ಚನ್ನಗಿರಿಯಲ್ಲಿ ಭವ್ಯ ಮೆರವಣಿಗೆ || ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ ಇದ್ದೆ- ಪಕ್ಷದಿಂದ ಉಚ್ಚಾಟನೆಗೊಂಡಿದ್ದೇನೆ ಎಂದ ಮಾಡಾಳು ವಿರೂಪಾಕ್ಷಪ್ಪ

ಸುದ್ದಿ360 ದಾವಣಗೆರೆ ಮಾ. 7: ಕಳೆದ ಆರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪರನ್ನು ಅಭಿಮಾನಿಗಳು ಸಮರವೀರರಂತೆ ಬಿಂಬಿಸಿ ಭವ್ಯ ಸ್ವಾಗತ  ಮಾಡಿದ್ದಾರೆ. ಕೆಎಸ್ ಡಿ ಎಲ್ ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿನ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ  ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ನವರು ತಮ್ಮ ಜಾಮೀನು ಅರ್ಜಿ ಮಂಜೂರು ಆದ ಕೆಲವೇ ಗಂಟೆಗಳಲ್ಲಿ ಚನ್ನಗಿರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಲೆ ಮರೆಸಿಕೊಂಡಿರಲಿಲ್ಲ ಮನೆಯಲ್ಲೇ … Read more

ಎಷ್ಟು ದುಡ್ಡು ಕೊಟ್ಟರೆ ನಿಮ್ಮಹಣದ ದಾಹ ತೀರುತ್ತದೆ? – ಬಿಜೆಪಿಗೆ ರಣದೀಪ್ ಸಿಂಗ್ ಸುರ್ಜಿವಾಲ ತಾಕೀತು

ಬಿಟ್ಟರೆ ಬಿಜೆಪಿಯವರು ಕರ್ನಾಟಕವನ್ನೇ ಮಾರುತ್ತಾರೆ! – ಸುರ್ಜಿವಾಲ ಸುದ್ದಿ360 ದಾವಣಗೆರೆ ಮಾ.6: ‘ಮುಖ್ಯಮಂತ್ರಿ ಬೊಮ್ಮಾಯಿಯವರೇ, ನಳೀನ್ ಕುಮಾರ್ ಕಟೀಲ್ ಹಾಗೂ ಜೆ.ಪಿ. ನಡ್ಡಾ ಅವರೇ ನಿಮ್ಮ ಬಿಜೆಪಿಗೆ ಹಣದ ದಾಹ ಎಷ್ಟಿದೆ ಎಂಬುದನ್ನು ಹೇಳಿ. ಎಷ್ಟು ದುಡ್ಡು ಕೊಟ್ಟರೆ ನಿಮ್ಮ ದಾಹ ತೀರುತ್ತದೆ ಎಂದು ತಿಳಿಸಿಬಿಡಿ. ಕರ್ನಾಟಕದ ಜನತೆಯೊಂದಿಗೆ ನಾವೆಲ್ಲರೂ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ನಿಮಗೆ ಹಣ ಹೊಂದಿಸಿಕೊಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಬಿಜೆಪಿಯ ಭ್ರಷ್ಟಾಚಾರ ಕುರಿತು ಗುಡುಗಿದ್ದಾರೆ. … Read more

ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಹುಬ್ಬಳ್ಳಿ, ಮಾ. 06:  ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭ್ರಷ್ಟಾಚಾರದ ವಿರುದ್ಧ  ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಸಂಬಂಧಿಸಿದಂತೆ ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಪ್ರತಿಭಟನೆ, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆಯಬಹುದೆಂದು ಬಂದ್ ಗೆ ಕರೆ ನೀಡಿದ್ದಾರೆ. ಅವರಿಗೆ ಯಾವ ಪ್ರತಿಕ್ರಿಯೆ ದೊರೆಯಿವುದಿಲ್ಲ ಎಂದರು.  ಕಾಂಗ್ರೆಸ್ ಭ್ರಷ್ಟಾಚಾರದ ಕೂಪ : ಕಾಂಗ್ರೆಸ್ ಭ್ರಷ್ಟಾಚಾರದ … Read more

ಬಸವ ತತ್ವ ಗುನುಗುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ – ಮೇಯರ್ ಗಿರಿ ನಮ್ಮದು – ನಮ್ಮದು ಎನ್ನುತ್ತಿರುವ ಉಭಯ ಪಕ್ಷಗಳು

ಇವನಾರವ ಇವನಾರವ  ಎಂದೆನಿಸದಿರಯ್ಯಾ – ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯಾ. . . ಸುದ್ದಿ360 ದಾವಣಗೆರೆ ಮಾ. 4: ದಾವಣಗೆರೆ ಮಹಾನಗರ ಪಾಲಿಕೆಗೆ ಇಂದು ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಹೈಡ್ರಾಮವೇ ನಡೆಯಿತು. ಈ ಸಂದರ್ಭದಲ್ಲಿ ನಡೆದ ಘಟನೆಗಳು ಮತ್ತು ಅಂತಿಮ ಫಲಿತಾಂಶದಿಂದ ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆ ಎಂದರೆ ಮೇಯರ್ ಸ್ಥಾನ ಈಗ ‘ಕೈ’ ನಲ್ಲಿದೆಯೋ ಅಥವಾ ಆಪರೇಷನ್ ಕಮಲದ ತೆಕ್ಕೆಗೆ ಜಾರಿತೋ ಎಂಬುದಾಗಿತ್ತು. ಫಲಿತಾಂಶದ ನಂತರ ಕೈ ಮತ್ತು ಕಮಲ ಪಾಳಯದ ಸಾಮಾಜಿಕ ಜಾಲತಾಣದಲ್ಲಿ … Read more

