ಸುದ್ದಿ360, ದಾವಣಗೆರೆ ಸೆ.6: ಮುಂಬರಲಿರುವ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇಂದು ನಗರ ಪೊಲೀಸ್ ಉಪವಿಭಾಗದ ವತಿಯಿಂದ ಉಮಾ ಪ್ರಶಾಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಕಛೇರಿ ಸಬಾಂಗಣದಲ್ಲಿ ನಾಗರೀಕ ಸೌಹಾರ್ಧತೆ ಸಭೆ ನಡೆಯಿತು.
ಸಭೆಯಲ್ಲಿ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬವನ್ನು ಎಲ್ಲಾ ನಾಗರಿಕರು ಸೌಹಾರ್ಧಯುತವಾಗಿ ಆಚರಿಸಲು ತಿಳಿಸಲಾಯಿತು. ಸಭೆಯಲ್ಲಿ ವಿವಿಧ ಕೋಮಿನ ಮುಖಂಡರುಗಳು ಹಾಗು ಮಹಾನಗರ ಪಾಲಿಕೆಯ ಸದಸ್ಯರುಗಳು ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಆಚರಣೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ಆರ್ ಬಿ ಬಸರಗಿ ರವರು, ಮಲ್ಲೇಶ್ ದೊಡ್ಮನಿ,, ಡಿವೈಎಸ್ಪಿ ನಗರ ಉಪವಿಬಾಗ, ಯಶವಂತ್, ಪ್ರೋ ಡಿವೈಎಸ್ಪಿ, ನಗರ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿಗಳು, ಶಂಕರನಾರಯಣ, ಆಮಾನುಲ್ಲಾಖಾನ್, ಯಾಸೀನ್ ಪೀರ್ ರಿಜ್ವಿ, ಎ ನಾಗರಾಜ, ಜೊಳ್ಳಿ ಗುರು, ಶ್ರೀನಿವಾಸ, ದಿನೇಶ್ ಕೆ ಶೆಟ್ಟಿ, ಚನ್ನಬಸಪ್ಪ ಗೌಡ್ರು, ಬಾಬು, ನವೀನ್, ಟಿ ಅಜ್ಗರ್, ಕುಮಾರ್, ನಜೀರ್ ಅಹ್ಮದ್ ಹಾಗೂ ವಿವಿಧ ಕೋಮಿನ ಧಾರ್ಮಿಕ ಮುಖಂಡರುಗಳು ಹಾಗೂ ನಾಗರೀಕರು ಉಪಸ್ಥಿತರಿದ್ದರು.