ಕಾಂಗ್ರೆಸ್ನಿಂದ ಕ್ಷುಲ್ಲಕ ರಾಜಕಾರಣ: ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿಕೆ

ಸುದ್ದಿ360, ದಾವಣಗೆರೆ, ಜು.14: ಕಾಂಗ್ರೆಸ್ ನವರು ಕ್ಷುಲ್ಲಕ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾನು ಕಛೇರಿಗೆ ಬರುತ್ತೇನೊ ಇಲ್ಲವೊ ಎಂಬುದನ್ನು ತಿಳಿಯಲು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಲಿ, ಇಲ್ಲವೇ ನಾನು ಕಛೇರಿಗೆ ಬಂದು ಹೋಗುವುದನ್ನು ಗಮನಿಸಲು ಯಾರಾನ್ನಾದರು ನೇಮಕ ಮಾಡಿಕೊಳ್ಳಲಿ ಎಂದು ವಿರೋಧ ಪಕ್ಷದವರ ಆರೋಪಕ್ಕೆ ಮಹನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಕಟುವಾಗಿ ಪ್ರತಿಕ್ರಿಯಿಸಿದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕುಟುಂಬದ ದಲಿತ ಮಹಿಳೆಯೊಬ್ಬಳು ಮೇಯರ್ ಸ್ಥಾನ … Read more

ವಿಭಿನ್ನ ಸಾಮರ್ಥ್ಯದ ಬಾಲಕಿ ಮೊಗದಲ್ಲಿ ಮಂದಹಾಸಕ್ಕೆ ಕಾರಣರಾದ  ಐಜಿಪಿ

ಸುದ್ದಿ360, ದಾವಣಗೆರೆ, ಜು.14: ಪೊಲೀಸ್ ಇಲಾಖೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಎಂ.ಪಾಟೀಲ್  ಆಸೆ ಇಂದು ಈಡೇರಿದೆ. ಅವಳ ಮೊಗದಲ್ಲಿ ಮಂದಹಾಸ ಮೂಡಿದೆ. ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಆಸೆ/ಕೋರಿಕೆಯ ಮೇರೆಗೆ ಖಾಕಿ ಉಡುಪಿನಲ್ಲಿ ಇಂದು ಮಾನ್ಯ ಪೊಲಿಸ್ ಮಹಾ ನಿರೀಕ್ಷಕರವರು, ಪೂರ್ವ ವಲಯ, ದಾವಣಗೆರೆ ಕಛೇರಿಯಲ್ಲಿ ಡಾ. ಕೆ. ತ್ಯಾಗರಾಜನ್ ಐಪಿಎಸ್ ರವರೊಂದಿಗೆ ಪಕ್ಕದಲ್ಲಿ ಕೂತು ಬಾಲಕಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಖಾಕಿ ಉಡುಪಿನಲ್ಲಿ ಐಜಿಪಿ … Read more

ಭದ್ರಾ ಡ್ಯಾಂ ಭರ್ತಿ: ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ನದಿಗೆ

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ – ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ಸುದ್ದಿ360, ಬಿಆರ್ ಪಿ, ಜು.14: ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇಂದು (ಜು.14) ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ … Read more

ರೌಡಿ ಶೀಟರ್ ಹಂದಿ ಅಣ್ಣಿ ಭೀಕರ ಹತ್ಯೆ

ಸುದ್ದಿ360, ಶಿವಮೊಗ್ಗ ಜು.14:  ರೌಡಿ ಶೀಟರ್ ಹಂದಿ ಅಣ್ಣಿಯ ಭೀಕರ ಕೊಲೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ವಿನೋಬನಗರದ ಪೊಲೀಸ್ ಚೌಕಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ಗುಂಪು ಏಕಾಏಕಿ ಅಣ್ಣಿಯ ಮೇಲೆ ಎರಗಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಗುಂಪು ಕೃತ್ಯವನ್ನು ಎಸಗಿ ಕಾಲ್ಗಿತ್ತಿದೆ. ದಾಳಿಗೊಳಗಾದ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಅವಘಡ

ಸುದ್ದಿ360, ಬೆಳಗಾವಿ ಜು.14:  ಜಿಲ್ಲೆಯ ಸಂಕೇಶ್ವರ ಪಟ್ಟಣದ ಜನರಲ್ ಸ್ಟೋರ್ ಒಂದರಲ್ಲಿ ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಗಾಂಧಿಚೌಕ ನೆಹರು ರಸ್ತೆಯಲ್ಲಿರುವ ಅರವಿಂದ್ ಕುಲಕರ್ಣಿ ಅವರಿಗೆ ಸೇರಿದ ಸೆಂಟರಲ್ ಜನರಲ್ ಸ್ಟೋರ್ ಗೆ ಬೆಳಗಿನ ಜಾವ 5.30ರ  ಸುಮಾರಿಗೆ  ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿದೆ.  ಬೆಂಕಿ ಕ್ರಮೇಣ ಪಕ್ಕದ ಕಿರಾಣಿ ಅಂಗಡಿ ಹಾಗೂ ಮನೆಗೂ  ವ್ಯಾಪಿಸಿದೆ. ಆದರೆ ತಕ್ಷಣ ಸ್ಥಳೀಯರ ಗಮನಕ್ಕೆ ಬಂದು, ಸ್ಥಳೀಯರ … Read more