ಡಬಲ್ ಎಂಜಿನ್ ಸರಕಾರವಲ್ಲ ಬೇಕಿರುವುದು ಹೊಸ ಎಂಜಿನ್ ಸರಕಾರ: ಕೇಜ್ರಿವಾಲ್

ಕರ್ನಾಟಕ ರಾಜ್ಯವನ್ನು ಭ್ರಷ್ಟಾಚಾರಮುಕ್ತಗೊಳಿಸಲು ಎಎಪಿಗೆ ಅಧಿಕಾರ ನೀಡುವಂತೆ ಕೇಜ್ರಿವಾಲ್ ಮನವಿ ಸುದ್ದಿ360 ದಾವಣಗೆರೆ, ಮಾ.4: ಪರ್ಸಂಟೇಜ್ ಪಕ್ಷಗಳನ್ನು ಬದಿಗಿರಿಸಿ ಒಂದು ಬಾರಿ ಆಮ್ ಆದ್ಮಿ ಪಕ್ಷದ ಹೊಸ ಎಂಜಿನ್ ಆಡಳಿತಕ್ಕೆ ಅವಕಾಶ ನೀಡುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಹೊಸದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜನತೆಯಲ್ಲಿ ಮನವಿ ಮಾಡಿದರು. ಕರ್ನಾಟಕದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುವ ನಿಮಿತ್ತ ಆಮ್ ಆದ್ಮಿ ಪಕ್ಷ, ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶವನ್ನು ಉದ್ಘಾಟಿಸಿ … Read more

State level convention of Aam Aadmi Party in Davangere ಮಾ.4- ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಸಮಾವೇಶ

ಅರವಿಂದ ಕೇಜ್ರಿವಾಲ್ , ಭಗವಂತ್ ಸಿಂಗ್ ಮಾನ್ ರಿಂದ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ಸುದ್ದಿ360 ದಾವಣಗೆರೆ ಮಾ.2: ಆಮ್ ಆದ್ಮಿ ಪಕ್ಷದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ, ಹೊಸದಿಲ್ಲಿ ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಮದ್ಯ ಕರ್ನಾಟಕ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ … Read more

ಶೇ.17 ವೇತನ ಹೆಚ್ಚಳ – ಸರ್ಕಾರಿ ನೌಕರರ ಮುಷ್ಕರ ವಾಪಸ್

ಸರ್ಕಾರದ ಮಧ್ಯಂತರ ಆದೇಶಕ್ಕೆ ಮಣಿದ ಸರ್ಕಾರಿ ನೌಕರರು ಸುದ್ದಿ360 ಬೆಂಗಳೂರು ಮಾ.01: ರಾಜ್ಯ ಸರ್ಕಾರಿ ನೌಕರರೊಂದಿಗಿನ ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್ಯ ಸರ್ಕಾರಿ ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಆದೇಶ ಮಾಡಿರುವ ಮುಖ್ಯಮಂತ್ರಿಗಳು ಇಂದೇ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಷರತ್ತುಬದ್ಧವಾಗಿ ಹಿಂಪಡೆಯಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ. ವಿಧಾನ ಸೌಧದ ಹಣಕಾಸು ಇಲಾಖೆಯ  ಐಎಸ್ ಎನ್ ಪ್ರಸಾದ್ ಕೊಠಡಿಯಲ್ಲಿ ಇಂದು … Read more

ದಾವಣಗೆರೆಯ ಶಿವಗಂಗೋತ್ರಿಯಲ್ಲಿ ಘಟಿಕೋತ್ಸವ: ವಿದ್ಯಾರ್ಥಿನಿಯರದೇ ಮೇಲುಗೈ

81ಸ್ವರ್ಣಪದಕಗಳನ್ನು ಹಂಚಿಕೊಂಡ 45 ವಿದ್ಯಾರ್ಥಿಗಳು – 3 ಗೌರವ ಡಾಕ್ಟರೇಟ್ ಸುದ್ದಿ360 ದಾವಣಗೆರೆ ಫೆ.28:  ದಾವಣಗೆರೆ ವಿಶ್ವ ವಿದ್ಯಾಲಯ ಶಿವಗಂಗೋತ್ರಿಯ ಜ್ಞಾನಸೌಧದಲ್ಲಿ ಇಂದು ಹತ್ತನೇ ಘಟಿಕೋತ್ಸವ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 81 ವಿದ್ಯಾರ್ಥಿಗಳು ಸ್ವರ್ಣ ಪದಕದೊಂದಿಗೆ ತೇರ್ಗಡೆ ಹೊಂದಿದರು. ಇದೇ ವೇಳೆ ಟಿ.ಎಂ. ಚಂದ್ರಶೇಖರಯ್ಯ, ಅಥಣಿ ಎಸ್ ವೀರಣ್ಣ ಹಾಗೂ ಮರಣೋತ್ತರವಾಗಿ ಎಂ.ಎಸ್. ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು. ಒಟ್ಟು 81 ಸ್ವರ್ಣ ಪದಕಗಳಲ್ಲಿ ಸ್ನಾತಕ … Read more

ವೇತನ ಪರಿಷ್ಕರಣೆ ಇಂದು ಇತ್ಯರ್ಥ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ … Read more

error: Content is protected !!