6 ನೇ ಗ್ಯಾರಂಟಿ ಮರೆತ ಸರ್ಕಾರ – ಸಿಪಿಐ ನಿಂದ ಜನಾಗ್ರಹ ಜನಾಂದೋಲನ ಚಳುವಳಿ- ಪೋಸ್ಟರ್ ಬಿಡುಗಡೆ

ಸುದ್ದಿ360 ದಾವಣಗೆರೆ (davangere) ಅ.04: ರೈತರ ಮತ್ತು ಕಾರ್ಮಿಕರ ದುಡಿಯುವ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ  ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕೂಡಲೇ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸುವಂತೆ  ಸಿಪಿಐ ಹಿರಿಯ ಮುಖಂಡ ಹಾಗೂ  ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್  ಒತ್ತಾಯಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು.

ನಗರದ ಜಯದೇವ ವೃತ್ತದಲ್ಲಿ ಇಂದು ‘ಜನಾಗ್ರಹ ಜನಾಂದೋಲನ ಚಳುವಳಿ’ (anagraha Janandola Movement) ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ 6ನೇ ಗ್ಯಾರಂಟಿಯ ಭರವಸೆಯನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು  ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಆರನೇ ಗ್ಯಾರಂಟಿಯನ್ನು ಮರೆತಿದ್ದು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಈ ನಿಟ್ಟಿನಲ್ಲಿ ಅ.7ರಂದು ನಾವು ಹಮ್ಮಿಕೊಂಡಿರುವ  ‘ಜನಾಗ್ರಹ ಜನಾಂದೋಲನ’ದ ಭಾಗವಾಗಿ ಇಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸರ್ಕಾರ ಶೀಘ್ರವಾಗಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿಗಳಾದ ಮಹಮ್ಮದ್ ಭಾಷಾ ಜಗಳೂರು, ಮಹಮ್ಮದ್ ರಫೀಕ್ ಚೆನ್ನಗಿರಿ, ಟಿ ಎಚ್ ನಾಗರಾಜ್ ಹರಿಹರ, ಮುಖಂಡರುಗಳಾದ ವಿ ಲಕ್ಷ್ಮಣ, ಎಚ್ಎಸ್ ಚಂದ್ರು, ನಿಟುವಳ್ಳಿ ಬಸವರಾಜ, ಮಹೇಶ, ಸರೋಜಾ, ಅಜೀಜ್ ಶೇಖರ ನಾಯಕ, ಕುಮಾರ ನಾಯಕ, ಸಿದ್ದಲಿಂಗೇಶ್, ಜಯಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!