ನೆರೆ ಸಂತ್ರಸ್ತರ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸಚಿವರ ಸೂಚನೆ

ಸುದ್ದಿ360 ದಾವಣಗೆರೆ, ಜು.13:ಮುಂಬರುವ ದಿನಗಳಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಎಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎ ಬಸವರಾಜ್ ಹೇಳಿದರು. ಬುಧವಾರ ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ್ಯಾವ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆಯೋ ಆ ಪ್ರದೇಶಗಳ ನದಿ ಭಾಗದಲ್ಲಿ … Read more

ಶಿವಶರಣ ಹಡಪದ ಅಪ್ಪಣ್ಣ ಜಯಂತಿ

ಸುದ್ದಿ360 ದಾವಣಗೆರೆ, ಜು.13: ಶಿವಶರಣ ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿ, ಪ್ರಮುಖವಾದ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಮಹನೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎ.ಚನ್ನಪ್ಪ ಹೇಳಿದರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು. … Read more

ಕುರಿ, ಮೇಕೆ ಸಾಕಾಣಿಕೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ, ಜು.13: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ಕುರಿ/ಮೇಕೆ ಸಾಕಾಣಿಕೆ ಸೌಲಭ್ಯ ಪಡೆಯಲು ಫಲಾನುಭವಿ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 18 ರಿಂದ 60 ವಯೋಮಿತಿಯ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬಹುದು. ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪಶುಪಾಲನಾ … Read more

ಗುರು ಪೂರ್ಣಿಮೆ – ಸಾಯಿಬಾಬಾ ದರ್ಶನ ಪಡೆದ ಸಹಸ್ರಾರು ಭಕ್ತರು

ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದ ಗುರು ಪೂರ್ಣಿಮೆ ಸುದ್ದಿ360 ದಾವಣಗೆರೆ, ಜು.13:  ಗುರು ಪೂರ್ಣಿಮೆ ಪ್ರಯುಕ್ತ ಇಂದು ಬುಧವಾರ ಬಾಬಾ ಮಂದಿರಗಳಲ್ಲಿ ನೆರೆದ ಭಕ್ತರು, ಸಾಯಿಬಾಬಾರ ದರ್ಶನ ಪಡೆದು, ಜೈ ಸಾಯಿರಾಂ ಘೋಷದೊಂದಿಗೆ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಗುರು ಪೂರ್ಣಿಮೆಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ … Read more

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಎಆರ್‌ಜಿ ವಿದ್ಯಾರ್ಥಿ ಉಮೇಶ್ ಗೆ ಚಿನ್ನ

ಸುದ್ದಿ360 ದಾವಣಗೆರೆ, ಜು.13: ಥಾಯ್ಲೆಂಡ್‌ನ ಸ್ಪೋರ್ಟ್ಸ್ ಯೂನಿವರ್ಸಿಟಿ ಆಫ್ ಚೌನಬುರಿ ವತಿಯಿಂದ ಜೂನ್ ತಿಂಗಳಲ್ಲಿ ಆಯೋಜಿಸಿದ್ದ ಥಾಯ್ಲೆಂಡ್ ಸೌಥ್ ಏಷಿಯನ್ ಗೇಮ್ಸ್-2022ರ ಕುಸ್ತಿ ಪಂದ್ಯದಲ್ಲಿ ನಗರದ ಎಆರ್‌ಜಿ ಕಾಲೇಜು ವಿದ್ಯಾರ್ಥಿ ಬಿ. ಉಮೇಶ ಚಿನ್ನದ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯ 65 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಸಿದ್ದ ಎಆರ್‌ಜಿ ಕಾಲೇಜು ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಉಮೇಶ್, ಮಲೇಶಿಯಾ ಕುಸ್ತಿಪಟು ವಿರುದ್ಧ 10-00 ಅಂತರದಲ್ಲಿ ಭರ್ಜರಿ ಗೆಲುವು ಸಾಸಿದರು. ಬಿ. ಉಮೇಶ ಈಗಾಗಲೇ ಮೂರು ರಾಷ್ಟ್ರೀಯ ಪದಕಗಳ ಸಾಧನೆ … Read more

error: Content is protected !!