ್ದಿ360 ದಾವಣಗೆರೆ ಆ.17: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಗೆ ನಗರದ ಜಿಎಂಐಟಿ ಕಾಲೇಜಿನ ಎರಡು ತಂಡಗಳು ಆಯ್ಕೆಯಾಗಿವೆ. ಇದೆ ಆಗಸ್ಟ್ 25 ಮತ್ತು 26 ರಂದು ಮಹಾರಾಷ್ಟ್ರದಲ್ಲಿ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ತಂಡಗಳು ಭಾಗವಹಿಸಲಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು 12 ತಂಡಗಳು ಮೊದಲನೇ ಸುತ್ತಿನಲ್ಲಿ ಭಾಗವಹಿಸಿ ಕೊನೆಗೆ ಎರಡು ಅತ್ಯುತ್ತಮ ತಂಡಗಳು ಗ್ರಾಂಡ್ ಫಿನಾಲೆಗೆ ಆಯ್ಕೆಯಾದವು ಎಂದು ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರು ಮತ್ತು ಸ್ಮಾರ್ಟ್ … Read more

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ ಕಾರ್ಯಕ್ರಮ

ಸುದ್ದಿ360 ದಾವಣಗೆರೆ ಆ.17: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆ.18ರ ಬೆಳಿಗ್ಗೆ 10.30ಕ್ಕೆ ನಗರದ ಶ್ರೀಡಿ.ದೇವರಾಜ ಅರಸು ಬಡಾವಣೆಯ ಸಿ ಬ್ಲಾಕಿನಲ್ಲಿ ಇರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪಿತ ಬ್ರಹ್ಮಾಕುಮಾರಿ, ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಸಾನಿಧ್ಯ ವಹಿಸುವರು. ದಾವಣಗೆರೆಯ ಬ್ರಹ್ಮಾ … Read more

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಬಿ ಎಸ್ ವೈ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸ

ಸುದ್ದಿ360 ಬೆಂಗಳೂರು ಆ.17: ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ಸಭೆಯ ಸದಸ್ಯರಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಬಿಜೆಪಿಯ ಅತ್ಯಂತ ಉನ್ನತ ಎನಿಸಿರುವ ಸಂಸದೀಯ ಮಂಡಳಿಗೆ ತಮ್ಮನ್ನು  ನೇಮಕ ಮಾಡುವುದರ ಮೂಲಕ ಪಕ್ಷ ತಮಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೆ ಸಿಎಂ ಅವರು ಕರೆ … Read more

ಎಫ್ ಆರ್ ಪಿ ದರ ಪರಿಷ್ಕರಿಸುವಂತೆ ಆಗ್ರಹಿಸಿ,  ಕಬ್ಬುಬೆಳೆಗಾರರಿಂದ ರಸ್ತೆ ತಡೆ – ಮನವಿ

ಸುದ್ದಿ360 ದಾವಣಗೆರೆ, ಆ.12: ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿರುವ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಷ್ಕರಿಸುವಂತೆ ಆಗ್ರಹಿಸಿದ ಕಬ್ಬುಬೆಳೆಗಾರರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಇಂದು ರಸ್ತೆ ತಡೆ ನಡೆಸಿದರು. ದಾವಣಗೆರೆ ಜಿಲ್ಲಾ ಪಂಚಾಯತಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಬ್ಬು ಬೆಳೆಗಾರರು ತಸ್ತೆ ತಡೆ ನಡೆಸಿದರು. ಈ ವೇಳೆ ಮಾತನಾಡಿದ ತೇಜಸ್ವಿ ವಿ. ಪಟೇಲ್ ಕಳೆದ ಸಾಲಿನಲ್ಲಿ ರೂ. 2900  ಇದ್ದ ಎಫ್‌ಆರ್‌ಪಿಯನ್ನು 3050ಕ್ಕೆ … Read more

ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ – ಪೊಲೀಸ್ ಗೌರಗಳೊಂದಿಗೆ ಅಂತ್ಯಕ್ರಿಯೆ

ಸುದ್ದಿ360 ಬೆಂಗಳೂರು, ಆ.12: ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತ ಪರಂಪರೆಯ ಮನೆತನದಿಂದ ಬಂದ ಸುಬ್ಬಣ್ಣ ಅವರು ಸುಗಮ ಸಂಗೀತ  ಹಾಗೂ ಚಲನ ಚಿತ್ರ ಹಿನ್ನಲೆ ಗಾಯಕರಾಗಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ‘ಕಾಡು ಕುದುರೆ ಓಡಿ ಬಂದಿತ್ತಾ’ ಗೀತೆಯು ಇಂದಿಗೂ ಅಭಿಮಾನಿಗಳು ಗುನುಗುನಿಸುವ ಹಾಡು. ಇದಕ್ಕಾಗಿ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿಗೂ ಭಾಜನರಾದರು. ಸಂತ ಶಿಶುನಾಳ ಶರೀಫರ ಗೀತೆಗಳಿಗೆ ದನಿಯಾಗಿ ಅವುಗಳನ್ನು … Read more

