‘ಗೆದ್ದು ಬಾ ಓ ಇಂಡಿಯಾ-2023’ ಗೀತೆ ಲೋಕಾರ್ಪಣೆ

indian-cricket-anthem-geddu-ba-o-india-2023-launch

ಸುದ್ದಿ360 ದಾವಣಗೆರೆ (Davangere), ಅ.10: ದಾವಣಗೆರೆಯ ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ (Black Cats Creative Lab) ನಿಂದ ‘ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ (geddu ba o india) ಕ್ರಿಕೆಟ್ ಗೀತೆ ರೂಪಿಸಲಾಗಿದ್ದು, ಅ.11ರಂದು ಮಧ್ಯಾಹ್ನ 12.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಬ್ಲಾಕ್‍ ಕ್ಯಾಟ್ಸ್ ತಂಡದ ಎಂ.ಎಸ್. ಚೇತನ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‍ ತಂಡವನ್ನುಮತ್ತು ಪ್ರೇಕ್ಷಕರನ್ನು  ಹುರಿದುಂಬಿಸುವ ನಿಟ್ಟಿನಲ್ಲಿ ‘ಭಾರತೀಯ ಕ್ರಿಕೆಟ್‍ ಗೀತೆ2023’ ‘ಗೆದ್ದು ಬಾ ಓ ಇಂಡಿಯಾ’ ಶೀರ್ಷಿಕೆಯಡಿ ರಚಿಸಲಾಗಿದೆ. ಈ ಗೀತೆ 5 ಭಾಷೆಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಲಿದ್ದು,  ಭಾರತೀಯರ ಹೃದಯವನ್ನು ಸ್ಪರ್ಶಿಸುವ ಪ್ಯಾನ್ ಇಂಡಿಯಾ ಹಾಡು ಇದಾಗಿದೆ ಎಂದು ಮಾಹಿತಿ ನೀಡಿದರು.

ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ಸೌಹಾರ್ದತೆ ಜತೆ ನಮ್ಮ ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ  ವೈವಿಧ್ಯತೆ ಮತ್ತು ಏಕತೆಯನ್ನು ಈ ಯ್ಯಾಂಥಮ್‍  ಸಾಂಗ್‍ ನಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಭಾರತದಾದ್ಯಂತ ಮತ್ತು ಅದರಾಚೆಗಿನ ಪ್ರೇಕ್ಷಕರನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಈ ವೀಡಿಯೋ ಹಾಡು ಹೊಂದಿದೆ ಎಂದು ಅವರು ತಿಳಿಸಿದರು.

ಪರಿಕಲ್ಪನೆ, ನಿರ್ದೇಶನ ಮತ್ತು ಸಂಗೀತ ಬಾಲು ವಿ.ಜಿ.ಎಸ್ ಅವರದ್ದಾಗಿದ್ದು, ಕನ್ನಡ ಮತ್ತು ತೆಲುಗು ಸಾಹಿತ್ಯವನ್ನು ಕಾರ್ತಿಕ್ ಬಿ.ಜಿ., ಹಿಂದಿ ಸಾಹಿತ್ಯ ಮಂಜುನಾಥ್ ರಾವ್, ತಮಿಳು ಸಾಹಿತ್ಯ ತಮಿಳ್ಳಗನ್, ಮಲಯಾಳಂ ಸಾಹಿತ್ಯ ಚಂದ್ರ ಶೇಖರನ್ ನಂಬೂತಿರಿ ಅವರದ್ದಾಗಿದೆ ಎಂದು ಹೇಳಿದರು.

ಶಶಾಂಕ್ ಶೇಷಗಿರಿ, ಚೇತನ್ ನಾಯಕ್, ಎಂ.ಸಿ. ಅಜ್ಜು ಅವರು ಕನ್ನಡದಲ್ಲಿ ಹಾಡಿದ್ದು, ಹಿಂದಿಯಲ್ಲಿ ಶಶಾಂಕ್ ಶೇಷಗಿರಿ, ಇಶಾನ್ ರೋಜಿಂದರ್, ಎಂ.ಸಿ.ಬಿಜ್ಜು ಹಾಡಿದ್ದಾರೆ ಕರೀಮುಲ್ಲಾ, ಸುಗಂದ್ ಶೇಖರ್, ಶಶಾಂಕ್ ಶೇಷಗಿರಿ, ಎಂ.ಸಿ. ಬಿಜ್ಜು ರವರು ತೆಲುಗಿನಲ್ಲಿ ಹಾಡಿದ್ದಾರೆ. ಡಿ.ಸತ್ಯಪ್ರಕಾಶ್ ಧರ್ಮ (ತಾಲ್ ಶೆರೀಫ್, ಶಶಾಂಕ್ ಶೇಷಗಿರಿ,  ಎಂ.ಸಿ.ಬಿಜ್ಜು ತಮಿಳಿನಲ್ಲಿ ಹಾಡಿದ್ದಾರೆ. ರಾಜಗಣಪತಿ, ಶಶಾಂಕ್ ಶೇಷಗಿರಿ, ಎಂ.ಸಿ.ಬಿಜ್ಜು ಮಲಯಾಳಂನಲ್ಲಿ ಹಾಡಿದ್ದಾರೆ ಎಂದರು.

ಸಹ ನಿರ್ದೇಶನ: ಕಾರ್ತಿಕ್ ಬಿ.ಜಿ., ಸಂಕಲನ: ಬಾಲು ವಿ.ಜಿ.ಎಸ್., ಡಿ.ಒ.ಪಿ: ವಿಶ್ವಾಸ್ ಕೌಂಡಿನ್ಯ, ಪ್ರೋಗ್ರಾಮಿಂಗ್ ಮತ್ತು ಮಿಕ್ಸಿಂಗ್: ಹರ್ಷಿತ್ ಮತ್ತು ಐ.ಡಿ.ಅಕಾಶ್, ಕಿಶೋರ್,

ಕಾರ್ಯಕಾರಿ ನಿರ್ಮಾಪಕರು: ಚೇತನ್ ಎಂ.ಎಸ್., ತಾಂತ್ರಿಕ ಬೆಂಬಲ : ಅಮಿತ್ ಎನ್, ಪಾಟೀಲ್, ಪೋಸ್ಟರ್ಗಳು ಮತ್ತು ಪ್ರಚಾರ ವಿನ್ಯಾಸ : ಬಿಸಿಎಲ್ ಕ್ರಿಯೇಜವ್ ಏಜೆನ್ಸಿ, ದಾವಣಗೆರೆ ಇವರು ಮಾಡಿದ್ದಾರೆ ಎಂದು ತಿಳಿಸಿದರು.

ಐದು ಭಾಷೆಯಲ್ಲಿ ಮೂಡಿಬಂದಿರುವ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆಯ ಯೂಟ್ಯೂಬ್‍ ಲಿಂಕ್‍  ಕೆಳಗಿನಂತಿವೆ.

ಸುದ್ದಿಗೋಷ್ಠಿಯಲ್ಲಿ ಡಿ.ಶೇಷಾಚಲ, ಅಮೀತ್ ಪಾಟೀಲ್, ನವೀನ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!