ವಿಜೃಂಭಣೆಯಿಂದ ನಡೆದ ಆವರಗೊಳ್ಳ ವೀರಭದ್ರೇಶ್ವರ ಜಾತ್ರಾಮಹೋತ್ಸವ

ದಾವಣಗೆರೆ: ಸಮೀಪದ ಆವರಗೊಳ್ಳದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.ರಥದ ಕಳಶಕ್ಕೆ ಬಾಳೆಹಣ್ಣನ್ನು ಶ್ರದ್ಧಾಭಕ್ತಿಯಿಂದ ಎಸೆಯುವ ಮೂಲಕ‌ ತಮ್ಮ ಮನೋಅಭಿಲಾಶೆಯನ್ನು ದೇವರಿಗೆ ಅರ್ಪಿಸಿದರು. ಜಾತ್ರೋತ್ಸವಕ್ಲೆ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ಮು ಮಾಡಲಾಗಿತ್ತು.

ದಸರಾ ಸಿಎಂ ಕಪ್ ಬಾಕ್ಸಿಂಗ್ ನಲ್ಲಿ ಮೀನಾಕ್ಷಿಗೆ ಪದಕ

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 3ರಿಂದ 5 ರವರೆಗೆ ಆಯೋಜಿಸಿದಸಿಎಂ ಕಪ್ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿಬೆಂಗಳೂರು ಗ್ರಾಮಾಂತರ ವಿಭಾಗದಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಶಿವಮೊಗ್ಗದ ಹೆಮ್ಮೆಯ ಮಹಿಳಾ ಬಾಕ್ಸರ್ ಮತ್ತು ಶಿವಮೊಗ್ಗ ದ ಮೊದಲ ಮಹಿಳಾ ಎನ್ಐಎಸ್ ಕೋಚ್ ಆದ ಮೀನಾಕ್ಷಿ 60-63 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿತೃತೀಯ ಸ್ಥಾನ ಪಡೆದುಜಿಲ್ಲೆಗೆ ಕೀರ್ತಿ ತಂದಿದ್ದುವಿಜೇತ ಕ್ರೀಡಾಪಟು ಕಳೆದ ಬಾರಿಯ … Read more

AKSKA ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕ

ಶಿವಮೊಗ್ಗ :- ವರ್ಲ್ಡ್ ಕರಾಟೆ ಫೆಡರೇಷನ್‌ನಿಂದ ಮಾನ್ಯತೆ ಪಡೆದಿರುವ ಕರಾಟೆ ಇಂಡಿಯಾ ಆರ್ಗನೇಸೇಷನ್ ನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇ ಷನ್ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕರಾಗಿದ್ದಾರೆ. ದಶಕಗಳ ಕಾಲ ಜಿಲ್ಲೆ ಹಾಗೂ ರಾಜ್ಯದಲ್ಲಿ ನಿರಂತರವಾಗಿ ಕರಾಟೆ ಕ್ರೀಡೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನಲೆ ಅವರನ್ನು ಬೆಂಗಳೂರಿ ನಲ್ಲಿ ನಡೆದ ಕರಾಟೆ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷ  ಸಿ.ಎಸ್. ಅರುಣ್ ಮಾಚಯ್ಯ, ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರು … Read more

ಎಸ್ ಎಸ್ ಎಂ ಜನ್ಮದಿನ; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ

SSM-BIRTHDAY-BASKETBALL-PRABHA-MALLIKARJUN-DAVANAGERE

ದಾವಣಗೆರೆ (DAVANAGERE); ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ಒಂದು ದಿನದ ರಾಜ್ಯಮಟ್ಟದ 3×3 ಆಹ್ವಾನಿತ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ವತಃ ಬಾಸ್ಕೆಟ್ ಬಾಲ್ ಆಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಸದೃಢತೆ ಹೆಚ್ಚಾಗುತ್ತದೆ.ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.ಈ ರೀತಿಯ ಪಂದ್ಯಾವಳಿಗಳು‌ ಹೆಚ್ಚಾಗಿ ನಡೆಯಲಿ‌ ಎಂದರು. ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ರಾಜ್ಯದ ವಿವಿಧ ತಂಡಗಳು ಭಾಗವಹಿಸಿದ್ದವು. ಇದರ ಜೊತೆಗೆ … Read more

