ಹೊಳೆಹೊನ್ನೂರು, (ಶಿವಮೊಗ್ಗ): ಆತನ ಹೆಸರು ಕೌಶಿಕ್ ವಯಸ್ಸು 13 ವರ್ಷ, ಊರು ಶಿವಮೊಗ್ಗ ಸಮೀಪದ ಹೊಳೆ ಹೊನ್ನುರು. ಆತನ ಬಹುದೊಡ್ಡ ಆಸೆ ದೇಶ ಕಾಯುವ ಸೈನಿಕನಾಗಬೇಕು, ರಕ್ಷಕನಾಗಬೇಕು ಎಂಬುದು. ಅದು ಫಲಿಸುತ್ತದೋ ಇಲ್ಲವೋ ತಿಳಿಯದು. ಆದರೆ ಅವನೀಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಮಗುವಿನ ಜೀವ ಉಳಿಸಲು ಮಣಿಪಾಲ ಆಸ್ಪತ್ರೆಯ ವೈದ್ಯರು ಬೋನ್ ಮ್ಯಾರೋ ಬದಲಾವಣೆ ಚಿಕಿತ್ಸೆಗೆ (ಮೂಳೆ ಮಜ್ಜೆಯ ಕಸಿ) ಸೂಚಿಸಿದ್ದಾರೆ. ಆ ಚಿಕಿತ್ಸೆಯ ಖರ್ಚು ಬರೋಬ್ಬರಿ 40 ಲಕ್ಷ ರೂಪಾಯಿ. ಒಂದೊತ್ತಿನ ಊಟಕ್ಕು ಇನ್ನೊಬ್ಬರ ಮುಂದೆ ಕೈ ಚಾಚಬೇಕಾದ ಪರಿಸ್ಥಿತಿಯಲ್ಲಿರುವ ಕುಟುಂಬ ಅಷ್ಟೊಂದು ಹಣ ಭರಿಸಿ ಚಿಕಿತ್ಸೆ ನಡೆಸುವುದು ಅಸಾದ್ಯ.
ತಂದೆ ಬ್ರೈನ್ ಸ್ಟ್ರೋಕಿಗೆ ತುತ್ತಾಗಿ ಹಾಗೂ ವರಿಕೋಸ್ ವೇನ್ ಎಂಬ ಮಾರಕ ಕಾಲಿನ ರೋಗಕ್ಕೆ ತುತ್ತಾಗಿ ದುಡಿಯಲಾರದೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಾಯಿ ನೇತ್ರಾವತಿ ದುಡಿದು ಕುಟುಂಬ ಸಾಕುತ್ತಿದ್ದಾರೆ. ದೇವರ ಅನುಗ್ರಹ ಎಂಬಂತೆ ಸಿಕ್ಕ ಏಕೈಕ ಗಂಡು ಮಗು ಕೌಶಿಕ್(13) ಈಗ ಮಾರಕ ರಕ್ತ ಸಂಭಂಧಿತ ಕಾಯಿಲೆಗೆ ತುತ್ತಾಗಿ, ಆತನ ಜೀವ ಉಳಿವಿಗಾಗಿ 40 ಲಕ್ಷ ರೂಪಾಯಿ ಬೇಕೆಂದು ಮಣಿಪಾಲ ವೈದ್ಯರು ತಿಳಿಸಿದ್ದಾರೆ.
ಜನ ಪ್ರತಿನಿಧಿಗಳು, ಜನಸೇವೆಗೆಂದು ಆಯ್ಕೆಯಾಗಿ ಬಂದಿರುವವರು, ಉದ್ಯಮಿಗಳು ಇತ್ತ ಗಮನ ಹರಿಸಿದರೆ ಕೌಶಿಕನ ಚಿಕಿತ್ಸಾ ವೆಚ್ಚ ಅಂತಹ ದೊಡ್ಡದೇನೂ ಅಲ್ಲ. ಈ ಒಂದು ಕುಟುಂಬಕ್ಕೆ ಸಹಾಯಹಸ್ತದ ಅವಶ್ಯಕತೆ ಇದ್ದು, ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ ಎನ್ನುವಂತೆ ಕೊಡುವ ಕೈಗಳು ಮುಂದೆ ಬರಬೇಕು ಅಷ್ಟೇ.
