ಲಿಂಗೈಕ್ಯ ಶಿವಕುಮಾರ ಶ್ರೀಗಳವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ  ದಾವಣಗೆರೆ ತಾಲ್ಲೂಕು ವತಿಯಿಂದ ಭಕ್ತಿ ಸಮರ್ಪಣಾ ಪೂರ್ವಭಾವಿ ಸಭೆ

ಸುದ್ದಿ360  ದಾವಣಗೆರೆ ಸೆ :14: ಕರ್ನಾಟಕದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (shri shivakumara shivacharya mahaswami) 31ನೆಯ ಶ್ರದ್ಧಾಂಜಲಿ ಸಮಾರಂಭ ಇದೇ ಸೆ. 20ರಿಂದ 24ರವರೆಗೆ ಸಿರಿಗೆರೆಯಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಲಿದೆ. ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದಾಸೋಹಕ್ಕೆ ದಾವಣಗೆರೆ ತಾಲ್ಲೂಕಿನ ಭಕ್ತರಿಂದ ಅಕ್ಕಿ ಸಮರ್ಪಿಸಲಾಗುವುದು. ಆದುದರಿಂದ ಸೆ14ರ ಗುರುವಾರ ಸಾಯಂಕಾಲ 5:00 ಗಂಟೆಗೆ ಹದಡಿ ರಸ್ತೆಯ ಶಾಮನೂರು … Read more

ಹಳೆಯ ದ್ವೇಶ: ಅಟ್ಟಾಡಿಸಿಕೊಂಡು ಯುವಕನ ಭೀಕರ ಹತ್ಯೆ

ಸುದ್ದಿ360  ಮಂಡ್ಯ: ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ರ್ತಗಳಿಂದ ಮನಸೋಇಚ್ಛೆ  ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಗಾಂಧಿನಗರ 4ನೇ ಕ್ರಾಸ್ ನಲ್ಲಿ ಮಂಗಳವಾರ ರಾತ್ರಿ‌  ನಡೆದಿದೆ. ಗಾಂಧಿನಗರ 5ನೇ ಕ್ರಾಸ್ ನಿವಾಸಿ ಅಕ್ಷಯ್ @ ಗಂಟ್ಲು (22) ಕೊಲೆಯಾದ ಯುವಕ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸಹಳ್ಳಿ ರಸ್ತೆಯ ಟೀ  ಅಂಗಡಿಯಲ್ಲಿ ಅಕ್ಷಯ್ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಆಗ ಅಕ್ಷಯ್ ತಪ್ಪಿಸಿಕೊಂಡು 4 ನೇ ಕ್ರಾಸ್ ರಸ್ತೆಯಲ್ಲಿ … Read more

ಆಮ್‍ ಆದ್ಮಿಯಿಂದ  ‘ಎಲ್ಲಾ ಸೇರೋಣ; ಬನ್ನಿ ಮಾತಾಡೋಣ’

ಸುದ್ದಿ360 ದಾವಣಗೆರೆ ಸೆ.12: ಸಾರ್ವಜನಿಕರ ಸಮಸ್ಯೆ ಅರಿಯಲು ಆಮ್ ಆದ್ಮಿ ಪಕ್ಷದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ `ಎಲ್ಲಾ ಸೇರೋಣ; ಬನ್ನಿ ಮಾತಾಡೋಣ’ ಎಂಬ ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ನಗರದಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸಂಘಟನೆ ಮಾಡಿ, ಶಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ 15-20 ಗ್ರಮಗಳನ್ನು ಒಳಗೊಂಡಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು ಎರಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೆ … Read more

