ದಾವಣಗೆರೆ – ಆ.30 ರಂದು ವಾಕ್ ಇನ್ ಇಂಟರ್‍ವೀವ್

ಸುದ್ದಿ360 ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಆಗಸ್ಟ್ 30 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ.ಸಂ.51)ದಲ್ಲಿ ವಾಕ್ ಇನ್ ಇಂಟರ್‍ವೀವ್ ಅನ್ನು ಆಯೋಜಿಸಲಾಗಿದೆ.

ವಾಕ್ ಇನ್ ಇಂಟರ್‍ವೀವ್‍ನಲ್ಲಿ ದಾವಣಗೆರೆಯ ಎಲ್ & ಟಿ ಫೈನಾನ್ಸಿಯಲ್ ಸರ್ವೀಸಸ್ ಇವರು ಭಾಗವಹಿಸುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಮೈಕ್ರೋ ಲೋನ್ ಆಫೀಸರ್ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಕನಿಷ್ಠ 2 ಸೆಟ್ ಬಯೋಡಾಟಾ ಮತ್ತು ಆಧಾರ್ ಕಾರ್ಡ್ ನೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 6361550016, 08192-259446 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ. ಡಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ:

admin

admin

Leave a Reply

Your email address will not be published. Required fields are marked *

error: Content is protected !!