ದಾವಣಗೆರೆಯಲ್ಲಿ ಹರ್-ಘರ್-ತಿರಂಗಾ ಅಭಿಯಾನಕ್ಕೆ ಚಾಲನೆ

ಸುದ್ದಿ360 ದಾವಣಗೆರೆ ಆ.05: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘ ಇವರ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ‘ಹರ್-ಘರ್-ತಿರಂಗಾ’ ಮನೆ ಮನೆಯಲ್ಲೂ ರಾಷ್ಟ್ರೀಯ ತ್ರಿವರ್ಣ ಧ್ವಜ ಅಭಿಯಾನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ ಸಿಇಒ ಡಾ.ಎ.ಚನ್ನಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಜಿಲ್ಲೆಯ ಸಾರ್ವಜನಿಕರು ತಮ್ಮ ತಮ್ಮ ಮನೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಆಗಸ್ಟ್ … Read more

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜ ವಿತರಣೆ

ಸುದ್ದಿ360 ದಾವಣಗೆರೆ, ಆ.05: 75 ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಇಂದು ನಗರದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜವನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಕೆ ಜಿ ಶಿವಕುಮಾರ್, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಮಾಜಿ ವಿಪಕ್ಷನಾಯಕ ಎ ನಾಗರಾಜ್  ಅವರ ನೇತೃತ್ವದಲ್ಲಿ ನಗರದೆಲ್ಲೆಡೆ ಇಂದು ಸಾರ್ವಜನಿಕರಿಗೆ ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಮಲ್ಲಿಕಾರ್ಜುನ್ ಯೂತ್ ಕಾಂಗ್ರೆಸ್ ನ ಸಾಗರ್ ಎಲ್ ಎಂ ಎಚ್,  ಸತೀಶ್ … Read more

ಆ.6, 7ರಂದು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ

ಸುದ್ದಿ360 ದಾವಣಗೆರೆ, ಆ.05: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ 2021-22 ನೇ ಸಾಲಿನ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿ ಕಲಾ ವಿಚಾರ ಸಂಕಿರಣವನ್ನು ನಾಳೆ ಆ.6 ರ  ಶನಿವಾರ ಹಾಗೂ ಆ.7 ರ ಭಾನುವಾರದಂದು ದಾವಣಗೆರೆ ಸರ್ಕಾರಿ ಪೌಢಶಾಲಾ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಇಂದು ಅಕಾಡೆಮಿಯ ಸದಸ್ಯ ಸಂಚಾಲಕಿ ಲಕ್ಷ್ಮೀ ಮೈಸೂರು ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಲಲಿತಕಲಾ ಅಕಾಡೆಮಿಯಿಂದ ಇದೇ … Read more

ರಾಜಸ್ಥಾನ ಮೂಲದ ಸೈಬರ್ ವಂಚಕನನ್ನು ಬಂಧಿಸಿದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಆ.05:  ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯಿಂದ ಸಾರ್ವಜನಿಕರನ್ನು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಆರೋಪಿ ಅಮನ್ ತಿವಾರಿಯನ್ನು ದಾವಣಗೆರೆ ಸಿಇಎನ್, ಅಪರಾಧ ಠಾಣೆ ಪೊಲೀಸರು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು. ಈ ಕುರಿತು ಇಂದು ದಾವಣಗೆರೆ ಜಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯನ್ನು ಹೊಂದಿದ್ದ ರಕ್ಷಿತ್ ಬಿ. ಇವರು ಇದೇ ವರ್ಷ … Read more

ನ.1 ರಂದು ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಸುದ್ದಿ360 ಬೆಂಗಳೂರು, ಆ.05: ಚಿತ್ರನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ  ಸಂಘದ  ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ ನಂತರ  ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಶಸ್ತಿ ಕೊಡಮಾಡಲು ಸಿದ್ಧತೆಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸಲಾಗುವುದು.  ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಸಹ … Read more

ಸಿದ್ದು- ಡಿಕೆಶಿ ಕೈ ಎತ್ತಿದ್ದಾರೆ – ಯಾರು ಯಾರಿಗೆ ಚೂರಿ ಹಾಕ್ತಾರೋ ನೋಣೋಣ: ಎಚ್ ಡಿಕೆ

ಸುದ್ದಿ360 ರಾಮನಗರ, ಆ.4: ನಾನು ಕೈ ಎತ್ತಿಸ್ಕೊಂಡು ಬೆನ್ನಿಗೆ ಚೂರಿ ಹಾಕಿಸ್ಕೊಂಡಿದ್ದಾಯ್ತು. ಈಗ  ದಾವಣಗೆರೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ ಮುಂದೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ತಮ್ಮ ಕೈಗಳನ್ನು ಎತ್ತಿ ಜನರಿಗೆ ಒಗ್ಗಟ್ಟು ಪ್ರದರ್ಶಿಸಿರುವುದರ ಕುರಿತಾಗಿ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ … Read more

ಮೂವರು ಸಾಧಕರಿಗೆ ಎಚ್.ಡಿ. ದೇವೇಗೌಡ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ (ಆ.7ಕ್ಕೆ)

