ಅಮರನಾಥ: ಸಹಾಯವಾಣಿಯ ವಿವರ ಇಲ್ಲಿದೆ

ಕನ್ನಡಿಗರ ರಕ್ಷಣೆಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿ360, ಬೆಂಗಳೂರು, ಜು.09: ಅಮರನಾಥದಲ್ಲಿ ಮೇಘಸ್ಪೋಟದಿಂದ 15 ಜನ ಸಾವನ್ನಪ್ಪಿದ್ದು,  ಪ್ರಾಥಮಿಕ ಮಾಹಿತಿಯ ಪ್ರಕಾರ ನೂರಕ್ಕೂ ಹೆಚ್ಚು ಜನ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ ಕನ್ನಡಿಗರು ಸುರಕ್ಷಿತವಾಗಿದ್ದು, ಬೇರೆ ಯಾವ ಅಹಿತರಕರ ಸುದ್ದಿಯೂ ಬಂದಿಲ್ಲ. ಅಲ್ಲಿಯ ರಾಜ್ಯ ಸರ್ಕಾರ ಮತ್ತು … Read more

ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

ಸುದ್ದಿ360, ಬೆಂಗಳೂರು ಜು.8: ಇಂದು ಸುಮಾರು 5:30 ರ ಸಮಯಕ್ಕೆ  ಶ್ರೀ ಅಮರನಾಥ ಗುಹೆಯ ಬಳಿ ಮೋಡದ ಸ್ಫೋಟದಿಂದಾಗಿ ಯಾತ್ರಿಕರ ವಾಸಸ್ಥಳಗಳಿಗೆ ಹಾನಿಯಾಗಿದೆ. NDRF, ITBP, ಭಾರತೀಯ ಸೇನೆ, CRPF, BSF, SDRF ಮತ್ತು ಜಮ್ಮು ಮತ್ತು ಕಾಶ್ಮೀರ್ ಪೋಲಿಸ್ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಬಹುದಾಗಿದೆ.‌  … Read more

ಸಾಲುಮರದ ತಿಮ್ಮಕ್ಕನಿಗೆ ಸಂಪುಟ ದರ್ಜೆ ಸ್ಥಾನಮಾನ

ಸುದ್ದಿ360, ಬೆಂಗಳೂರು ಜು.8: ರಾಜ್ಯ ಸರ್ಕಾರವು ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವ ಸಾಲುಮರದ ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಮ್ಮಕ್ಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ತಿಮ್ಮಕ್ಕ ಅವರಿಗೆ ವೇತನ, ಭತ್ಯೆ, ವಸತಿಗೃಹ, ಸಿಬ್ಬಂದಿ ಕಾರು ಸೇರಿದಂತೆ ಸಂಪುಟ ದರ್ಜೆ ಸಚಿವರಿಗೆ ದೊರೆಯವ ಸೌಲಭ್ಯಗಳು ದೊರೆಯಲಿವೆ.

ಶ್ರೀಶೈಲಕ್ಕೆ ಅ.10ರಿಂದ 80 ದಿನಗಳ ಧಾರ್ಮಿಕ, ಸಾಮಾಜಿಕ, ಜನಜಾಗೃತಿ ಪಾದಯಾತ್ರೆ

ಸುದ್ದಿ360, ದಾವಣಗೆರೆ, ಜು.08: ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣಮಹೋತ್ಸವದ ಅಂಗವಾಗಿ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಇದೇ ಬರುವ ಅ.10ರಿಂದ 2023ರ ಜ.15ರವರೆಗೆ 80 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಶ್ರೀಶೈಲ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು. ನಗರದ ಪಿಬಿ ರಸ್ತೆಯಲ್ಲಿರುವ ಶ್ರೀಶೈಲ ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಶುಕ್ರವಾರ … Read more

ಎಸ್ ಸಿ, ಎಸ್ ಟಿ ಮೀಸಲಾತಿಗಾಗಿ ಶ್ರೀಗಳ ಹೋರಾಟ ಬೆಂಬಲಿಸಿ ಜು.11ಕ್ಕೆ ಪ್ರತಿಭಟನೆ

ಸುದ್ದಿ360, ದಾವಣಗೆರೆ, ಜು.08: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ 150 ದಿನಗಳಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿಗಾಗಿ ನಡೆಸುತ್ತಿರುವ  ಹೋರಾಟ ಬೆಂಬಲಿಸಿ ಜು.11ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾದಿಕಾರಿ ಕಚೇರಿ ಎದುರು  ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಹೊದಿಗೆರೆ ರಮೇಶ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ನಾಗಮೋಹನ್ ದಾಸ್ ವರದಿಯಂತೆ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ … Read more

