ಕೇಂದ್ರ ಸರಕಾರದಿಂದ ದ್ವೇಷದ ರಾಜಕೀಯ

ದಾವಣಗೆರೆ, ಜೂ.13:  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ ಆರೋಪಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಕೇಂದ್ರ ಸರಕಾರ, ನೆಹರು ಕುಟುಂಬದ ವಿರುದ್ಧ ಇ.ಡಿ, ಐಟಿ ದಾಳಿ ಮಾಡಿಸುವ ಮೂಲಕ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ನೆಹರು ಕುಟುಂಬದ ವಿರುದ್ಧ ಹಗೆ ಸಾಧಿಸುತ್ತಿರುವ ಕೇಂದ್ರ ಸರಕಾರ, … Read more

ಎಸ್.ಎಸ್. ಕಪ್ ಕ್ರಿಕೆಟ್ ಬಹುಮಾನ ವಿತರಣೆ

ದಾವಣಗೆರೆ, ಜೂ.12: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ  ಡಾ.ಶಾಮನೂರು ಶಿವಶಂಕರಪ್ಪನವರ 92ನೇ ಜನ್ಮದಿನದ ಅಂಗವಾಗಿ 20ನೇ ಬಾರಿಗೆ ಆಫಿಷಿಯಲ್ ಮತ್ತು ಎಸ್.ಎಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಅದ್ದೂರಿಯಾಗಿ ನಡೆಸಲಾಯಿತು .         ಈ ಪಂದ್ಯಾವಳಿಯ ಬಹುಮಾನ ವಿತರಣೆ ಸಮಾರಂಭವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಮತ್ತು  ಉಪಾಧ್ಯಕ್ಷರಾದ  ಶಿವಗಂಗಾ ಶ್ರೀನಿವಾಸ್ ಹಾಗೂ ಪಂದ್ಯಾವಳಿಯ ವ್ಯವಸ್ಥಾಪಕರಾದ ಜಯಪ್ರಕಾಶ್ ಗೌಡ  ಅವರು ಬಹುಮಾನ ವಿತರಣೆ ಮಾಡಿದರು. ಪಂದ್ಯಾವಳಿಯಲ್ಲಿ  … Read more

ದಾವಣಗೆರೆಯಲ್ಲಿ ಜೂ.12ರ ರಾತ್ರಿ ೧೦ಗಂಟೆವರೆಗೆ ನಿಷೇಧಾಜ್ಞೆ

ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ: ಎಸ್‌ಪಿ ದಾವಣಗೆರೆ, ಜೂ.11: ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ (ಜೂ.12) ರಾತ್ರಿ 10 ಗಂಟೆವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದರ ವಿರುದ್ಧ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ … Read more

ಎಲಿಸವ್ವ ಜಾನಪದ ಕಲಾ ತಂಡದಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ.11: ಪರಿಶುದ್ಧ ಗಾಳಿ ಅಥವಾ ಆಕ್ಸಿಜನ್ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಪರಿಸರವೇ ಪಾಠ ಹೇಳಿಕೊಟ್ಟಿರುವುದು ಕಳೆದ ಎರಡು ವರುಷಗಳಲ್ಲಿ ಸಾಕಷ್ಟು ಅನುಭವಕ್ಕೆ ಬಂದಿದೆ ಎಂದು ಕಲಾವಿದೆ ಶೋಭಾ ಮಂಜುನಾಥ್ ಹೇಳಿದರು. ನಗರದ ಶ್ಯಾಮನೂರು ಪಾರ್ಕ್‌ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಲಿಸವ್ವ ಜಾನಪದ ಕಲಾ ತಂಡದ ಕಲಾವಿದರಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ಪರಿಸರ ಪರೋಕ್ಷವಾಗಿ ಹಾನಿಯಾಗುತ್ತಿದೆ. ಗಾಳಿ ನೀರು ಮಣ್ಣು … Read more

ಪೊಲೀಸರ ಬಗೆಗೆ ಸಾರ್ವಜನಿಕರಿಗಿರುವ ಗೌರವ ಕಾಪಾಡಿಕೊಳ್ಳಿ –ಆರಗ ಜ್ಞಾನೇಂದ್ರ

araga jnanedra, home minister, davangere

ದಾವಣಗೆರೆ ಜೂ.08 : ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಬಗೆಗೆ ಗೌರವ ಇದ್ದು, ಅದನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ಪೊಲೀಸರು ಮಾಡಬೇಕು, ಜನಗಳು ನಿಮ್ಮನ್ನ ನಂಬಿ ರಾತ್ರಿ ನಿದ್ರೆ ಮಾಡುತ್ತಾರೆ, ಹಾಗಾಗಿ ಸಾರ್ವಜನಿಕರ ಹಿತರಕ್ಷಣೆ ನಿಮ್ಮ ಕರ್ತವ್ಯವೆಂದು ತಿಳಿದು ಕಾರ್ಯನಿರ್ವಹಿಸಿ ಎಂದು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಯಾರು ಅಸಹಾಯಕರು ಗೌರವಸ್ಥರು ಇರುತ್ತಾರೋ ಅವರ ಪರವಾಗಿ ಪೊಲೀಸ್ … Read more

ಪಿಎಸ್‌ಐ ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ತಕ್ಕ ಪಾಠ: ಗೃಹ ಮಂತ್ರಿ