ಸ್ಕ್ವಾಯ್ ಕ್ರೀಡಾಪಟು ಶಶಾಂಕ್‍ಗೆ ಶಿಕ್ಷಣ ಸಚಿವರಿಂದ ಶುಭ ಹಾರೈಕೆ

education-minister-wishes-squash-athlete-shashank

ಸುದ್ದಿ360 ಶಿವಮೊಗ್ಗ: ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿ ಇತ್ತೀಚೆಗೆ ನಡೆದ  ಸ್ಕ್ವಾಯ್ ಕ್ರೀಡೆಯ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ವತಿಯಿಂದ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗದ ಡಿವಿಎಸ್‍ ಶಾಲೆಯ ವಿದ್ಯಾರ್ಥಿ ಶಶಾಂಕ್‍ಗೆ  ಶಿಕ್ಷಣ ಸಚಿವ ಮಧುಬಂಗಾರಪ್ಪ  ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಪದಕ ಗೆಲ್ಲುವಂತೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ತರಬೇತಿದಾರ ರಮೇಶ್ ಮತ್ತು ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದ ಸಹ ಕಾರ್ಯದರ್ಶಿ ರಾಮಚಂದ್ರ ಖಜಾಂಚಿ ನಾಗರಾಜ್ ಉಪಸ್ಥಿತರಿದ್ದರು.

ತರಬೇತುದಾರ ಹೆಚ್.ದಾದಾಪೀರ್‌ಗೆ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿ: ಅಭಿನಂದನೆ

best-disciplined-referee-award-to-coach-h-dadapir-congratulations

ಸುದ್ದಿ360 ದಾವಣಗೆರೆ: ದಾವಣಗೆರೆಯ ಹಿರಿಯ ಕ್ರೀಡಾಪಟು ಅಂತರಾಷ್ಟ್ರೀಯ ತೀರ್ಪುಗಾರರಾದ ಏಕಲವ್ಯ ಪ್ರಶಸ್ತಿ ವಿಜೇತ ಹೆಚ್.ದಾದಾಪೀರ್‌ (H Dadapir) ಇವರು ನವದೆಹಲಿಯಲ್ಲಿಇತ್ತೀಚೆಗೆ ನಡೆದಕೇಲೋ ಇಂಡಿಯಾ ಪ್ಯಾರಾ ಪವರ್ ಲಿಫ್ಟಿಂಗ್‌ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿಗೆ (best disciplined referee award) ಭಾಜನರಾಗಿದ್ದಾರೆ. ಹೆಚ್.ದಾದಾಪೀರ್‌ ಅವರಿಗೆ ದಾವಣಗೆರೆ ಜಿಲ್ಲಾಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಗ್ರೂಪ್‌ ಆಫ್‌ ಐರನ್‌ ಗೇಮ್ಸ್ ಹಾಗೂ … Read more

ದಸರಾ ರಜೆ: ಏನಾದ್ರೂ ಕಲೀಬೇಕಲ್ಲಾ ಅನ್ನೋ ಮಕ್ಕಳಿಗೆ – ಚೆಸ್‍ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ (Davangere): ದಸರಾ ರಜೆ (Dussehra Holidays) ಶುರುವಾಯಿತು. ಮನೆಯಲ್ಲೇ ಉಳಿಯುವ ಮಕ್ಕಳನ್ನು ಒಂದಿಷ್ಟು ಯ್ಯಾಕ್ಟಿವ್‍ ಮಾಡೋಣ ಎಂದೆಣಿಸುವ ಪೋಷಕರಿಗೆ ಇಲ್ಲೊಂದು ಅವಕಾಶ ಇದೆ ನೋಡಿ. ಏನು ಅಂತೀರ ಮಕ್ಕಳ ಮನಸನ್ನು ಹಿಡಿದಿಡುವ, ಹೊಸ ಹೊಸ ಟಾಸ್ಕ್ ಗಳನ್ನು ಮಕ್ಕಳ ಮುಂದಿರಿಸುವ ಗೇಮ್‍ ಚದುರಂಗ (chess) ಇದೇ ಅ.15ರಿಂದ 15 ದಿನಗಳ ಚೆಸ್‍ ತರಬೇತಿ ಶಿಬಿರ ಆರಂಭಗೊಂಡಿದೆ. ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ  15 ದಿನಗಳ ಚೆಸ್‍ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು … Read more

ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್‍ ಕ್ರಿಕೆಟ್‍ ಸಾಂಗ್‍ ‘ಗೆದ್ದು ಬಾ ಓ ಇಂಡಿಯಾ’

ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್‍ ಕಪ್‍ ಕ್ರಿಕೆಟ್‍ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್‍ ಕ್ಯಾಟ್‍ ಕ್ರಿಯೇಟಿವ್ ಲ್ಯಾಬ್‍” ರಚಿಸಿರುವ  “ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆ ಸಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ. ನಗರದ ಪಿಬಿ ರಸ್ತೆಯಲ್ಲಿರುವ ಬಿಸಿಎಲ್‍ ಕ್ರಿಯೇಟಿವ್‍ ಏಜೆನ್ಸಿಯ ಮೂವಿ ಹಾಲ್‍ನಲ್ಲಿ ಇಂದು ಬ್ಲ್ಯಾಕ್‍ ಕ್ಯಾಟ್‍ ತಂಡ ಈ ಒಂದು ಗೀತೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಗೀತೆಯ ರಚನೆಯ ಕುರಿತು ಮಾಹಿತಿ ನೀಡಿದರು.  ಕನ್ನಡ, … Read more

ಶಿವಮೊಗ್ಗ: ಮಕ್ಕಳ ದಸರಾ ಪ್ರಯುಕ್ತ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ

ಸುದ್ದಿ360 ಶಿವಮೊಗ್ಗ(Shivamogga) ಅ.11: ಶಿವಮೊಗ್ಗ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ಇದೇ ಅ.16 ರಂದು ಮಕ್ಕಳ ದಸರಾ ಪ್ರಯುಕ್ತ ನಗರದ  ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 17 ವರ್ಷ ದೊಳಗಿನ ವಯಸ್ಸಿನ ಮಕ್ಕಳಿಗೆ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ (State Level Karate Tournament for Childrens) ಆಯೋಜಿಸುತ್ತಿರುವುದಾಗಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ನ ಮುಖೀಬ್ ಅಹಮದ್ ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕುಮಿತಿ ವಿಭಾಗಗಳು ಇದ್ದು ಶಿವಮೊಗ್ಗ ನಗರದ ಮಕ್ಕಳಿಗೆ ಮೊದಲ ಆದ್ಯತೆಯಾಗಿದ್ದು … Read more

‘ಗೆದ್ದು ಬಾ ಓ ಇಂಡಿಯಾ-2023’ ಗೀತೆ ಲೋಕಾರ್ಪಣೆ

indian-cricket-anthem-geddu-ba-o-india-2023-launch

ಸುದ್ದಿ360 ದಾವಣಗೆರೆ (Davangere), ಅ.10: ದಾವಣಗೆರೆಯ ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ (Black Cats Creative Lab) ನಿಂದ ‘ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ (geddu ba o india) ಕ್ರಿಕೆಟ್ ಗೀತೆ ರೂಪಿಸಲಾಗಿದ್ದು, ಅ.11ರಂದು ಮಧ್ಯಾಹ್ನ 12.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಬ್ಲಾಕ್‍ ಕ್ಯಾಟ್ಸ್ ತಂಡದ ಎಂ.ಎಸ್. ಚೇತನ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‍ ತಂಡವನ್ನುಮತ್ತು ಪ್ರೇಕ್ಷಕರನ್ನು  ಹುರಿದುಂಬಿಸುವ ನಿಟ್ಟಿನಲ್ಲಿ ‘ಭಾರತೀಯ ಕ್ರಿಕೆಟ್‍ ಗೀತೆ2023’ ‘ಗೆದ್ದು … Read more

error: Content is protected !!