ಹೆಂಡತಿ, ಇಬ್ಬರು ಮಕ್ಕಳ ಹತ್ಯೆಗೈದ ತಂದೆ

ಸುದ್ದಿ360, ಚಾಮರಾಜನಗರ ಸೆ.15: ಪತಿಯೇ ತನ್ನ ಪತ್ನಿ ಹಾಗೂ ಇಬ್ಬರು ಪುಟಾಣಿ ಮಕ್ಕಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಗುಂಡ್ಲುಪೇಟೆ ತಾಲೂಕಿನ  ಬೊಮ್ಮನಹಳ್ಳಿ ಗ್ರಾಮದ   ಜಮೀನಿನ ಮನೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಈ ಬಗ್ಗೆ ಮೃತಳ ತಂದೆ ದೂರು ನೀಡಿದ್ದು, ಧನಂಜಯ ಎಂಬಾತ ತನ್ನ  ಹೆಂಡತಿ ಮೇಘ ಮತ್ತು ಇಬ್ಬರೂ ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ತಂದೆ ಆರೋಪಿಸಿದ್ದಾರೆ.

 ಧನಂಜಯ ಮತ್ತು ಮೇಘ ಅವರ ಮದುವೆಯಾಗಿ ಎಂಟು ವರ್ಷಗಳಾಗಿವೆ.  ಪ್ರಾರಂಭದ ದಿನಗಳಿಂದಲೂ  ಧನಂಜಯನ ಕುಟುಂಬದವರೆಲ್ಲಾ ಸೇರಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಚಿತ್ರಹಿಂಸೆಯ ನಡುವೆಯೂ ಮಗಳು ಗಂಡನ ಮನೆಯಲ್ಲಿಯೇ ಗೌರವದಿಂದ ಜೀವನ ‌‌ಸಾಗಿಸಬೇಕು ಎಂಬುದಾಗಿ ಬುದ್ಧಿ ಮಾತುಗಳನ್ನು ಹೇಳಿ ಅವಳನ್ನು ಗಂಡನ ಮನೆಯಲ್ಲಿಯೇ ಇರಿಸಿದ್ದರು.

ಗುರುವಾರ ಬೆಳಗ್ಗೆಯಿಂದಲೇ ಗಲಾಟೆ:

ಗುರುವಾರ ಬೆಳಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆದಿತ್ತು ಎಂಬುದು ಮೇಘಳ ಮೊಬೈಲ್ ಅಲ್ಲಿ ರೇಕಾರ್ಡ್ ಆಗಿರುವ ವಿಡಿಯೋ ದಾಖಲೆ ಪೊಲೀಸರಿಗೆ ದೊರತಿದೆ. ತಡರಾತ್ರಿ ಹತ್ಯೆ ನಡೆದಿದೆ.

 ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!