ರಾಜ್ಯಮಟ್ಟದ ಅಬಾಕಸ್‌ ಸ್ಪರ್ಧೆಯಲ್ಲಿ ಸಿ. ಪ್ರಜ್ಞಾ ಚಾಂಪಿಯನ್

ಸುದ್ದಿ360 ದಾವಣಗೆರೆ, ಸೆ.15: ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿನಿ ಸಿ. ಪ್ರಜ್ಞಾ ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಗಂಗಾವತಿಯಲ್ಲಿ  ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯಲ್ಲಿ  ಭಾಗವಹಿಸಿ ಚಾಂಪಿಯನ್ ಶಿಪ್ ಪಡೆದಿದ್ದಾರೆ. ರಾಷ್ಟ್ರೋತ್ಥಾನ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನಿಂದ ಅಭಿನಂದಿಸಲಾಗಿದೆ.

ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಸುದ್ದಿ360 ರಾಮನಗರ, ಸೆ.15: ಹಾಸನ ಜಿಲ್ಲೆಯ ಹಿರಿಸಾವೆ ಹೋಬಳಿಯ ಪುರ್ ಗ್ರಾಮದ ಯುವಕ ಸೆ.14ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇದೀಗ ಮಾಗಡಿಯ ಜಡೆದೇವರ ಮಠದ ಪಕ್ಕದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕ ದರ್ಶನ್ (19) ಮಾಗಡಿಯ ಜಡೆದೇವರ ಮಠದ ವಿದ್ಯಾರ್ಥಿಯಾಗಿದ್ದು, ಯುವಕನ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿತ್ತು. ಇಂದು ಮುಂಜಾನೆ ಮಠದ ಪಕ್ಕದಲ್ಲೇ ಇರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ದರ್ಶನ್, ಜಡೇದೇವರ ಮಠದಲ್ಲಿ ಸಂಸ್ಕೃತ ಕಲಿಕೆಯ ವಿದ್ಯಾರ್ಥಿಯಾಗಿದ್ದನು ಎಂದು ಹೇಳಲಾಗಿದೆ. ಮೃತ ದೇಹವನ್ನು ಮಾಗಡಿಯ ಅಗ್ನಿಶಾಮಕ … Read more

ಎಸ್ಎಸ್ಎಂ@55 ಹುಟ್ಟುಹಬ್ಬದ  ಅಂಗವಾಗಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ

ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು … Read more

ನೆಹರೂ ಒಳಾಂಗಣ ಕ್ರೀಡಾಂಗಣದ ವಿಷಯದಲ್ಲಿ ಕ್ರೀಡಾಧಿಕಾರಿಗಳ ಧೋರಣೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿ360 ಶಿವಮೊಗ್ಗ, ಸೆ. 14: ಶಿವಮೊಗ್ಗ ನಗರದಲ್ಲಿರುವ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆಯನ್ನು ಖಂಡಿಸಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ನೀಡಲು ಅನುವು ಮಾಡಿಕೊಡಬೇಕು ಎಂದು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 4ಶಟಲ್ ಕೋರ್ಟ್ ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದೆ ಎಂಬ ವಿಷಯವನ್ನೇ ನೆಪವಾಗಿಟ್ಟುಕೊಂಡು ಕ್ರೀಡಾಧಿಕಾರಿಯವರು ಬಹು ಬಳಕೆಗಾಗಿ ಸ್ಥಾಪಿಸಲ್ಪಟ್ಟ ನೆಹರು ಒಳಾಂಗಣ … Read more

ಹಿಂದಿ ಹೇರಿಕೆ ವಿರುದ್ಧ ನಾಳೆ ಡಿಡಿಪಿಐ ಕಚೇರಿ ಮುಂದೆ ಕರವೇ ಧರಣಿ (ಸೆ.14)

ಸುದ್ದಿ360 ದಾವಣಗೆರೆ, ಸೆ.13: ಹಿಂದಿ ಹೇರಿಕೆ ವಿರುದ್ಧ ಸೆ.14ರ ಬುಧವಾರ ಇಲ್ಲಿನ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿ ಎದುರು ಧರಣಿ ಹಮ್ಮಿಕೊಂಡಿರುವುದಾಗಿ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕ ಹಿಂದಿ ಹೇರಿಕೆ ವಿರುದ್ಧ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಕರವೇ ಯಾವುದೇ ಭಾಷೆಯನ್ನೂ ವಿರೋಧಿಸುವುದಿಲ್ಲ ಆದರೆ ಸರಕಾರ ಜನರ ತೆರಿಗೆ ಹಣ ಬಳಸಿ ಒಂದು ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು, ಕನ್ನಡ ನಾಡಿನಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರುವುದು … Read more

‘ಸಿ.ಟಿ. ರವಿ’ಯವರಿಗೆ ‘ಲೂಟಿ ರವಿ’ ಎಂದದ್ದು ಸಿದ್ಧರಾಮಯ್ಯರಲ್ಲ. . .

