ಸ್ವಚ್ಛತಾ ಸೇವಾ ಕಾರ್ಯಕ್ರಮ

ಸುದ್ದಿ360 ದಾವಣಗೆರೆ, ಸೆ.30: ಜಿಲ್ಲಾ ಪೊಲೀಸ್ ಕಚೇರಿ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗ ಮತ್ತು ರೋಟರಿ ಸಂಸ್ಥೆ ಸಹಕಾರದೊಂದಿಗೆ ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್. ಬಿ. ಬಸರಗಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ರವಿಕುಮಾರ್ ಎ.ಜೆ. ರೋಟರಿ ಅಧ್ಯಕ್ಷರಾದ ಕುಸುಮ ವಿಜಯಾನಂದ, ರೋ.ಪುಟ್ಟೇಶಿ,  ರೋ.ಆರ್.ಟಿ.  ಮೃತ್ಯುಂಜಯ, ಮತ್ತು ಪೊಲೀಸ್ ಉಪ ಅಧೀಕ್ಷಕರುಗಳಾದ ಮಲ್ಲೇಶ್,  ಪ್ರಕಾಶ್ ಪಿ. ಬಿ ಹಾಗೂ ಪೊಲೀಸ್ ನಿರೀಕ್ಷಕರು ಮತ್ತು ಉಪ ನಿರೀಕ್ಷಕರು, ಸಹಾಯಕ ಉಪ ನಿರೀಕ್ಷಕರು ಮತ್ತು ಎಲ್ಲಾ ಪೋಲಿಸ್  ಸಿಬ್ಬಂದಿ ವರ್ಗ ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment

error: Content is protected !!