ಮಂಕಿಪಾಕ್ಸ್ : ನಾಳೆ ಮಹತ್ವದ ಸಭೆ

ಸುದ್ದಿ360 ದಾವಣಗೆರೆ, ಆ. 01: ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ನಾಳೆ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ದಾವಣಗೆರೆಗೆ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಂತಹ ಸಂದರ್ಭ ಜಿಎಂಐಟಿ ಹಲಿಪ್ಯಾಡ್ ನಲ್ಲಿ  ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ವಿಶೇಷವಾಗಿ ಪ್ರಯಾಣಿಕರ ತಪಸಾಣೆ ಮತ್ತು ಬೇರೆ ಬೇರೆ ಕ್ರಮಗಳ ಬಗ್ಗೆ ನಾಳೆ ಮಹತ್ವದ ಸಭೆಯನ್ನು ಆರೋಗ್ಯ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು. ಈ ವೇಳೆ … Read more

ನಮ್ಮದು ರಾಷ್ಟ್ರೀಯ ಪಕ್ಷ – ರಾಷ್ಟ್ರೀಯತೆಯೇ ನಮ್ಮ ನಿಲುವು: ಸಿಎಂ ಬೊಮ್ಮಾಯಿ

ಸುದ್ದಿ360 ದಾವಣಗೆರೆ, ಆ. 01: ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯೇ ನಮ್ಮ ನಿಲುವು. ಯಾರಿಗೂ ಬೇಧ-ಭಾವ ಮಾಡುವ ಪ್ರಶ್ನೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ತಿಳಿಸಿದರು. ಇಂದು ದಾವಣಗೆರೆಗೆ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಂತಹ ಸಂದರ್ಭ ಜಿಎಂಐಟಿ ಹಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರಿಗೂ ಬೇಧಭಾವ ಮಾಡುವ ಮಾತೇ ಇಲ್ಲ. ಅಂತಹ ವಿಚಾರಗಳು ಹಿಂದಿನ ಸರ್ಕಾರಗಳು ಅವರ ಕಾಲದಲ್ಲಿ ಏನೇನು ಮಾಡಿದ್ದಾರೆ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಸುದ್ದಿಗಾರರ … Read more

ಸಿದ್ದರಾಮಯ್ಯ ಅಮೃತ ಮಹೋತ್ಸವ: ಎಸ್ ಎಸ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ

ಸುದ್ದಿ360 ದಾವಣಗೆರೆ ಜು.31: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆ ಆ.1ರ ಸೋಮವಾರ ಮಧ್ಯಾಹ್ನ 2.30 ಗಂಟೆಗೆ ಆನೆಕೊಂಡದ ಬಸವೇಶ್ವರ ದೇವಸ್ಥಾನದ ಆವರಣದಿಂದ ಬೃಹತ್ ಬೈಕ್ ರ್ಯಾಲಿಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಆನೆಕೊಂಡದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕೊರಚರಹಟ್ಟಿ, ಅರಳಿಮರ ಸರ್ಕಲ್, ಹಳೆ ಬೇತೂರ್ ರಸ್ತೆ, ಭಾಷಾ ನಗರ ಮುಖ್ಯ ರಸ್ತೆ ಮುಖಾಂತರ ಅಕ್ಬರ್ ರಾಜ್ ಸರ್ಕಲ್, ಎಸ್. ಪಿ.ಎಸ್ ನಗರ, ಹೊಂಡದ ಸರ್ಕಲ್ ಮಾರ್ಗವಾಗಿ ಚೌಕಿಪೇಟೆ, ಬಂಬೂ … Read more

