ಪ್ರಧಾನಿ ಮೋದಿಗೆ ರಾಜಮನೆತನದ ಆತಿಥ್ಯ

ಸುದ್ದಿ 360 ಮೈಸೂರು, ಜೂ.21:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಅವರು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿ ಆಥಿತ್ಯ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ರಾಜಮಾತೆ  ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಅವರ ಪತ್ನಿ  ಭಾಗವಹಿಸಿದ್ದರು.

ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ!

ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ … Read more

ದಾವಣಗೆರೆ ಹಳೇ ಪೇಟೆಯ ಶತಮಾನದ ಶಾಲೆಯಲ್ಲಿ ಯೋಗ ದಿನಾಚರಣೆ

ಸುದ್ದಿ360 ದಾವಣಗೆರೆ ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಾವಣಗೆರೆಯ ಹಳೇ ಪೇಟೆಯ ಶತಮಾನದ ಶಾಲೆ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು, ಯೋಗ ಕಾರ್ಯಕ್ರಮಕ್ಕೆ  ದೈಹಿಕ ಶಿಕ್ಷಕಿ ಸುಜಾತ ಮತ್ತು ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್. ಮಾರ್ಗದರ್ಶನ ನೀಡಿದರು,  6ನೇ ತರಗತಿ ವಿದ್ಯಾರ್ಥಿ ಆರ್. ಪೃಥ್ವಿ ದಾಸರ್ ಮತ್ತು ಇತರೆ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವ ಮೂಲಕ  ಯೋಗ ದಿನಾಚರಣೆ ಕಾರ್ಯಕ್ರಮ … Read more

ಚನ್ನಗಿರಿಯಲ್ಲಿ ಬಸ್‍ ಏಜೆಂಟ್‍ನ ಬರ್ಬರ ಕೊಲೆ

ಸುದ್ದಿ360 ದಾವಣಗೆರೆ ಜೂ.21: ಪ್ರತ್ಯಕ್ಷದರ್ಶಿಗಳು ದಿಗ್ಭ್ರಮೆಯಾಗುವಂತಹ ಲೈವ್‍ ಮಾರ್ಡರ್‍  ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಖಾಸಗಿ ಬಸ್ ಏಜೆಂಟ್ ನನ್ನು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಚನ್ನಗಿರಿ ಪಟ್ಟಣದ ಕೈಮರ ಎಂಬಲ್ಲಿನ ತರಳಬಾಳು ವೃತ್ತದಲ್ಲಿ ನಡೆದಿರುವ  ಈ ಘಟನೆಯಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಹತ್ಯೆಗೀಡಾದ ಏಜೆಂಟ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ- ದಾವಣಗೆರೆ-ಭದ್ರಾವತಿ- ಚನ್ನಗಿರಿ ಪಟ್ಟಣಕ್ಕೆ ಹೋಗುವ ವೃತ್ತ ಇದಾಗಿದ್ದು, ಎಂದಿನಂತೆ ನಲ್ಲೂರಿನಿಂದ ಚನ್ನಗಿರಿಗೆ ಜಾಕೀರ್ ಬಂದಿದ್ದಾರೆ. … Read more

ನೌಕಾ ದಳದಿಂದ ಯೋಗ ದಿನ

ಸುದ್ದಿ360  ಎಎನ್‍ಐ ಟ್ವೀಟ್ಸ್ : ಭಾರತೀಯ ನಾಕಾಪಡೆಯ ಯುದ್ಧನೌಕೆ ಐಎನ್‍ಎಸ್‍ ಸಾತ್ಪುರ, ಪೆಸಿಫಿಕ್‍ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದು, 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಮುದ್ರದಲ್ಲಿ ಸಾಮಾನ್ಯ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರಾಷ್ಟ್ರೀಯ ದಿನವನ್ನು ಆರಂಭಿಸಿತು.

