ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್‍ ಜೀವನ್‍ ಸಾಗರ್ ಪ್ರಥಮ : ಮಂಜುನಾಥ್ ಗಡಿಗುಡಾಳ್‍ ರಿಂದ ಸನ್ಮಾನ

ಸುದ್ದಿ360 ದಾವಣಗೆರೆ, ಜೂನ್ 28: ಆತ್ಮ ರಕ್ಷಣೆ ಮತ್ತು ಏಕಾಗ್ರತೆಯ ಕರಾಟೆ ಕಲೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಕಠಿಣ ಅಭ್ಯಾಸ ಮಾಡಿರುವ ಇಲ್ಲಿನ ಜಯನಗರದ ಕರಾಟೆ ಕೇಸರಿ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಎಂ.‌ ಜೀವನ್ ಸಾಗರ್ ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯದ ಹಿರಿಮೆಗೆ ಕಾರಣರಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ದಾವಣಗೆರೆಯನ್ನು ಗುರುತಿಸುವಂತೆ ಮಾಡಿರುವ ಎಂ.‌ ಜೀವನ್ ಸಾಗರ್ ಅವರನ್ನು ಎಂಸಿಸಿ … Read more

47ನೇ ಜಿಎಸ್‍ಟಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ

ಸುದ್ದಿ360 ಚಂಡಿಗಡ, ಜೂನ್ 28: ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರು ಇಂದು ಚಂಡಿಗಡದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಎರಡು ದಿನಗಳ 47ನೇ ಜಿಎಸ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಣಿಕೆ ನೀಡಿ ಗೌರವಿಸಿದರು. ನಂತರ ಕೆಲಕಾಲ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಯಿತು.  ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ , ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ … Read more

ದಾವಣಗೆರೆಗೆ ಚಿನ್ನದ ಕಿರೀಟ ತೊಡಿಸಿದ ಗಿರೀಶ್

ಸುದ್ದಿ360 ದಾವಣಗೆರೆ, ಜೂನ್ 28: ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನ ಬಿ.ಎ. ಪದವಿಯ  ಮೂರನೇ ವರುಷದ ವಿಧ್ಯಾರ್ಥಿ ಗಿರಿಶ್ ಬಿ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಚಾಂಪಿಯನ್ ಶಿಪ್ 2022 ರ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಹರಿಹರ ತಾಲ್ಲೂಕು ಗುತ್ತೂರು ಹಳ್ಳಿಯ ನೀಲಮ್ಮ ಮತ್ತು ಬಸಪ್ಪ ಇವರ ಪುತ್ರ ಗಿರೀಶ್ ಬಿ. ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ದೇವರಾಜ್ ಅರಸ್ ಕಾಲೇಜಿನಲ್ಲಿ ಬಿ.ಎ. ಪದವಿಯ ಮೂರನೇ ವರುಷದಲ್ಲಿ … Read more

ಸ್ಕೌಟ್ಸ್ ಗೈಡ್ಸ್ ಶಿಬಿರಕ್ಕೆ ದಾವಣಗೆರೆ ವಿದ್ಯಾರ್ಥಿಗಳು

ಸುದ್ದಿ360 ಬೆಳಗಾವಿ, ಜೂನ್ 28: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ. ಜು.01 ರಿಂದ 05 ರವರೆಗೆ ನಡೆಯುವ ನ್ಯಾಷನಲ್ ರೋವರ್ಸ್ ಮತ್ತು ರೇಂಜರ್ಸ್ ಕಾರ್ನಿವಲ್ ಟು ಕಮರೆಟ್ ಅಜಾದಿ ಕಾ ಅಮೃತ ಮಹೋತ್ಸವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುವ ಶಿಬಿರದಲ್ಲಿ ನಮ್ಮ ದಾವಣಗೆರೆ ಜಿಲ್ಲೆಯ ರೋವರ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನವೀನ್ ಉ ಚಾಣಕ್ಯ, ಮುಸ್ತಫ ,ಗುರುಬಸವರಾಜ್, ರೇಂಜರ್ಸ್ ವಿದ್ಯಾರ್ಥಿಗಳು ರೋಹಿಣಿ, ತನು, ಕಾವ್ಯ ದಾವಣಗೆರೆ ಇವರು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ … Read more

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ

ಜಿಎಸ್ ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ಚಂದೀಗಢಗೆ ಪ್ರವಾಸ ಸುದ್ದಿ 360 ಬೆಂಗಳೂರು, ಜೂ. 27:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಸೋಮವಾರ (ಜೂನ್ 27) ಸಂಜೆ ಚಂಡೀಗಢ ಕ್ಕೆ ತೆರಳಿದರು. ಅವರು ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್. ಟಿ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದು, ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಜಿ ಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ … Read more

