ಎಸ್ಎಸ್ಎಂ@55 ಹುಟ್ಟುಹಬ್ಬದ  ಅಂಗವಾಗಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ

ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು … Read more

ನೆಹರೂ ಒಳಾಂಗಣ ಕ್ರೀಡಾಂಗಣದ ವಿಷಯದಲ್ಲಿ ಕ್ರೀಡಾಧಿಕಾರಿಗಳ ಧೋರಣೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿ360 ಶಿವಮೊಗ್ಗ, ಸೆ. 14: ಶಿವಮೊಗ್ಗ ನಗರದಲ್ಲಿರುವ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆಯನ್ನು ಖಂಡಿಸಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ನೀಡಲು ಅನುವು ಮಾಡಿಕೊಡಬೇಕು ಎಂದು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 4ಶಟಲ್ ಕೋರ್ಟ್ ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದೆ ಎಂಬ ವಿಷಯವನ್ನೇ ನೆಪವಾಗಿಟ್ಟುಕೊಂಡು ಕ್ರೀಡಾಧಿಕಾರಿಯವರು ಬಹು ಬಳಕೆಗಾಗಿ ಸ್ಥಾಪಿಸಲ್ಪಟ್ಟ ನೆಹರು ಒಳಾಂಗಣ … Read more

ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್- ಸೌಜನ್ಯಗೆ ದ್ವಿತೀಯ ಸ್ಥಾನ

ಸುದ್ದಿ360, ದಾವಣಗೆರೆ ಸೆ.12: ಇಂದು ಕಣ್ಣೂರು ಸ್ಪೋರ್ಟ್ಸ್ ಅಕಾಡೆಮಿ ರಾಣೇಬೆನ್ನೂರ ನಲ್ಲಿ ಏರ್ಪಡಿಸಲಾಗಿದ್ಧ ಕರ್ನಾಟಕ ಸ್ಟೇಟ್ ಓಪನ್ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಸೌಜನ್ಯ ವೈ ಎಮ್ ದ್ವಿತೀಯ ಸ್ಥಾನ  ಪಡೆದಿದ್ದಾರೆ. 12 ವರ್ಷದ ಒಳಗಿನ ವಯೋಮಿತಿಯಲ್ಲಿ ದ್ವಿತೀಯ ಸ್ಥಾನಕ್ಕೆ ಭಾಜನರಾಗಿರುವ  ದಾವಣಗೆರೆಯ ವೈ ಎಮ್. ಸೌಜನ್ಯಗೆ ಕರ್ನಾಟಕ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅಭಿನಂಸಿದ್ದಾರೆ.

ದಾವಣಗೆರೆಗೆ ಚಿನ್ನದ ಕಿರೀಟ ತೊಡಿಸಿದ ಗಿರೀಶ್

ಸುದ್ದಿ360 ದಾವಣಗೆರೆ, ಜೂನ್ 28: ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನ ಬಿ.ಎ. ಪದವಿಯ  ಮೂರನೇ ವರುಷದ ವಿಧ್ಯಾರ್ಥಿ ಗಿರಿಶ್ ಬಿ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಚಾಂಪಿಯನ್ ಶಿಪ್ 2022 ರ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಹರಿಹರ ತಾಲ್ಲೂಕು ಗುತ್ತೂರು ಹಳ್ಳಿಯ ನೀಲಮ್ಮ ಮತ್ತು ಬಸಪ್ಪ ಇವರ ಪುತ್ರ ಗಿರೀಶ್ ಬಿ. ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ದೇವರಾಜ್ ಅರಸ್ ಕಾಲೇಜಿನಲ್ಲಿ ಬಿ.ಎ. ಪದವಿಯ ಮೂರನೇ ವರುಷದಲ್ಲಿ … Read more

ದಾವಣಗೆರೆ ಎಕ್ಸಪ್ರೆಸ್ ಆರ್. ವಿನಯ್‍ಕುಮಾರ್ – ರೀಚಾ ಸಿಂಗ್‍ ದಂಪತಿಗೆ ಹೆಣ್ಣು ಮಗು ಜನನ

ಸುದ್ದಿ 360 ಬೆಂಗಳೂರು, ಜೂ. 24: ದಾವಣಗೆರೆ ಎಕ್ಸಪ್ರೆಸ್, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆರ್. ವಿನಯ್ ಕುಮಾರ್ ತಂದೆಯಾಗಿದ್ದಾರೆ. ವಿನಯ್ ಕುಮಾರ್ ಪತ್ನಿ ರೀಚಾ ಸಿಂಗ್ ಗುರುವಾರ ಹೆಣ್ಣು  ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣ ವಿನಯ್ ಕುಮಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಪತ್ನಿ ರೀಚಾ ಸಿಂಗ್ ಹಾಗೂ ಮಗಳ ಜೊತೆ ಇರುವ ಚಿತ್ರವೊಂದನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, … Read more

ಜೂ.25 ಶಿವಮೊಗ್ಗದಲ್ಲಿ ಪೆಂಕಾಕ್ ಸಿಲಾತ್ (ಸಮರ ಕಲೆ) ಕ್ರೀಡಾಕೂಟ

ಸುದ್ದಿ360 ಶಿವಮೊಗ್ಗ ಜೂ.23:  ನಗರದಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ದಕ್ಷಿಣ ರಾಜ್ಯಗಳ ಪೆಂಕಾಕ್ ಸಿಲಾತ್ (ಸಮರ ಕಲೆ)ಯ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 25 ಮತ್ತು 26 ರಂದು ನಡೆಯಲಿದೆ ಎಂದು ರಾಜ್ಯ ಪೆಂಕಾಕ್ ಸಿಲಾತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಜಿ. ಭಟ್ಟ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಹೊಂದಿರುವ ಈ ಕಲೆಯು  ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದೆ. ಶಿವಮೊಗ್ಗದಲ್ಲಿ … Read more