ಈಗ ತಾನೆ ಟೀನ್ ಏಜ್ ಗೆ ಕಾಲಿಡುತ್ತಿರುವ, ಹತ್ತಾರು ಕನಸುಗಳನ್ನು ಕಾಣುತ್ತಾ ಬಾಲ್ಯದ ಸವಿಯನ್ನು ಸವೆಯಬೇಕಾದ ಮಗು ತನ್ನ ಅನಾರೋಗ್ಯದ ನಿಮಿತ್ತ ನಿಮ್ಮ ಮುಂದೆ ತನ್ನ ಎಳೆಯ ಕೈ ಚಾಚುತ್ತಿದ್ದಾನೆ. ಸಹಾಯ ಹಸ್ತ ನೀಡುವಿರಿ ಮತ್ತು ಆ ಕರುಳಿನ ಕುಡಿಗೆ ತಮ್ಮ ಕರುಣೆಯ ಚಿಲುಮೆಯಿಂದ ಒಂದು ಬೊಗಸೆ ನೀಡಿ ಹಾರೈಸುವಿರಿ ಎಂಬ ಸಾಮಾಜಿಕ ಕಳಕಳಿಯೊಂದಿಗೆ ‘ಸುದ್ದಿ360’ ಇಲ್ಲಿ ಪ್ರಕಟಿಸುತ್ತಿದೆ. ದೇಶ ಕಾಯುವ ಯೋದನಾಗಬೇಕೆಂದು ಆಸೆ ಹೊತ್ತ ಕೌಶಿಕ್ ಜೀವ ಉಳಿಸಲು ನಾವೆಲ್ಲ ಕೈ ಜೋಡಿಸೋಣ ಆ ತಂದೆ, ತಾಯಿಯ ಕಣ್ಣೀರು ಒರೆಸೋಣ.
ದೇಶ ಕಾಯುವ ಯೋದನಾಗಬೇಕೆಂದು ಆಸೆ ಹೊತ್ತ ಕೌಶಿಕ್ ಹೊಳೆಹೊನ್ನೂರಿನ ರಾಷ್ಟ್ರೋತ್ತಾನ ಶಾಲೆಯ ವಿದ್ಯಾರ್ಥಿ, ಶಾಲೆಯ ಆಡಳಿತ ಮಂಡಳಿ, ಕಾರುಣ್ಯ ನಿಧಿ ಕರ್ನಾಟಕ(ರಿ) ಸೇರಿದಂತೆ ಹತ್ತು ಹಲವು ಕೈಗಳು ಮುಂದೆ ಬಂದು ಶ್ರಮಿಸುತ್ತಿವೆ. ಈ ಪುಟ್ಟ ಹುಡುಗನ ಆರೋಗ್ಯ ಉತ್ತಮಪಡಿಸಲು ನಾವೆಲ್ಲ ಕೈ ಜೋಡಿಸೋಣ ಆ ತಂದೆ, ತಾಯಿಯ ಕಣ್ಣೀರು ಒರೆಸೋಣ…
A/Holder Name : nethravathi
A/NUMBER : 43722417094
IFSC CODE : SBIN0040132
State bank of India
Holehonnur
ಗೂಗಲ್ ಪೇ ಹಾಗೂ ಫೋನ್ ಪೇ ಮುಖಾಂತರ ಯುಪಿಐ ಐಡಿ ಬಳಸಿ ಹಣ ವರ್ಗಾವಣೆ ಮಾಡುವುದಾದರೆ….
rajahn8544@sbi
Majappa3174@sbi
919611051859@uco
7411307620@uco
91886720491@uco
One touch open WhatsApp pay
ಕೌಶಿಕ್ ಹೆತ್ತವರ ಸಂಪರ್ಕ ಸಂಖ್ಯೆ ಹಾಗೂ ಜಿ/ಪೆ-ಫೋನ್ ಪೇ
8867204919
9611051849
7411307620
ಕಾರುಣ್ಯ ನಿಧಿ ಕರ್ನಾಟಕ(ರಿ)
8618081627
8495000313