ಮಟ್ಕಾ ಜೂಜಾಟ -ಸಿ.ಇ.ಎನ್ ಅಪರಾಧ ಪೊಲೀಸರ ದಾಳಿ: 62,700/- ನಗದು ವಶ

ಸುದ್ದಿ360, ದಾವಣಗೆರೆ (Davangere): ಸೆ.14: ಖಚಿತ ಮಾಹಿತಿ ಮೇರೆಗೆ ಮಟ್ಕಾ ಚೂಜಾಟ (matka- gambling) ನಡೆಸುತ್ತಿರುವವರ ಮೇಲೆ ಸೆ.13ರ ಬುಧವಾರ  ದಾಳಿ (raid) ಮಾಡಿರುವ ಸಿ.ಇ.ಎನ್‍ ಅಪರಾಧ ಪೊಲೀಸರ (CEN Crime Police) ತಂಡ  3 ಜನರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 62,700/- ರೂ ನಗದು ಹಣ ಹಾಗೂ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ.

ಚನ್ನಗಿರಿ (Channagiri) ತಾಲ್ಲೂಕ್ ಚಿರಡೋಣಿ ಗ್ರಾಮದ ಚಿರಡೋಣಿಯಿಂದ ಬಸವಾಪಟ್ಟಣ (Basavapattana) ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಪೊಲೀಸ್ ಅಧಿಕ್ಷಕರು ದಾವಣಗೆರೆ ರವರಿಗೆ ಬಂದ  ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆದಿದ್ದು, ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಸಾದ್ ಪಿ ಮತ್ತು ಸಿಬ್ಬಂದಿಯವರಾದ ಪ್ರಕಾಶ, ನಾಗರಾಜ್, ಗೋವಿಂದರಾಜ್, ಮಲ್ಲಿಕಾರ್ಜುನ ಹಾದಿಮನಿ, ಮುತ್ತುರಾಜ್, ಶೋಭಾ, ಶಶಿಕಲಾ, ಲಿಂಗರಾಜ್‌ರವರೊನ್ನೊಳಗೊಂಡ ತಂಡ ರಚಿಸಿ ದಾಳಿ ಮಾಡಲು ಸೂಚಿಸಲಾಗಿತ್ತು.

ಈ ಸಂಬಂಧ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ (Uma Prashanth IPS)ರವರು ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್ ಬಿ ಬಸರಗಿ (R. B. Basaragi) ದಾವಣಗೆರೆ  ಇವರು ಪ್ರಶಂಶಿಸಿರುತ್ತಾರೆ.

admin

admin

Leave a Reply

Your email address will not be published. Required fields are marked *

error: Content is protected !!