ನಕಲಿ ಜಾತಿ ಪ್ರಮಾಣ ಪತ್ರ: ವಿಶೇಷ ನ್ಯಾಯಾಲಯ ರಚನೆಗೆ ಆಗ್ರಹ

ಸುದ್ದಿ360,ದಾವಣಗೆರೆ,ಜು.05: ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಿ, ಬೇಡ ಜಂಗಮ ಸೇರಿದಂತೆ ಹಲವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಿಗಬೇಕಾದ ಸೌಲತ್ತುಗಳನ್ನು ಕಸಿದುಕೊಳ್ಳುತ್ತಿರುವವ ಸಂಖ್ಯೆ ದಿನೇ ದಿನೇ ಹೆಚ್ಚುತಲಿದ್ದು, ಈ ಕುರಿತ ಸಮಗ್ರ ತನಿಖೆಗೆ ವಿಶೇಷ ನ್ಯಾಯಾಲಯ ರಚಿಸುವಂತೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಆಗ್ರಹಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, 1981ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1553 ಪುರುಷರು ಹಾಗೂ 1482 ಮಹಿಳೆಯರು ಸೇರಿ ಬೇಡ ಜಂಗಮ ಸಮುದಾಯದ ಒಟ್ಟು 3035 ಮಂದಿ … Read more

ಮುಂದಿನ ಚುನಾವಣೆಯಲ್ಲಿ ರಾಜಕೀಯ ನಿರ್ಣಯ ನಮ್ಮದು ಎಚ್ಚರಿಕೆ

ಎಸ್ ಸಿ-ಎಸ್ ಟಿ ಸಂಘಟನೆಗಳ  ಒಕ್ಕೂಟದ ಮುಖಂಡ ಡಾ. ಎನ್. ಮೂರ್ತಿ ಹೇಳಿಕೆ ಸುದ್ದಿ360 ದಾವಣಗೆರೆ, ಜು.02:  ರಾಜ್ಯದಲ್ಲಿ ಎಲ್ಲ ದಲಿತ ಸಂಘಟನೆಗಳೂ ಒಂದಾಗಿವೆ. ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಗಳು ಎಸ್ ಸಿ, ಎಸ್ ಟಿಯ ಎಲ್ಲ ಸ್ವಾಮೀಜಿಗಳನ್ನು ಒಂದುಗೂಡಿಸುವಲ್ಲಿ, ದಲಿತ ಸಂಘಟನೆಗಳನ್ನು ಸಮಷ್ಠಿ ಶಕ್ತಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕರ್ನಾಟಕ ಎಸ್ ಸಿ-ಎಸ್ ಟಿ ಸಂಘಟನೆಗಳ  ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿಯ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ … Read more

ತುರ್ತು ಪರಿಸ್ಥಿತಿಯಲ್ಲಿಯೂ  ದೇಶದ ರಾಜಕಾರಣವನ್ನು ಬದಲಾಯಿಸಿದ್ದು ಜನಶಕ್ತಿ: ಸಿಎಂ

ಸುದ್ದಿ360 ಬೆಂಗಳೂರು, ಜೂನ್ 26: ತುರ್ತು ಪರಿಸ್ಥಿತಿಯಲ್ಲಿಯೂ  ಇಡೀ ದೇಶದ ರಾಜಕಾರಣ ಹಾಗೂ ಪ್ರಜಾಪ್ರಭುತ್ವವನ್ನು  ದೊಡ್ಡ ಪ್ರಮಾಣದಲ್ಲಿ ಬದಲಾಯಿಸಿದ್ದು ಜನಶಕ್ತಿ ಎಂದು ಮುಖ್ಯಮಂತ್ರಿ ಬಸವರಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ಪ್ರಯುಕ್ತ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಮಾತನಾಡುತ್ತಿದ್ದರು. ದೇಶದಲ್ಲಿ ಇಂಥದ್ದು ಘಟಿಸಿತ್ತು ಹಾಗೂ ಈ ದೇಶವನ್ನು ಉಳಿಸುವ ಶಕ್ತಿ ಜನಸಾಮಾನ್ಯರಿಗಿದೆ ಎನ್ನುವುದನ್ನು ತಿಳಿಸಲೆಂದು  ಕರಾಳ ದಿನಾಚರಣೆಯನ್ನು  ನಾವು ಆಚರಿಸಬೇಕಿದೆ. ಅಧಿಕಾರ ಎಂಬುದು ಸರ್ವ ಗುಣಧರ್ಮಗಳನ್ನು ಮರೀಚಿಕೆಯಾಗಿ  ಮಾಡಿ ತಾನು … Read more

