ಪ್ರತಿಭಾಕಾರಂಜಿ ವಿಜೇತ ಮಕ್ಕಳಿಗೆ ಅಭಿನಂದನೆ

ಸುದ್ದಿ360 ದಾವಣಗೆರೆ ಸೆ.30: ನಗರದ ಹಳೇಪೇಟೆಯ ಶತಮಾನದ ಶಾಲೆಯಾದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದಾವಣಗೆರೆ ಹಳೇಪೇಟೆ ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು, ವಿಜೇತ ಮಕ್ಕಳಿಗೆ ಶಾಲಾವತಿಯಿಂದ ಅಭಿನಂದಿಸಲಾಯಿತು.

ದಾವಣಗೆರೆ ಹಳೇಪೇಟೆ ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ  ಹಳೇಪೇಟೆ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಏಳನೆಯ ತರಗತಿಯ ಚಂದನ್ ಸಿ.ಆರ್.(ಇಂಗ್ಲಿಷ್ ಕಂಠಪಾಠ ದಲ್ಲಿ ಪ್ರಥಮ ಸ್ಥಾನ) ಏಳನೆಯ ತರಗತಿಯ ವಿದ್ಯಾರ್ಥಿ ಶಿವಾಜಿ ರಾವ್ ಎ (ಕಥೆ ಹೇಳುವುದರಲ್ಲಿ ಪ್ರಥಮ ಸ್ಥಾನ), ಆರನೆಯ ತರಗತಿಯ ವಿದ್ಯಾರ್ಥಿನಿ ಬೃಂದಾ ಆರ್(ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ), ಎಂಟನೆಯ ತರಗತಿಯ ವಿದ್ಯಾರ್ಥಿ ಅಭಿಷೇಕ್ ವಿ (ಕವನ ವಾಚನ ದಲ್ಲಿ ತೃತೀಯ ಸ್ಥಾನ), ಆರನೆಯ ತರಗತಿಯ ವಿದ್ಯಾರ್ಥಿನಿ ಅರ್ಚನ ಹೆಚ್.ಎನ್(ಕನ್ನಡ ಕಂಠಪಾಠದಲ್ಲಿ ತೃತೀಯ ಸ್ಥಾನ), ಮೂರನೇ ತರಗತಿಯ ವಿದ್ಯಾರ್ಥಿ ಭುವನ್ ಕಥೆ ಹೇಳುವುದರಲ್ಲಿ ತೃತೀಯ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಲೆಯ ಶಿಕ್ಷಕಿಯರಾದ ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್, ಅನುಸೂಯ ಆರ್.ಸಿ, ಇತರರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು.

ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿರುವ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದನೆಗಳು ಸಲ್ಲಿಸಲಾಯಿತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯ ರಾದ ಲೋಕಣ್ಣ ಮಾಗೋಡ್, ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ(ಎಸ್.ಡಿ.ಎಂ.ಸಿ) ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ನಮಿತಾ ಎಂ, ಎನ್, ಅನಸೂಯಾ ಆರ್.ಸಿ, ಸುಜಾತ, ಅವರು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಮತ್ತು ಪದಕಗಳನ್ನು ವಿತರಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ರಾದ ಲೋಕಣ್ಣ ಮಾಗೋಡ್, ರಮೇಶ್ ಸಿ ದಾಸರ್,  ಶಿಕ್ಷಕಿಯರಾದ ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್, ಅನಸೂಯಾ ಆರ್.ಸಿ, ಸುಜಾತ, ಸಂಪತ್ ಕುಮಾರಿ, ವಿಜಯಕುಮಾರಿ, ಜಯಶ್ರೀ, ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!