ಎ ಹೆಚ್ ಶಿವಮೂರ್ತಿ ಸ್ವಾಮಿ ಅವರ ನಿಧನಕ್ಕೆ ಜಿಲ್ಲಾ ಕಸಾಪ ದ ತೀವ್ರ ಸಂತಾಪ

 ಸುದ್ದಿ360 ದಾವಣಗೆರೆ  (davangere) ಅ 1: ಹಿರಿಯ ಸಂಘಟಕರು, ಅಪಾರ  ಸ್ನೇಹ ಜೀವಿಗಳಾಗಿದ್ದ ಎ ಎಚ್ ಶಿವಮೂರ್ತಿ ಸ್ವಾಮಿ(A H Shivamurthy swamy) ಅವರ ನಿಧನವು  ಅತ್ಯಂತ  ನೋವುಂಟು ಮಾಡಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ತೀವ್ರ ಸಂತಾಪ (Deep condolence) ಸೂಚಿಸಿದ್ದಾರೆ.

ಎ ಹೆಚ್ ಶಿವಮೂರ್ತಿ ಸ್ವಾಮಿ ಅವರು ಒಬ್ಬ ಕನ್ನಡದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ  ಸದಸ್ಯರುಗಳಲ್ಲಿ ಒಬ್ಬರಾಗಿದ್ದು,ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ  ಚಟುವಟಿಕೆಗಳಿಗೆ ಉತ್ತಮ ಪ್ರೇರಕರಾಗಿ ಕಾರ್ಯನಿರ್ವಹಿಸುತ್ತಿದ್ದವರು. ಅವರ ನಿಧನವು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಾಮದೇವಪ್ಪ ಅವರು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಹಾಗೂ ಎಲ್ಲ ಕನ್ನಡದ ಮನಸುಗಳ ಪರವಾಗಿ ತೀವ್ರ  ಸಂತಾಪ ವ್ಯಕ್ತಪಡಿಸಿ  ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ದಯಾಮಯನಾದ ಭಗವಂತನು, ಕನ್ನಡ ತಾಯಿ ಶ್ರೀ ಭುವನೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!