ಸ್ಕ್ವಾಯ್ ಕ್ರೀಡಾಪಟು ಶಶಾಂಕ್‍ಗೆ ಶಿಕ್ಷಣ ಸಚಿವರಿಂದ ಶುಭ ಹಾರೈಕೆ

ಸುದ್ದಿ360 ಶಿವಮೊಗ್ಗ: ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿ ಇತ್ತೀಚೆಗೆ ನಡೆದ  ಸ್ಕ್ವಾಯ್ ಕ್ರೀಡೆಯ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ ವತಿಯಿಂದ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿವಮೊಗ್ಗದ ಡಿವಿಎಸ್‍ ಶಾಲೆಯ ವಿದ್ಯಾರ್ಥಿ ಶಶಾಂಕ್‍ಗೆ  ಶಿಕ್ಷಣ ಸಚಿವ ಮಧುಬಂಗಾರಪ್ಪ  ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಪದಕ ಗೆಲ್ಲುವಂತೆ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ತರಬೇತಿದಾರ ರಮೇಶ್ ಮತ್ತು ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದ ಸಹ ಕಾರ್ಯದರ್ಶಿ ರಾಮಚಂದ್ರ ಖಜಾಂಚಿ ನಾಗರಾಜ್ ಉಪಸ್ಥಿತರಿದ್ದರು.

Leave a Comment

error: Content is protected !!