ಸುದ್ದಿ360 ದಾವಣಗೆರೆ, ಆ.4: ನಗರದ ಕುವೆಂಪು ಕನ್ನಡ ಭವನದಲ್ಲಿ ಆ.7ರ ಮಧ್ಯಾಹ್ನ 12 ಗಂಟೆಗೆ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಎಚ್.ಡಿ. ದೇವೇಗೌಡ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಆದರೆ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಸಮಾರಂಭ ನಡೆಸಿರಲಿಲ್ಲ. ಹೀಗಾಗಿ ಈ ಬಾರಿ 2020, 21 ಮತ್ತು 22ನೇ ಸಾಲಿನ ಮೂವರು ಸಾಧಕರಿಗೆ … Read more

ಸಂತ ಪೌಲರ ವಿದ್ಯಾಸಂಸ್ಥೆ ಅಮೃತ ಮಹೋತ್ಸವ – ಪರಿಸರ ನಡಿಗೆ ಜಾಗೃತಿ ಜಾಥಾ (ಆ.6)

ಸುದ್ದಿ360 ದಾವಣಗೆರೆ, ಆ.4: ನಗರದ ಚರ್ಚ್ ರಸ್ತೆಯಲ್ಲಿರುವ ಸಂತ ಪೌಲರ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆ.6ರಂದು ಬೆಳಗ್ಗೆ 7.30ಕ್ಕೆ ಶಾಲೆ ಆವರಣದಿಂದ ಪರಿಸರ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕುರಿತು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸ್ವಾತಂತ್ರ‍್ಯ ಪೂರ್ವದಲ್ಲಿ (1946) ಸ್ಥಾಪನೆಯಾದ ಸಂತ ಪೌಲರ ವಿದ್ಯಾಸಂಸ್ಥೆ 2021ರಲ್ಲೇ 75 ವರ್ಷಗಳನ್ನು ಪೂರೈಸಿದೆ. ಆದರೆ, … Read more

ಎಷ್ಟೇ ಹಣ ನೀಡಿದರೂ ಭೂಮಿ ಬಿಡೆವು – ಭೂಸ್ವಾಧೀನ ವಿರೋಧಿಸಿ ರಸ್ತೆತಡೆದು ರೈತರ ಪ್ರತಿಭಟನೆ

ಸುದ್ದಿ360 ದಾವಣಗೆರೆ, ಆ.4: ಈಗಿರುವ ತುಂಡು ಭೂಮಿಯೇ ನಮ್ಮ ಜೀವನಾಧಾರ. ಸರಕಾರ ನಮಗೆ ಎಷ್ಟೇ ಹಣ ನೀಡಿದರೂ ಭೂಮಿ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಎಂಬುದಾಗಿ ತಾಲೂಕಿನ ಮೆಳ್ಳೇಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮಗಳ ರೈತರು ಇಂದು 45 ನಿಮಿಷಗಳ ಕಾಲ ಜಿಲ್ಲಾಡಳಿತ ಭವನ ವೃತ್ತದಲ್ಲಿ ಪಿಬಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮೆಳ್ಳೇಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಉದ್ದೇಶದಿಂದ 1156 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ … Read more

ಗ್ರಾಮಕ್ಕೆ ಜಲದಿಗ್ಬಂಧನ – ಚುಚ್ಚುಮದ್ದಿಗೆ ದೋಣಿಯಲ್ಲಿ ಸಾಗಿದ ಬಾಣಂತಿ-ಮಗು

ಸುದ್ದಿ360, ರಾಮನಗರ ಆ.4: ಮಳೆಯ ಅಬ್ಬರದಿಂದಾಗಿ ಮಾಗಡಿ ತಾಲೂಕಿನ ಈಡಿಗರ ಪಾಳ್ಯ ಗ್ರಾಮದ ರಸ್ತೆ ನೀರಿನಿಂದ ಮುಚ್ಚಿ ಹೋಗಿರುವ ಕಾರಣ ಗ್ರಾಮದ  ಸೌಭಾಗ್ಯ ಎಂಬ ಬಾಣಂತಿ ತನ್ನ 6 ದಿನದ ಕೂಸಿಗೆ ಚುಚ್ಚುಮದ್ದು ಕೊಡಿಸಲು ಮಳೆಯ ನಡುವೆಯೂ ಒಂದೂವರೆ ಕಿ.ಮೀ. ದೋಣಿಯಲ್ಲಿ ಸಾಗಿದ ಘಟನೆ ವರದಿಯಾಗಿದೆ. ಮಗುವಿಗೆ ಚುಚ್ಚುಮದ್ದು ಹಾಕಿಸಲು ಸೋಲೂರು ಆಸ್ಪತ್ರೆಗೆ ಹೋಗಬೇಕಿತ್ತು. ಇದಕ್ಕಾಗಿ ಮಳೆಯ ನಡುವೆ ಸುಮಾರು ಒಂದೂವರೆ ಕಿ.ಮೀ ದೂರ ದೋಣಿಯಲ್ಲಿ ಸಂಚರಿಸಿ, ತಿಪ್ಪಸಂದ್ರ ಗ್ರಾಮದ ಎನ್.ಎಚ್.ರಸ್ತೆ ತಲುಪಿ ಅಲ್ಲಿಂದ ಸುಮಾರು 24 … Read more

error: Content is protected !!