ದಾವಣಗೆರೆ, ಜೂ.೦೮: ಪಿಎಸ್‌ಐ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಯಾರನ್ನೂ ಬಿಡುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಡಿವೈಎಸ್ಪಿಯವರನ್ನು ಕೂಡ ಬಂಧಿಸಲಾಗಿದೆ. ಅಲ್ಲದೆ ಸಿಐಡಿಯಿಂದ ಉತ್ತಮ ಟೀಮ್ ವರ್ಕ್ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅವರು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಸಾಮಿನೇಷನ್ ಎಂದರೆ ಇಂತಹ ಭ್ರಷ್ಟಾಚಾರಗಳನ್ನು ಮಾಡಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇದು ಇಂದಿನದಲ್ಲ … Read more

ಎಂ.ಬಿ. ತಿಪ್ಪಣ್ಣ ನಿಧನ

ದಾವಣಗೆರೆ, ಜೂ.೦೭: ಬೆಳ್ಳಿಗನೋಡು ಗ್ರಾಮದ ಎಂ.ಬಿ.ತಿಪ್ಪಣ್ಣನವರು(೬೬), ರಿಟೈರ್ಡ್ ಅಡಿಷನಲ್ ಡೈರೆಕ್ಟರ್, ಬಿಬಿಎಂಪಿ, ಬೆಂಗಳೂರು ಇವರು ಮಂಗಳವಾರ ಬೆಳಿಗ್ಗೆ ೧೧.೨೫ ಗಂಟೆಗೆ ದೈವಾಧೀನರಾಗಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ ೪ ಗಂಟೆಯವರೆಗೆ ವಾಸಸ್ಥಳ ಬೆಂಗಳೂರಿನ ಯಲಹಂಕದ ತರಳಬಾಳು ಎನ್‌ಕ್ಲೇವ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬುಧವಾರ ಬೆಳಿಗ್ಗೆ ೧೦ ಗಂಟೆಗೆ ದಾವಣಗೆರೆಯ ವಿದ್ಯಾನಗರದಲ್ಲಿನ ಸ್ವಗೃಹದಲ್ಲಿ ದರ್ಶನಕ್ಕೆ ಇರಿಸಲಾಗುವುದು. ಹಾಗೂ ಅಂತ್ಯಕ್ರಿಯೆಯನ್ನು ಶಿರಮಗೊಂಡನಹಳ್ಳಿ ಫಾರ್ಮ್, ದಾವಣಗೆರೆಯಲ್ಲಿ ಜೂ.೮ರ ಬುಧವಾರ ಮಧ್ಯಾಹ್ನ … Read more

ಪ್ರಾಧಿಕಾರದಿಂದ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ

ದಾವಣಗೆರೆ  ಜೂ.3: ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ದಾವಣಗೆರೆ ಜಿಲ್ಲೆಯ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಿದರು. ಹಾಲುವರ್ತಿ,ಅನಗೋಡು ಮತ್ತು ಉಳುಪಿನ ಕಟ್ಟೆ ಗ್ರಾಮಗಳ ಸುತ್ತಲಿನ 359 ಎಕರೆ ಪ್ರದೇಶವನ್ನು  ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಸುಮಾರು 52 ಸರ್ವೆ ನಂಬರುಗಳ ಭಾಗಶಃ ಪ್ರದೇಶದಲ್ಲಿ ಮಣ್ಣಿನ ನಮೂನೆ, ಹೈ ಟೆನ್ ಶನ್ ವಿದ್ಯುತ್ ಮಾರ್ಗ ಹಾದುಹೋಗಿರುವುದು, ಭೂಮಿಯ ಸಮತಟ್ಟು ಮುಂತಾದವು ಗಳನ್ನು ವೀಕ್ಷಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು … Read more

ಪಠ್ಯ ಪರಿಷ್ಕರಣೆ ಸಮಿತಿ ರದ್ದತಿಗೆ ಆಗ್ರಹ: ಕರವೇ ಪ್ರತಿಭಟನೆ

ದಾವಣಗೆರೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಮರು ಪರಿಷ್ಕರಣೆ ಸಮಿತಿಯನ್ನು ಸರ್ಕಾರ ಈ ಕೂಡಲೇ ರದ್ದುಪಡಿಸಿ ಹಿಂದಿನ ವರ್ಷದ ಪಠ್ಯವನ್ನು ಮಕ್ಕಳಿಗೆ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ಮಹಾನಗರ ಪಾಲಿಕೆ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಎಸಿ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರವು ಈ ಹಿಂದೆ ಪೆÇ್ರ.ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ … Read more

ಪದವಿ ಪ್ರಾರಂಭದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಿ: ಡಾ. ಎಂ.ಜಿ. ಈಶ್ವರಪ್ಪ

ದಾವಣಗೆರೆ, ಮೇ ೨೪: ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಧ್ಯಾಪಕರು ಹೆಚ್ಚು ಜವಾಬ್ದಾರರಾಗಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಧ್ಯಾಪಕರು ಜಡ್ಡುಗಟ್ಟಿದ ನಿಂತ ನೀರಾಗದೆ ಸದಾ ಹರಿಯುವ ನೀರಾಗಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು. ನಗರದ ಎವಿ ಕಮಲಮ್ಮ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ಘಟಕದ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಿಸಲೇ ಬೇಕಿದೆ. ಪ್ರಥಮ ವರ್ಷದ ಪದವಿ ಹಂತದಲ್ಲೇ ವಿದ್ಯಾರ್ಥಿಗಳನ್ನು … Read more

error: Content is protected !!