ಫುಟ್ಬಾಲ್‍ ಆಟಗಾರ ರೊನಾಲ್ಡೊವಿನ ರೂ.13.3 ಕೋಟಿ ಮೌಲ್ಯದ ದುಬಾರಿ ಕಾರು ಅಪಘಾತ

ಸುದ್ದಿ 360 ಸ್ಪೇನ್‍, ಜೂ.21: ಖ್ಯಾತ ಫುಟ್‍ಬಾಲ್‍ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಒಡೆತನದ ಕಾರು ಅಪಘಾತಕ್ಕೀಡಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ವರದಿಯಾಗಿದೆ. ದುಬಾರಿ ಬೆಲೆಯ ಸ್ಪೋರ್ಟ್ಸ್‍ ಕಾರುಗಳನ್ನು ಹೊಂದಿರುವ ಆಟಗಾರರಲ್ಲಿ ರೊನಾಲ್ಡೊ ಕೂಡ ಒಬ್ಬರಾಗಿದ್ದು, ಅಪಘಾತಕ್ಕೀಡಾದ ಕಾರು ರೂ.13.3 ಕೋಟಿ ಮೌಲ್ಯದ ಬುಗಾಟೆ ವೆರಾನ್‍ ಆಗಿದೆ. ಸೋಮವಾರ ಬೆಳಿಗ್ಗೆ ಸ್ಪ್ಯಾನಿಷ್‍್ ನಗರದ ಮಜೋರ್ಕಾದಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ ರೊನಾಲ್ಡೊ ಅವರ ಸಿಬ್ಬಂದಿಯೋರ್ವ ಕಾರನ್ನ ಚಲಾಯಿಸಿದ್ದು, ಕಾರು … Read more

ಪವರ್ ಲಿಫ್ಟಿಂಗ್‌: ತಂದೆ-ಮಗ ಸಾಧನೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಸುದ್ದಿ360 ದಾವಣಗೆರೆ, ಜೂ16:  ಮೈಸೂರಿನಲ್ಲಿ ಜೂ.10ರಿಂದ 12ರವರೆಗೆ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ. ರಕ್ಷಿತ್ ಚಿನ್ನದ ಪದಕ ಮತ್ತು ರಕ್ಷಿತ್ ತಂದೆ, ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು ಪಿ. ವಿಶ್ವನಾಥ್ ಕಂಚಿನ ಪದಕಕ್ಕೆ ಭಾಜನರಾಗುವ ಮೂಲಕ ತಂದೆ-ಮಗ  ಇಬ್ಬರೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಹೈದರಾಬಾದ್‌ನಲ್ಲಿ ಜು.೫ರಿಂದ ೧೦ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ತಂದೆ ಮತ್ತು ಮಗ … Read more

ಕಿಕ್ ಬಾಕ್ಸಿಂಗ್‌: ದಾವಣಗೆರೆಗೆ 3 ಚಿನ್ನ, 4 ಬೆಳ್ಳಿ, 3 ಕಂಚು

ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಅಭಿನಂದನೆಗಳ ಮಹಾಪೂರ ಸುದ್ದಿ360 ದಾವಣಗೆರೆ, ಜೂ16:  ಮೈಸೂರಿನಲ್ಲಿ ಜೂ.೧೧, ೧೨ರಂದು ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ೨ನೇ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ಈಗಲ್ ಫಿಟ್ನೆಸ್ ಕೇಂದ್ರದ ವಿದ್ಯಾರ್ಥಿಗಳು 3 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಿಕ್ ಲೈಟ್ ಇವೆಂಟ್‌ನ 7-9 ವರ್ಷದ ವಿಭಾಗದಲ್ಲಿ ಯು. ಅದಿತ್ಯ ಮತ್ತು ಎ.ಬಿ. ಅಧಿತಿ ಹಾಗೂ 11-13 ವರ್ಷದ … Read more

ಎಸ್.ಎಸ್. ಕಪ್ ಕ್ರಿಕೆಟ್ ಬಹುಮಾನ ವಿತರಣೆ

ದಾವಣಗೆರೆ, ಜೂ.12: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ  ಡಾ.ಶಾಮನೂರು ಶಿವಶಂಕರಪ್ಪನವರ 92ನೇ ಜನ್ಮದಿನದ ಅಂಗವಾಗಿ 20ನೇ ಬಾರಿಗೆ ಆಫಿಷಿಯಲ್ ಮತ್ತು ಎಸ್.ಎಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಅದ್ದೂರಿಯಾಗಿ ನಡೆಸಲಾಯಿತು .         ಈ ಪಂದ್ಯಾವಳಿಯ ಬಹುಮಾನ ವಿತರಣೆ ಸಮಾರಂಭವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಮತ್ತು  ಉಪಾಧ್ಯಕ್ಷರಾದ  ಶಿವಗಂಗಾ ಶ್ರೀನಿವಾಸ್ ಹಾಗೂ ಪಂದ್ಯಾವಳಿಯ ವ್ಯವಸ್ಥಾಪಕರಾದ ಜಯಪ್ರಕಾಶ್ ಗೌಡ  ಅವರು ಬಹುಮಾನ ವಿತರಣೆ ಮಾಡಿದರು. ಪಂದ್ಯಾವಳಿಯಲ್ಲಿ  … Read more

error: Content is protected !!