ದಾವಣಗೆರೆ (DAVANAGERE) : ನಗರದ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದ (GMIT) ಎಂಬಿಎ (MBA) ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ವಿಭಾಗದ ದಿಶಾ ಫೋರಂ ಸಮಾರೋಪ ಸಮಾರಂಭವನ್ನು ವಿಭಾಗದ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರಿನ ಪ್ರೆಶರ್ ಪ್ರೊಫೈಲ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಶಿವಪ್ರಸಾದ್ ಕೆ ನೆರವೇರಿಸಿದರು. ನಂತರ ಮಾತನಾಡಿದ ಇವರು ವಿದ್ಯಾರ್ಥಿ ಜೀವನ ಖುಷಿ ಕೊಡುವಂತಹದ್ದು, ಕಾಲೇಜಿನಚೆಯ ಜೀವನ ಹಲವು ಸವಾಲುಗಳಿಂದ ಕೂಡಿರುವಂತಹದ್ದು, ವಿದ್ಯಾರ್ಥಿಗಳು ಇದನ್ನು ಅರಿತು ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು. ಕೈಗಾರಿಕೆಗಳಲ್ಲಿ ಹಲವು ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ, ನಮ್ಮ ಕೆಲಸದ ಭದ್ರತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.
ಎಂಬಿಎ ವಿಭಾಗದ ನಿರ್ದೇಶಕರಾದ ಡಾ ಬಿ ಬಕ್ಕಪ್ಪ, ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು.
ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ವಿಭಾಗದ ಮುಖ್ಯಸ್ಥರು ಡಾ ಪಿ ಎಸ್ ಬಸವರಾಜು, ದಿಶಾ ಪೊರಂ ಸಂಯೋಜಕರಾದ ಡಾ ಕೆ ಜಗದೀಶ್ವರಿ, ವಿಭಾಗದ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡಗೆಗಳಲ್ಲಿ ಕಂಗೊಳಿಸುತ್ತಿದ್ದಿದ್ದು, ಸಮಾರಂಭದ ವಿಶೇಷ ಭಾಗವಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಬಿಲಾಲ್ ಮತ್ತು ವಿದ್ಯಾರ್ಥಿನಿ ಆಫ್ರಾ ನಡೆಸಿಕೊಟ್ಟರು. ಸ್ವಾಗತವನ್ನು ಕುಮಾರಿ ಪಾರ್ವತಿ ಮತ್ತು ವಂದನಾರ್ಪಣೆಯನ್ನು ಕುಮಾರಿ ಅಂಜಲಿ ನೆರವೇರಿಸಿದರು.