ತುರ್ತು ಪರಿಸ್ಥಿತಿಯಲ್ಲಿಯೂ  ದೇಶದ ರಾಜಕಾರಣವನ್ನು ಬದಲಾಯಿಸಿದ್ದು ಜನಶಕ್ತಿ: ಸಿಎಂ

ಸುದ್ದಿ360 ಬೆಂಗಳೂರು, ಜೂನ್ 26: ತುರ್ತು ಪರಿಸ್ಥಿತಿಯಲ್ಲಿಯೂ  ಇಡೀ ದೇಶದ ರಾಜಕಾರಣ ಹಾಗೂ ಪ್ರಜಾಪ್ರಭುತ್ವವನ್ನು  ದೊಡ್ಡ ಪ್ರಮಾಣದಲ್ಲಿ ಬದಲಾಯಿಸಿದ್ದು ಜನಶಕ್ತಿ ಎಂದು ಮುಖ್ಯಮಂತ್ರಿ ಬಸವರಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ಪ್ರಯುಕ್ತ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಮಾತನಾಡುತ್ತಿದ್ದರು. ದೇಶದಲ್ಲಿ ಇಂಥದ್ದು ಘಟಿಸಿತ್ತು ಹಾಗೂ ಈ ದೇಶವನ್ನು ಉಳಿಸುವ ಶಕ್ತಿ ಜನಸಾಮಾನ್ಯರಿಗಿದೆ ಎನ್ನುವುದನ್ನು ತಿಳಿಸಲೆಂದು  ಕರಾಳ ದಿನಾಚರಣೆಯನ್ನು  ನಾವು ಆಚರಿಸಬೇಕಿದೆ. ಅಧಿಕಾರ ಎಂಬುದು ಸರ್ವ ಗುಣಧರ್ಮಗಳನ್ನು ಮರೀಚಿಕೆಯಾಗಿ  ಮಾಡಿ ತಾನು … Read more

ಜೂ.27 ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಚುನಾವಣೆ

ಸುದ್ದಿ360, ದಾವಣಗೆರೆ, ಜೂ.25: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ 2022-27ನೇ ಸಾಲಿನ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಘಟಕದ ಚುನಾವಣ ಪ್ರಕ್ರಿಯೆ ಇದೇ ಜೂನ್‍ 27ರಿಂದ ಪ್ರಾರಂಭವಾಗಿ ಜುಲೈ 24ರವರೆಗೆ ಮೂರ ಹಂತಗಳಲ್ಲಿ ನಡೆಯಲಿರುವುದಾಗಿ ಜಿಲ್ಲಾಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದು ಮತ್ತು ಸಹ ಶಿಕ್ಷಕರಲ್ಲಿ ಸ್ನೇಹ ಸೌಹಾರ್ಧತೆ, … Read more

ಕೆಐಎ ನಲ್ಲಿ ಶೀಘ್ರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜೂ. 24: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲಿಯೇಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಲು ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಿಂದ ಇಂದು ಹಿಂದಿರುಗಿದ ಸಂದರ್ಭದಲ್ಲಿ ಬೆಂಗಳೂರು ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿಯ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಮಾನನಿಲ್ದಾಣದಲ್ಲಿರುವ ಕೆಂಪೇಗೌಡರ ಬೃಹತ್ ಮೂರ್ತಿ ಅಂತಿಮ ಘಟ್ಟಕ್ಕೆ ಬಂದಿದೆ. ಸ್ಟೀಲ್ ಮತ್ತು ಕಂಚಿನಿಂದ ಮಾಡಲಾಗಿರುವ ಸುಮಾರು 108 ಅಡಿ ಎತ್ತರದ ಪ್ರತಿಮೆ 220 ಟನ್ … Read more

ಹೈವೆಯಲ್ಲಿ ಹೊತ್ತಿ ಉರಿದ ಕಾರು

ಸುದ್ದಿ360, ವಿಜಯನಗರ, ಜೂ.24: ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾರಿನಲ್ಲಿ ಏಕಾಏಕಿ  ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗಧಗನೆ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಸಂಜೆ ನಡೆದಿದೆ. ಹೊಸಪೇಟೆಯಿಂದ ಬಳ್ಳಾರಿ  ರಾಷ್ಟ್ರೀಯ ಹೆದ್ದಾರಿ 63 ರ ಧರ್ಮಸಾಗರದ ಬಳಿ ಇರುವ ಖನಿಜ ತನಿಖಾ ಠಾಣೆಯ ಘಟನೆ ಸಮೀಪ ನಡೆದಿದ್ದು, ರಸ್ತೆಯಲ್ಲಿ ನಿಂತಿದ್ದ ಮಾರುತಿ 800 ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, … Read more

ಹಳ್ಳದಲ್ಲಿ ಏಳು ಭ‍್ರೂಣಗಳು – ಭ್ರೂಣಲಿಂಗ ಪತ್ತೆ-ಹತ್ಯೆ ಶಂಕೆ

ಸುದ್ದಿ 360 ಬೆಳಗಾವಿ ಜೂ. 24: ಜಿಲ್ಲೆಯ ಮೂಡಲಗಿ ಪಟ್ಟಣ ಮಧ್ಯೆ ಹರಿಯುವ  ಹಳ್ಳವೊಂದರಲ್ಲಿ ಹತ್ಯೆಗೊಳಗಾದ  ಏಳು ಭ್ರೂಣಗಳು ಚಾಕೊಲೇಟ್‍ ಡಬ್ಬಿಯಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶುಕ್ರವಾರ ಬೆಳಗ್ಗೆ ಹಳ್ಳಕ್ಕೆ ಬಟ್ಟೆ ತೊಳೆಯಲು ಬಂದ ಜನ ಈ ಭ್ರೂಣ ತುಂಬಿದ ಬಾಟಲ್‍ಗಳು ದಂಡೆಯಲ್ಲಿ ಬಿದ್ದಿರುವದನ್ನು ಕಂಡು ಹೌಹಾರಿದ್ದಾರೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭ್ರೂಣ ಲಿಂಗ ಹತ್ಯೆ ಕುರಿತಾಗಿ  ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ಭ್ರೂಣಗಳು ಹೀಗೆ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ತೀವ್ರ … Read more

error: Content is protected !!