ಬಿಗ್ ಶಾಕಿಂಗ್ – ಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಸುದ್ದಿ360 ಬೆಂಗಳೂರು, ಆ.11: ತಮ್ಮ ಮೋಹಕ ಕಂಠದಿಂದ ನಾಡಿನಾದ್ಯಂತ ಜನಪ್ರಿಯರೂ, ಕರ್ನಾಟಕ ಸುಗಮ ಸಂಗೀತದ ಪ್ರಸಿದ್ಧ ಗಾಯಕರೂ ಆಗಿದ್ದ ಶಿವಮೊಗ್ಗ ಸುಬ್ಬಣ (83) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಕಾಡು ಕುದುರೆ ಓಡಿಬಂದಿತ್ತಾ… ಕೋಡಗನ ಕೋಳಿ ನುಂಗಿತ್ತಾ… ಬಿದ್ದಿಯಬ್ಬೇ ಮುದುಕಿ ಬಿದ್ದೀಯಬ್ಬೇ.. ಹಾಡುಗಳ ಮೂಲಕ ಮನೆಮಾತಾಗಿದ್ದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ ಇನ್ನಿಲ್ಲ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿ ಹೊಂದಿದ್ದರು. … Read more

ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಕರೆ ಸುದ್ದಿ360 ದಾವಣಗೆರೆ, ಆ. 10: ನಗರದ ನಿಂಚನ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತಿಚೆಗೆ ನಡೆದ 2022-23 ನೇ ಸಾಲಿನ ವಿದ್ಯಾರ್ಥಿಗಳಿಗೆ ಶಾಲಾ ಮಂತ್ರಿ ಮಂಡಲ ರಚನೆ ಗೆ ಚುನಾವಣೆ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಕ್ ಅಹಮದ್ ಶೇಕ್ ಮುಖ್ಯ ಅತಿಥಿ ಗಳಾಗಿ ಭಾಗವಾಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣಬೆಳಸಿಕೊಳ್ಳಬೇಕು ಮತ್ತು ಸತತ … Read more

ದಾವಣಗೆರೆ: ಖೋಟಾ ನೋಟು ಜಾಲ ಪತ್ತೆ – ಇಬ್ಬರ ಬಂಧನ

ಸುದ್ದಿ360 ದಾವಣಗೆರೆ, ಆ. 10: ನಗರದಲ್ಲಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಜಿಲ್ಲಾ ಡಿಸಿಆರ್ ಬಿ ಪೊಲೀಸರು ಪೊಲೀಸರು ಬಂಧಿಸಿ, ಆರೋಪಿಗಳಿಂದ 1,20,700 ಮುಖಬೆಲೆಯ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಇಂದು (ಆ.10) ದಾವಣಗೆರೆಯ ಯಲ್ಲಮ್ಮನಗರ 4ನೇ ಮೇನ್ 6ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ … Read more

ಆ.11ಕ್ಕೆ ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ, ಆ. 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ 11ರ ಬೆಳಗ್ಗೆ 10ಕ್ಕೆ ನಗರದ ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ತಿರಂಗದೊಂದಿಗೆ ಹೊರಡುವ … Read more

ಜಿಎಂಎಸ್ ಅಕ್ಯಾಡೆಮಿ: ಪದವೀಧರರ ದಿನಾಚರಣೆ – ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಕಲಿಯುವ ದಿನ ಬಂಗಾರದ ದಿನ: ಡಾ.ಕೆ. ಶಿವಶಂಕರ್ ಸುದ್ದಿ360 ದಾವಣಗೆರೆ, ಆ. 10: ವಿದ್ಯಾರ್ಥಿಗಳು ವಿನೂತನ ಶಿಕ್ಷಣದೊಂದಿಗೆ ಕ್ರಿಯಾಶೀಲರಾಗಿ ದೇಶಕ್ಕೆ ಗೌರವ ತಂದುಕೊಡುವ ಮಹಾ ಚೇತನವಾಗಿ ಬೆಳೆಯಬೇಕು. ಶಿಸ್ತು ಸಂಯಮ ಪರಿಶ್ರಮವೇ ಅವರ ಉನ್ನತ ದರ್ಜೆಗೆ ಕೊಂಡೊಯ್ಯುತ್ತದೆ ಎಂದು ಡಾ.ಕೆ. ಶಿವಶಂಕರ್ ಕುಲ ಸಚಿವರು, ಮೌಲ್ಯಮಾಪನ ವಿಭಾಗ ದಾ. ವಿ. ವಿ. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಗರದ ಜಿ.ಎಮ್.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮೂರು ವರ್ಷದ ಪದವಿಧರ ದಿನಾಚರಣೆ ಮತ್ತು ಅಲ್ಯೂಮಿನಿ ಕಾರ್ಯಕ್ರಮದಲ್ಲಿ … Read more

error: Content is protected !!