ಜಿಎಂ ಫಾರ್ಮಸಿ ಕಾಲೇಜಿನಲ್ಲಿ ಅಂತರ ವಲಯ ಕಬಡ್ಡಿ ಪಂದ್ಯಾವಳಿ

ಸುದ್ದಿ360, ದಾವಣಗೆರೆ ಜು.30: ನಗರದ ಜಿಎಂ ಫಾರ್ಮಸಿ ಕಾಲೇಜಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಅಡಿಯಲ್ಲಿ ಬೆಳಗಾಂ ಜೋನ್ ಅಂತರ ವಲಯ ಕಬ್ಬಡ್ಡಿ ಪಂದ್ಯಾವಳಿಗಳು ಇದೇ ಮೊದಲ ಬಾರಿ ಜಿಎಂ ಫಾರ್ಮಸಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಎಲ್ಲಾ ಆಟಗಾರರಿಗೂ ಪಂದ್ಯಾವಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಿದ್ದು, ಯಾವುದೇ ಅಡಚಣೆಗೂ ಅವಕಾಶವನ್ನು ಕೊಡದೆ ವ್ಯವಸ್ಥಿತವಾಗಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದ್ದು, ಪಂದ್ಯಾವಳಿಗಳು ಯಶಸ್ವಿಯಾಗಿ ಮುಕ್ತಾಯವಾಗಲಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಬೆಂಗಳೂರು, ಚಿತ್ರದುರ್ಗ, ಗದಗ ದಾವಣಗೆರೆ, ಬಳ್ಳಾರಿ ಹೀಗೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು … Read more

ರಾಜಕೀಯ ಕಾರಣಕ್ಕೆ ಕೊಲೆಗಳಾಗುತ್ತಿರುವುದು ನಮ್ಮ ದೌರ್ಬಾಗ್ಯ: ಸಚಿವ ಜೆ.ಸಿ. ಮಾಧುಸ್ವಾಮಿ

ಚುನಾವಣಾ ವರ್ಷವಾದ್ದರಿಂದ ಪ್ರಚೋದನೆಗಳು ಹೆಚ್ಚಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಸುದ್ದಿ360, ದಾವಣಗೆರೆ ಜು.30: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿಲ್ಲ. ಕೆಲವೇ ಘಟನೆ ಹೊರತುಪಡಿಸಿದರೆ, ಕಾಂಗ್ರೆಸ್ ಕಾಲದಲ್ಲಿ ನಡೆದಷ್ಟು ಪ್ರತಿಭಟನೆ, ಹೋರಾಟ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿಲ್ಲ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆಗಳಾಗಿದ್ದಕ್ಕೆ … Read more

ಮುಖ್ಯಮಂತ್ರಿ, ಗೃಹ ಸಚಿವರು ಸಮರ್ಥರಿದ್ದಾರೆ – ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರಿಸಿರುವುದು ಸ್ವಾಗತಾರ್ಹ ಸುದ್ದಿ360 ದೊಡ್ಡಬಳ್ಳಾಪುರ, ಜು.30: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಪ್ರಕರಣವನ್ನು ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ(NIA) ಹಸ್ತಾಂತರಿಸಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯತ ಸಮಾಜ ಆಯೋಜಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ … Read more

ನೂರಾರು ನೀರುನಾಯಿಗಳ ಚಿನ್ನಾಟ ನೋಡುವ ಭಾಗ್ಯ!  ಎಲ್ಲಿ ಅಂತೀರಾ. . .?

ಸುದ್ದಿ360 ವಿಜಯನಗರ (ಹೊಸಪೇಟೆ) ಜು.30: ತುಂಗಭದ್ರಾ ನದಿ ಹಿನ್ನೀರು ಪ್ರದೇಶದ  ಗುಂಡಾ ಸಸ್ಯೋದ್ಯಾನವನ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಶನಿವಾರ  ಕಾದಿತ್ತು ನೋಡಿ ನೂರಾರು ನೀರು ನಾಯಿಗಳ ಚಿನ್ನಾಟದ ದೃಶ್ಯ. ಸಸ್ಯೋದ್ಯಾನವನದ ಬಳಿಯ ಹಿನ್ನೀರಿನಲ್ಲಿ ಈ ರೀತಿಯಾಗಿ ಕಾಣಿಸಿಕೊಂಡ ನೀರು ನಾಯಿಗಳ ಗುಂಪು ಪ್ರವಾಸಿಗರ ಮನಕೆ ಕಚಗುಳಿ ಕೊಟ್ಟಿದೆ. ಕಳೆದ ಎರಡು ವರ್ಷದಿಂದ ತುಂಗಭದ್ರಾ ಹಿನ್ನೀರು ಪ್ರದೇಶ ನೀರಿನಿಂದ ತುಂಬಿದ್ದ ಕಾರಣ ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶವು ಹತ್ತಾರು ವಿವಿಧ ಜೀವ ಸಂಕುಲದ ತಾಣವಾಗಿ ಮಾರ್ಪಟ್ಟಿದ್ದು, ಅರಣ್ಯ ಇಲಾಖೆಯಿಂದ … Read more

ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ ಮಾಡೋದರಿಂದ ಗೆಲ್ಲೋಕೆ ಸಾಧ್ಯಾನಾ? – ಉತ್ಸವದಲ್ಲಿ ಜನ ಸೇರೋದು ಕಾಮನ್

ಬರೋಬ್ಬರಿ 11 ಲಕ್ಷ ಜನ ಸೇರಿದ್ದ ಹಾವೇರಿಯಲ್ಲೇ ನಾವು ಸೋತಿದ್ವಿ : ಸಚಿವ ಮಾಧುಸ್ವಾಮಿ ಸುದ್ದಿ360, ದಾವಣಗೆರೆ ಜು.30: ಉತ್ಸವಗಳಲ್ಲಿ ಜನ ಸೇರಿಸೋದು ಎಲ್ಲಾ ಕಾಮನ್. ರಾಜಕೀಯದಲ್ಲಿ ಎರಡ್ಮೂರು ಲಕ್ಷ ಜನ ಸೇರಿಸಿ ಬಿಟ್ಟರೆ ಏನೋ ಮಹತ್ವದ್ದು ಆಗಿ ಬಿಡುತ್ತದೆ ಅನ್ನೋ ಕಾಲ ಈಗ ಇಲ್ಲ ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ಸಿದ್ದರಾಮಯ್ಯ ಅಮೃತ ಮಹೋತ್ಸವ ಕುರಿತು ಪ್ರತಿಕ್ರಿಯಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಯಡಿಯೂರಪ್ಪನವರ ಜೊತೆ ಕೆಜೆಪಿಗೆ … Read more

ಸಿದ್ದರಾಮಯ್ಯ ಹೇಳುವುದೆಲ್ಲಾ ವೇದವಾಕ್ಯವಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜು.29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದೆಲ್ಲಾ ವೇದವಾಕ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ಧರಾಮಯ್ಯ ಅವರ ಕಾಲದಲ್ಲಿ 32 ಸರಣಿ ಕೊಲೆಗಳಾಗಿದ್ದವು. ಆಗ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಎಲ್ಲಾ ವಿಷಯಗಳಲ್ಲಿ ರಾಜಕಾರಣವನ್ನು ಮಾಡಬಾರದು. ಅವರ ಹೇಳಿಕೆಗೆ ಹೆಚ್ಚಿನ ಮಹತ್ವವಿಲ್ಲ ಎಂದರು. ಶಾಸಕ ತನ್ವೀರ್ ಸೇಠ್ ಮೇಲೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಯ ಸುಮಾರು 200 ಜನರನ್ನು ದಾಳಿ ನಡೆಸಿದ … Read more

ರಾಷ್ಟ್ರೀಯ  ತನಿಖಾ ದಳಕ್ಕೆ ಪ್ರವೀಣ್ ಹತ್ಯೆ ಪ್ರಕರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜು. 29: ಸುಳ್ಯದ ಬಿಜೆಪಿ ಮುಖಂಡ  ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ  ತನಿಖಾ ದಳಕ್ಕೆ (NIA) ವಹಿಸಲು ತೀರ್ಮಾನಿಸಲಾಗಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ  ಶಕ್ತಿಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರವೀಣ್ ಹತ್ಯೆ ವ್ಯವಸ್ಥಿತವಾಗಿ ಆಗಿದೆ ಹಾಗೂ ಇದೊಂದು  ಅಂತರರಾಜ್ಯ ವಿಚಾರವಾಗಿದೆ. ಡಿಜಿ, ಐಜಿ ಅವರ ಬಳಿ ಚರ್ಚಿಸಲಾಗಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸೂಚಿಸಲಾಗಿದೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮಾಹಿತಿ ಪಡೆದ ನಂತರ ಗೃಹ … Read more

error: Content is protected !!