ಶಾಲಾಮಕ್ಕಳಿಗೆ ಶೂ, ಸಾಕ್ಸ್  ಹಂಚಿಕೆಗೆ 132 ಕೋಟಿ ರೂ.ಗಳ ಅನುಮೋದನೆ: ಸಿಎಂ

ಸುದ್ದಿ360, ಬೆಂಗಳೂರು, ಜು. 08: ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್  ಹಂಚಿಕೆಗೆ 132 ಕೋಟಿ ರೂ.ಗಳನ್ನು ಒದಗಿಸಿ ಅನುಮೋದನೆ ನೀಡಲಾಗಿದೆ ಎಂದು  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಮವಸ್ತ್ರಕ್ಕೆ ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು. ಆಗ ಭಿಕ್ಷೆ ಬೇಡಿರುವ ಹಣ ಎಲ್ಲಿ? ಕೆಪಿಸಿಸಿ ಅಧ್ಯಕ್ಷ  … Read more

ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜು. 08: ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯ  ವಿಸ್ತರಣೆ ಮಾಡುವುದಾಗಿ   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು  ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ  ಆಯೋಜಿಸಿದ್ದ  ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ  ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ  ಮಾತನಾಡಿದರು. ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ  ಈ ಬಗ್ಗೆ ಘೋಷಣೆ ಮಾಡಲಾಗುವುದು. ನಿವೃತ್ತ ನೌಕರರು ನಿರಂತರವಾಗಿ  ಕ್ರಿಯಾಶೀಲರಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು ಎಂದರು. … Read more

ದಾವಣಗೆರೆ ಮಹಾನಗರ ಪಾಲಿಕೆ ಆಡಳಿತ ವೈಫಲ್ಯ – ಪಾಲಿಕೆಗೆ ಬೀಗ ಜಡಿಯಲು ಮುಂದಾದ ಕಾಂಗ್ರೆಸ್

ಸುದ್ದಿ360, ದಾವಣಗೆರೆ, ಜು.08: ಮಹಾನಗರ ಪಾಲಿಕೆ ಆಡಳಿತ ನಡೆಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ, ಬಿಜೆಪಿ ನಗರದ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ  ಎಂದು ಆರೋಪಿಸಿ  ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆಗಿಳಿದರು. ಬಿಜೆಪಿಯ ಆಡಳಿತದಿಂದ ರೋಸಿ ಹೋಗಿದ್ದ ಕಾಗ್ರೆಸ್ ಕಾರ್ಯಕರ್ತರು ಈ ವೇಳೆ ಪಾಲಿಕೆ  ಮುಖ್ಯದ್ವಾರಕ್ಕೆ ಬೀಗ ಜಡಿಯಲು ಮುಂದಾಗಿ, ಪೊಲೀಸರು ಇದನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್, ನಗರದಾದ್ಯಂತ ಸಮಸ್ಯೆಗಳು ಉಲ್ಬಣಗೊಂಡಿವೆ. 5 ತಿಂಗಳಾದರೂ ಸಾಮಾನ್ಯಸಭೆ … Read more

ಜಿಎಂಐಟಿ:  750 ವಿದ್ಯಾರ್ಥಿಗಳಿಗೆ ಜಾಬ್ ಆಫರ್ – ಜು.15 ರಂದು ‘ಆನ್ ಕ್ಯಾಂಪಸ್ ಎಂಪ್ಲಾಯ್ಮೆಂಟ್ ಆಫರ್ಸ್ ಸೆಲೆಬ್ರೇಶನ್ ಡೇ’

ಮಧ್ಯ ಕರ್ನಾಟಕ ಭಾಗದ ಜಿಎಂಐಟಿಯಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸುದ್ದಿ360, ದಾವಣಗೆರೆ, ಜು.07: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 750 ಜಾಬ್ ಆಫರ್ಸ್ ಸ್ವೀಕರಿಸಿದ್ದಾರೆ. ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸ್ವೀಕರಿಸಿದ ಎಂಜಿನಿಯರಿಂಗ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ವಿವಿಧ ಪ್ರತಿಷ್ಠಿತ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್, ಕ್ಯಾಪ್ಜೆಮಿನಿ, ಟಿಸಿಎಸ್,    ಎನ್ ಟಿಟಿ ಡೇಟಾ, ಹೆಚ್ ಸಿ … Read more

ಶ್ರೀ ಚಾಮುಂಡೇಶ್ವರಿಗೆ ಆಷಾಡ ಶುಕ್ರವಾರದ ನಿಮಿತ್ತ ವಿಶೇಷ ಅಲಂಕಾರ

ಸುದ್ದಿ360, ಮೈಸೂರು ಜು.08: ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ಅಮ್ಮನವರಿಗೆ ಆಷಾಡ ಮಾಸದ ಎರಡನೇ ಶುಕ್ರವಾರವಾದ ನಿಮಿತ್ತ  ವಿಶೇಷ ಅಲಂಕಾರ ಮಾಡಲಾಗಿದೆ. ಚಿತ್ರ ವರದಿ: ಮಹೇಶ್ ಕುಮಾರ್ ಆರ್.

error: Content is protected !!