ಸುದ್ದಿ360 ದಾವಣಗೆರೆ (davangere) ಸೆ.30: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಎಸ್.ಎಸ್.ಕೇರ್‌ಟ್ರಸ್ಟ್( SS Care trust) ವತಿಯಿಂದ ಅ.1ರ ಭಾನುವಾರದಂದು ಹಿರಿಯ ನಾಗರಿಕರಿಗೆ ಉಚಿತಆರೋಗ್ಯತಪಾಸಣೆ (free health checkup) ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9-30 ಗಂಟೆಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆವ ಈ ತಪಾಸಣೆಗೆ ಎಸ್.ಎಸ್.ಕೇರ್‌ಟ್ರಸ್ಟ್ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್‌ಅವರು ಚಾಲನೆ ನೀಡುವರು.
ಹಿರಿಯ ನಾಗರಿಕರು ಈ ತಪಾಸಣೆಯ ಅನುಕೂಲ ಪಡೆಯಬೇಕೆಂದು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ತಿಳಿಸಿದ್ದಾರೆ.