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಬೆಂಗಳೂರಿಗೆ

ಸುದ್ದಿ360 ಬೆಂಗಳೂರು, ಜೂನ್ 18: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ  ಬೆಂಗಳೂರು ಪ್ರವಾಸದಲ್ಲಿದ್ದು, ಪಕ್ಷದ ರಾಷ್ಟ್ರೀಯಒಬಿಸಿ ಮೋರ್ಚಾದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿನ ಯಲಹಂಕ ಸಮೀಪದ ರಮಡಾ ರೆಸಾರ್ಟ್‍ನಲ್ಲಿ ನಡೆಯುತ್ತಿರುವ ಮೂರು ದಿನಗಳ ಸಮಾವೇಶ ಶನಿವಾರ ಮುಕ್ತಾಯವಾಗಲಿದ್ದು, ಈ ವೇಳೆ ನಡ್ಡಾ ಅವರು ಪಕ್ಷದ  ಒಬಿಸಿ ಶಾಸಕರು, ವಿಧಾನಪರಿಷತ್‍ ಸದಸ್ಯರು, ಮತ್ತು ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಿಳಿನ್‍ ಕುಮಾರ್‍ ಕಟೀಲ್‍ ಮತ್ತು ರಾಜ್ಯ … Read more

ಪಿಎಸ್‌ಐ ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ತಕ್ಕ ಪಾಠ: ಗೃಹ ಮಂತ್ರಿ

ದಾವಣಗೆರೆ, ಜೂ.೦೮: ಪಿಎಸ್‌ಐ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಯಾರನ್ನೂ ಬಿಡುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಡಿವೈಎಸ್ಪಿಯವರನ್ನು ಕೂಡ ಬಂಧಿಸಲಾಗಿದೆ. ಅಲ್ಲದೆ ಸಿಐಡಿಯಿಂದ ಉತ್ತಮ ಟೀಮ್ ವರ್ಕ್ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅವರು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪೊಲೀಸ್ ಘಟಕದ ಪರಿವೀಕ್ಷಣಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಕ್ಸಾಮಿನೇಷನ್ ಎಂದರೆ ಇಂತಹ ಭ್ರಷ್ಟಾಚಾರಗಳನ್ನು ಮಾಡಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಇದು ಇಂದಿನದಲ್ಲ … Read more

ಪೆನ್ಷನ್ ಬದಲಿಗೆ ಸರ್ಕಾರಕೆ ತೆರಿಗೆ ಕಟ್ಟುವಂತೆ ಬೆಳೆಯಿರಿ

ವಿಕಲಚೇತನರ ಉದ್ಯೋಗಮೇಳದಲ್ಲಿ ಡಾ. ಮಹಾಂತೇಶ ಜಿ. ಕಿವಡಸಣ್ಣವರ ಆಶಯ ದಾವಣಗೆರೆ, ಮೇ ೨೦: ಎಲ್ಲಾ ಇದ್ದು ಏನೂ ಮಾಡಲಾಗದ ಸನ್ನಿವೇಶದಲ್ಲಿ ಇಲ್ಲ ಎನ್ನುವುದರ ಮದ್ಯೆ ಎಲ್ಲವನ್ನೂ ಹುಡುಕಿಕೊಳ್ಳಲು ಹೊರಟಿರುವ ವಿಕಲಚೇತನರ ಉದ್ಯೋಗಮೇಳ ನಮಗೆ ಸ್ಪೂರ್ಥಿದಾಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಚನ್ನಪ್ಪ ಅಭಿಪ್ರಾಯಪಟ್ಟರು. ಸಮರ್ಥನಂ ಅಂಗವಿಕಲ ಸಂಸ್ಥೆ ವತಿಯಿಂದ ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧಮಕ್ಕಳ ಸರ್ಕಾರಿ ಪಾಠ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯುವ ವಿಕಲಚೇತನರ ಉದ್ಯೋಗ ಮೇಳವನ್ನು ಗಿಡಕ್ಕೆ ನೀರೆರೆಯುವ … Read more

error: Content is protected !!