ಅಣ್ಣಿಗೇರಿಯ ಅಮೃತೇಶ್ವರ ದೇವಾಲಯದಲ್ಲಿ ಯೋಗ ದಿನಾಚರಣೆ

ಸುದ್ದಿ360 ಧಾರವಾಡ, ಜೂ.21: 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಐತಿಹಾಸಿಕ ಅಮೃತೇಶ್ವರ ದೇವಾಲಯ ಆವರಣದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿಪಂ ಸಿಇಓ ಡಾ.ಸುರೇಶ ಇಟ್ನಾಳ ಮತ್ತಿತರರು ಭಾಗವಹಿಸಿದ್ದಾರೆ.

ಜೂ.23 ದಾವಣಗೆರೆಯಲ್ಲಿ ಉದ್ಯೋಗ ಮೇಳ

ಸುದ್ದಿ360 ದಾವಣಗೆರೆ, ಜೂ.20: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ಹಾಗೂ ಎಮ್.ಎಸ್.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜು, ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ಜೂ.23 ರಂದು ಬೆಳಗ್ಗೆ 10 ಗಂಟೆಗೆ, ಎಮ್.ಎಸ್.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜು, ಎ.ವಿ.ಕೆ. ಕಾಲೇಜು ರಸ್ತೆ, ದಾವಣಗೆರೆ ಇಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲೊಮಾ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ ಹಾಗೂ ಸ್ನಾತಕೋತ್ತರ … Read more

ಪ್ರಧಾನಿಯಿಂದ ಕೊಮ್ಮಘಟ್ಟದಲ್ಲಿ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ

ಸುದ್ದಿ360 ಬೆಂಗಳೂರು, ಜೂ.20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ – ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಬೆಂಗಳೂರು ಉಪ ನಗರ ರೈಲು ಯೋಜನೆಗೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ … Read more

ಸಂಸ್ಕೃತಿ – ಸಮಾಜ ನಾಣ್ಯದ ಎರಡು ಮುಖಗಳು: ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ

ಸುದ್ದಿ360 ಶಿವಮೊಗ್ಗ, ಜೂ.20: ಸಂಸ್ಕೃತಿ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜ ಕ್ಕಿಂತ ಸಂಸ್ಕೃತಿ ಹೆಚ್ಚು ಪ್ರಧಾನವಾಗುತ್ತದೆ. ತರ್ಕ ವಿಲ್ಲದೆ ವಿಚಾರವಿಲ್ಲ. ವೈಚಾರಿಕ ತರ್ಕ ಅವರವರ  ವ್ಯಕ್ತಿತ್ವಕ್ಕೆ ಬಿಟ್ಟಿದ್ದು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಹ್ಯಾದ್ರಿ ವಿಹಾರ ವಿಚಾರ ವೇದಿಕೆ ಸಹಕಾರದಲ್ಲಿ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡಾ. ಸಣ್ಣರಾಮ ಅಭಿನಂದನಾ … Read more

ಉನ್ನತೀಕರಿಸಿದ ಐಟಿಐ ಲೋಕಾರ್ಪಣೆ – ದಾವಣಗೆರೆಯಲ್ಲಿ ವಿವಿಧ ಹೊಸ ಕೋರ್ಸ್‍ಗಳು

ಸುದ್ದಿ360 ದಾವಣಗೆರೆ, ಜೂ.20: ನಗರದ ಹದಡಿ ರಸ್ತೆಯಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ಕಾಲೇಜು ಉನ್ನತೀಕರಣದ ಶಿಲಾಫಲಕವನ್ನು ಶಾಸಕ ಎಸ್.ಎ. ರವೀಂದ್ರನಾಥ ಸೋಮವಾರ ಅನಾವರಣಗೊಳಿಸಿದರು. ಭಾರತ ಸ್ವಾತಂತ್ರ‍್ಯೋತ್ಸವ ಅಮೃತ ಮಹೊತ್ಸವದ ಅಂಗವಾಗಿ ರಾಜ್ಯಾದ್ಯಂತ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಿರುವ 150 ಐಟಿಐಗಳ ಲೋಕಾರ್ಪಣೆ ಅಂಗವಾಗಿ ನಗರದ ಐಟಿಐ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೇ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಕರ್ನಾಟಕ ಸರಕಾರ, ರಾಜ್ಯದ 150 ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, … Read more

error: Content is protected !!