ಹಳೆಯ ದ್ವೇಶ: ಅಟ್ಟಾಡಿಸಿಕೊಂಡು ಯುವಕನ ಭೀಕರ ಹತ್ಯೆ

ಸುದ್ದಿ360  ಮಂಡ್ಯ: ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ರ್ತಗಳಿಂದ ಮನಸೋಇಚ್ಛೆ  ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಗಾಂಧಿನಗರ 4ನೇ ಕ್ರಾಸ್ ನಲ್ಲಿ ಮಂಗಳವಾರ ರಾತ್ರಿ‌  ನಡೆದಿದೆ.

ಗಾಂಧಿನಗರ 5ನೇ ಕ್ರಾಸ್ ನಿವಾಸಿ ಅಕ್ಷಯ್ @ ಗಂಟ್ಲು (22) ಕೊಲೆಯಾದ ಯುವಕ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸಹಳ್ಳಿ ರಸ್ತೆಯ ಟೀ  ಅಂಗಡಿಯಲ್ಲಿ ಅಕ್ಷಯ್ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಆಗ ಅಕ್ಷಯ್ ತಪ್ಪಿಸಿಕೊಂಡು 4 ನೇ ಕ್ರಾಸ್ ರಸ್ತೆಯಲ್ಲಿ ಓಡಿಹೋಗಿ, ಗೇಟ್ ತೆರೆದಿದ್ದ ಕುಮಾರ್ ಎಂಬುವವರ ಮನೆಯ ಕಾಂಪೌಂಡ್ ನೊಳಗೆ ನುಗ್ಗಿದ್ದಾನೆ. ಆದರೆ, ಮನೆಯ ಬಾಗಿಲು ಮತ್ತು ಸ್ಟೇರ್ ಕೇಸ್ ನ ಗ್ರಿಲ್ಸ್ ಗೇಟ್ ಬಂದ್ ಆಗಿದ್ದರಿಂದ ಅಕ್ಷಯ್ ತಪ್ಪಿಸಿಕೊಳ್ಳಲು ಆಗಿಲ್ಲ. ಆಗ ನಾಲ್ಕೈದು ಮಂದಿ ಆರೋಪಿಗಳು  ಮಾರಕಾಸ್ರ್ತಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ

ಘಟನೆಯಿಂದ ಮಂಡ್ಯದ ಜನರು ಬೆಚ್ಚಿಬಿದ್ದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ. ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ, ಟ್ರಾಫಿಕ್ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.

Leave a Comment

error: Content is protected !!