ಸುದ್ದಿ360 ದಾವಣಗೆರೆ, ಸೆ.13: ಸಿ .ಟಿ .ರವಿಯವರಿಗೆ ‘ಲೂಟಿ ರವಿ’ ಎಂಬ ಅನ್ವರ್ಥನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ. ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ರವಿಯವರನ್ನು ಲೂಟಿ ರವಿ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ‌ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕೀಳು‌ ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಗೆ ಪ್ರದರ್ಶಿಸಿದ್ದಾರೆ ಎಂದು ಯುವ ಕಾಂಗ್ರೆಸ್ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಸಿಟಿ ರವಿಯವರ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರ … Read more

ಮಠಾಧೀಶರು ಮದುವೆಯಾಗುವುದು ಸೂಕ್ತ: ಶ್ರೀ ಪ್ರಣವಾನಂದ ಸ್ವಾಮೀಜಿ

ಸುದ್ದಿ360, ದಾವಣಗೆರೆ ಸೆ.12: ಭಾರತದ ಸನಾತನ ಹಿಂದೂ ಧರ್ಮ ಪರಂಪರೆಯಲ್ಲಿ ಪರಿಪೂರ್ಣ ಸನ್ಯಾಸ ಎಂಬುದು ಎಂದಿಗೂ ಇಲ್ಲವೇ ಇಲ್ಲ. ಸ್ವಾಮೀಜಿಗಳು ವಿವಾಹವಾಗಿ, ಸಂಸಾರದೊಂದಿಗೆ ಮಠ ನಡೆಸಿಕೊಂಡು ಹೋಗುವುದು ಸೂಕ್ತ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಶ್ರೀಗಳು, ಈ ಹಿಂದೆ ವಿಶ್ವಗುರು ಬಸವಣ್ಣನವರ ಆದಿಯಾಗಿ ಬಹುತೇಕ ಗುರುಗಳು ಸಂಸಾರಿಗಳಾಗಿದ್ದರು. ಶಂಕರಾಚಾರ್ಯರು ಒಬ್ಬ ರಾಜನೊಳಗೆ ಪರಕಾಯ ಪ್ರವೇಶ ಮಾಡಿ … Read more

ವಿದ್ಯುತ್‌ ತಿದ್ದುಪಡಿ ಮಸೂದೆ ಜಾರಿಗೆ ವಿರೋಧಿಸಿ ರೈತರ ಪ್ರತಿಭಟನೆ – ಮನವಿ

ಸುದ್ದಿ360, ದಾವಣಗೆರೆ ಸೆ.12: ರೈತರ, ಗ್ರಾಹಕರ ವಿದ್ಯುತ್‌ ತಿದ್ದುಪಡಿ ಮಸೂದೆ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ದಾವಣಗೆರೆ  ಜಿಲ್ಲಾ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು. ನಗರದ ಪಿಬಿ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಇರುವ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಚೇರಿಯಿಂದ ಬೈಕ್ ನಲ್ಲಿ ಪ್ರತಿಭಟನಾ ರ್ಯಾಲಿ … Read more

ನಾರಾಯಣ ಗುರುವಿಗೆ ಸಿಎಂ ಅಪಮಾನ – ಶೀಘ್ರದಲ್ಲೇ ಬೆಂಗಳೂರು ಪಾದಯಾತ್ರೆ

ಸುದ್ದಿ360 ದಾವಣಗೆರೆ, ಸೆ.11: ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸರಕಾರದಿಂದ ನಿರಂತರವಾಗಿ ಅಪಮಾನ ಆಗುತ್ತಿದೆ. ಇದನ್ನು ಖಂಡಿಸಿ, ಮುಂದಿನ 10 ದಿನಗಳ ಒಳಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಚಿಂತನೆ ಇದೆ ಎಂದು ಚಿತ್ತಾಪುರ ತಾಲೂಕು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಬೇಕಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯನ್ನು ಮಂಗಳೂರಿಗೆ ಸ್ಥಳಾಂತರಿಸುವ ಮೂಲಕ … Read more

ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ

ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ. ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ … Read more

error: Content is protected !!