‘ಕನ್ನಡವನ’ ಧ್ವಜಸ್ತಂಭ ಧ್ವಂಸಕ್ಕೆ ಯತ್ನ: ಕರುನಾಡ ಕನ್ನಡಸೇನೆ ಖಂಡನೆ

ಸುದ್ದಿ360, ದಾವಣಗೆರೆ ಸೆ.9: ನಗರದ  ಎಂ.ಸಿ.ಸಿ. ಬಿ ಬ್ಲಾಕಿನಲ್ಲಿರುವ ಕನ್ನಡ ವನದಲ್ಲಿ ಇದ್ದಂತಹ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲು ಯತ್ನಿಸಿದ್ದು, ಇದಕ್ಕೆ ಕಾರಣರಾದವರು ಸ್ಪಷ್ಟೀಕರಣ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂಬುದಾಗಿ ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಗಳು ಒತ್ತಾಯಿಸುವುದಾಗಿ ಸಂಘಟನೆ ಅಧ್ಯಕ್ಷ ಗೋಪಾಲಗೌಡ ಕೆ.ಟಿ. ಆಗ್ರಹಿಸಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಉದ್ಯಾನವನದಲ್ಲಿದ್ದ ಧ್ವಜಸ್ತಂಭವನ್ನು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಒಡೆಯಲು ಮುಂದಾಗಿರುವುದನ್ನು ನಾವು ಖಂಡಿಸುವುದರ … Read more

ಕೆಎಸ್ಆರ್‍ಟಿಸಿ ಬಸ್‍ ನಿಲ್ದಾಣಕ್ಕೆ ಕಾಂ.ಪಂಪಾಪತಿ ಹೆಸರಿಡಲು ಜೆಸಿಟಿಯು ಒತ್ತಾಯ

ಸುದ್ದಿ360, ದಾವಣಗೆರೆ (Davangere) ಸೆ.9: ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್‍ ಆರ್‍ಟಿಸಿ (KSRTC) ಬಸ್‍ ನಿಲ್ದಾಣಕ್ಕೆ ಶ್ರಮಜೀವಿ ಕಾಂ. ಪಂಪಾಪತಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU)  ಆಗ್ರಹಿಸಿದೆ. ಈ ಕುರಿತು ಇಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನಶಕ್ತಿ ಸಂಘನಟೆಯ ಸತೀಶ್‍ ಅರವಿಂದ್‍  ಮಾತನಾಡಿ, ದಾವಣಗೆರೆ ನಗರ ಅಭಿವೃದ್ಧಿ ಹೊಂದಲು ಶ್ರಮಿಸಿದ ನಾಯಕರಲ್ಲಿ ಶ್ರಮಜೀವಿ ಕಾಂ.ಪಂಪಾಪತಿಯವರು (Pampapathi) ಅಗ್ರಗಣ್ಯರಾಗಿ ನಿಲ್ಲುತ್ತಾರೆ.  ಕಾಟನ್‍ಮಿಲ್‍ನಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿಕೊಂಡು ದುಡಿದ ಅವರು ನಂತರದ … Read more

ಡಾ.ಎ ಜೆ ರವಿಕುಮಾರ್ ಇವರಿಗೆ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ

ಸುದ್ದಿ360 ಶಿವಮೊಗ್ಗ: ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಜಾನಪದ ಕಲಾ ಕೇಂದ್ರ ಹೊಸಮನೆ ಶಿವಮೊಗ್ಗ ಸಂಸ್ಥೆಯ  25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಕನಕ ಕಲಾವೈಭವ ಜಾನಪದ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿಯನ್ನು ಡಾ.ಎ ಜೆ ರವಿಕುಮಾರ್, ಸಮಾಜ ಸೇವಕರು ದಾವಣಗೆರೆ ಇವರಿಗೆ  ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸಮಾರಂಭದ ಅಧ್ಯಕ್ಷತೆಯನ್ನುಗೌರವಾಧ್ಯಕ್ಷರಾದ ಎಂ ಈಶ್ವರಪ್ಪ ನವುಲೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಎಚ್ ಶ್ಯಾಮಲಾ, ಶಿವಾನಂದಪ್ಪ, ಪರಿಸರ ಪ್ರೇಮಿ  ರಮೇಶ್, ಡಾ.ಬಾಲಣ್ಣ  ಹಾಗೂ ರಾಜ್ಯ ಯುವ … Read more

ಗಣೇಶ ಚತುರ್ಥಿ- ಈದ್‍ ಮಿಲಾದ್‍ –ಸೌಹಾರ್ಧಯುತ  ಆಚರಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ

ಸುಳ್ಳು ಸುದ್ದಿ- ಪ್ರಚೋದನಾಕಾರಿ ಹೇಳಿಕೆ – ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್  ಸುದ್ದಿ360, ದಾವಣಗೆರೆ ಸೆ.8:  ಎಲ್ಲ ಧರ್ಮಗಳ ಜನರ ನಡುವಿನ ಬಾಂಧವ್ಯದಿಂದಾಗಿ ದಾವಣಗೆರೆ ಐಕ್ಯತೆಯ ನಾಡಾಗಿ ಗುರುತಿಸಿಕೊಂಡಿದೆ.  ಈ ಬಾರಿ ಎರಡು ಪ್ರಮುಖ ಧರ್ಮಗಳ ಹಬ್ಬಗಳು ಜತೆಜತೆಗೆ ಬಂದಿದ್ದು, ಸೌಹಾರ್ದತೆ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ. ಎಲ್ಲರೂ ಒಂದೇ ಗೂಡಿನ ಹಕ್ಕಿಗಳು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ ಮಾಡಿದರು. … Read more

ದಾವಣಗೆರೆಯಲ್ಲಿ ಹೀಗೊಂದು ದುಬಾರಿ ಹೈಟೆಕ್ ಶೌಚಾಲಯ!!!? – ಕುಚೇಷ್ಟೆ ಅಂದುಕೊಳ್ಳೋದಾದರೆ ಪ್ರತ್ಯಕ್ಷವಾಗಿ ನೋಡಬಹುದು ಅಂತಾರೆ ಇದನು ಕಂಡವರು. . .!

ಪ್ರಪಂಚದಲ್ಲಿಯೇ ದುಬಾರಿ ಹೈಟೆಕ್ ಶೌಚಾಲಯ ನಿರ್ಮಿಸಿದ ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು – ಕೆ.ಎಲ್.ಹರೀಶ್ ಬಸಾಪುರ ಸುದ್ದಿ360: ದಾವಣಗೆರೆ ನಗರದಲ್ಲಿ ಸುಮಾರು 26 ಕೋಟಿ ರೂ ವೆಚ್ಚದಲ್ಲಿ ಎಸ್ಕಲೇಟರ್, ಲಿಫ್ಟ್, ಸಿಸಿ ಕ್ಯಾಮೆರಾ ಗಳು, ಬಹು ಮಹಡಿ ಮಳಿಗೆಗಳು ಸೇರಿದಂತೆ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣ ಕೇವಲ ಸಾರ್ವಜನಿಕರ ಶೌಚಾಲಯಕ್ಕೆ ಮೀಸಲಾಗಿರುವುದನ್ನು ನೋಡಿದ ನಾಗರಿಕರು ಪ್ರಪಂಚದಲ್ಲಿಯೇ ದುಬಾರಿ ಹೈಟೆಕ್ ಶೌಚಾಲಯ (high-tech toilet) ವನ್ನು ನಮ್ಮ ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದು … Read more

‘ರಾಜ್ಯ ಸರ್ಕಾರದ ಜನ ವಿರೋಧಿ ನೀತಿ’ –  ಬಿಜೆಪಿ ಪ್ರತಿಭಟನೆ

ಸುದ್ದಿ360 ಬೆಂಗಳೂರು ಸೆ.8:  ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ , ಮಾಜಿ ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮಾಜಿ ಸಚಿವರು ಶಾಸಕರು ಪಾಲ್ಗೊಂಡಿದ್ದಾರೆ.

ಸೆ.9: ದಾವಣಗೆರೆ ಜಿಲ್ಲಾ ಕ.ಸಾ.ಪ.ದಿಂದ ‘ಗ್ರಾಮೀಣ ಸಿರಿ’ – ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ

ಸುದ್ದಿ360 ದಾವಣಗೆರೆ, ಸೆ. 7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2022-23ನೇ ಸಾಲಿನ ದಾವಣಗೆರೆ ಜಿಲ್ಲಾ ಮಟ್ಟದ ‘ಗ್ರಾಮೀಣ ಸಿರಿ’ ಹಾಗೂ ‘ನಗರ ಸಿರಿ’ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ಸೆ.9ರ ಶನಿವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದೆ. ಸಮಾರಂಭವು ಅಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಇವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಬಿ. ವಾಮದೇವಪ್ಪನವರ  ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಾನಪದ … Read more

error: Content is protected !!