ಮಾ.9: ಸಿಪಿಐ ನೇತೃತ್ವದಲ್ಲಿ ನಿವೇಶನ ರಹಿತರಿಂದ ವಿಧಾನ ಸೌಧ ಚಲೋ

ಸುದ್ದಿ360 ದಾವಣಗೆರೆ ಮಾ.9: ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಮಾರ್ಚ್ 9 ರಂದು ನಿವೇಶನ ರಹಿತರಿಂದ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಅವರಗೆರೆ ಚಂದ್ರು ತಿಳಿಸಿದ್ದಾರೆ. ವಸತಿ ಇಲ್ಲದವರಿಗೆ ವಸತಿ ಒದಗಿಸಬೇಕು, ನಿವೇಶನ ಇಲ್ಲದವರಿಗೆ ನಿವೇಶನ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸೌಧ ಚಲೋ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅಂದು ಬೆಳಗ್ಗೆ 10.30 ಕ್ಕೆ ಬೃಹತ್ ಪ್ರತಿಭಟನೆ ಮೂಲಕ ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿಗೆ ತೆರಳಿ ನಡೆಸಿ ಧರಣಿ ನಡೆಸಲಾಗುವುದು. … Read more

ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲ – ಭಕ್ತಿ ಪ್ರತಿಷ್ಠಾಪನೆ: ತರಳಬಾಳು ಶ್ರೀ

ಕೊಂಡಜ್ಜಿಯಲ್ಲಿ ವಿದ್ಯುಕ್ತವಾಗಿ ನಡೆದ ಆಂಜನೇಯಸ್ವಾಮಿ‌ ಹಾಗೂ ಗಂಗಾಪರಮೇಶ್ವರಿ ದೇವಿ ದೇವಸ್ಥಾನ ಉದ್ಘಾಟನೆ – ಕಳಸಾರೋಹಣ ಸುದ್ದಿ360 ದಾವಣಗೆರೆ ಮಾ.3: ಇಡೀ ಮಾನವ ಕುಲಕ್ಕೆ ಪ್ರಾಣ ಕೊಡುವವನು ದೇವರೇ ಆಗಿರುವಾಗ, ದೇವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಎನ್ನುವುದು ಸರಿಯಲ್ಲ. ಬದಲಿಗೆ ಇದನ್ನು ಭಕ್ತಿ ಪ್ರತಿಷ್ಠಾಪನೆ ಎಂದು ಕರೆಯಬೇಕು ಎಂದು ಸಿರಿಗೆರೆಯ ತರಳಬಾಳು ಬೃಹ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ‌ ಗ್ರಾಮದದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ‌ ಹಾಗೂ ಗಂಗಾಪರಮೇಶ್ವರಿ ದೇವಿ ದೇವಸ್ಥಾನ … Read more

State level convention of Aam Aadmi Party in Davangere ಮಾ.4- ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಸಮಾವೇಶ

ಅರವಿಂದ ಕೇಜ್ರಿವಾಲ್ , ಭಗವಂತ್ ಸಿಂಗ್ ಮಾನ್ ರಿಂದ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ಸುದ್ದಿ360 ದಾವಣಗೆರೆ ಮಾ.2: ಆಮ್ ಆದ್ಮಿ ಪಕ್ಷದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ, ಹೊಸದಿಲ್ಲಿ ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಮದ್ಯ ಕರ್ನಾಟಕ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ … Read more

ಜಿಎಂಐಟಿಯ ಹಲವು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ಜಿಎಂಐಟಿ ವಿದ್ಯಾರ್ಥಿಗಳಿಗೆ ಹಲವು ಪ್ರತಿಷ್ಠಿತ ಕಂಪನಿಗಳಿಂದ ಸಂದರ್ಶನ ಪ್ರಕ್ರಿಯೆ ದಾವಣಗೆರೆ ಮಾ.2: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ಹಲವು ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಪ್ರತಿಷ್ಠಿತ ಕಂಪನಿಗಳಾದ ಮರ್ಸಿ ಡೇಸ್ ಬೆಂಜ್, ಬೈಜೂಸ್, ಇಂಟೆಲಿಪಾತ್ ಟೆಕ್ನಾಲಜಿ ಸರ್ವಿಸಸ್, ಡಿ ಮಾರ್ಟ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟ್ರಾಟೊಜೇಂಟ್ … Read more

ಶೇ.17 ವೇತನ ಹೆಚ್ಚಳ – ಸರ್ಕಾರಿ ನೌಕರರ ಮುಷ್ಕರ ವಾಪಸ್

ಸರ್ಕಾರದ ಮಧ್ಯಂತರ ಆದೇಶಕ್ಕೆ ಮಣಿದ ಸರ್ಕಾರಿ ನೌಕರರು ಸುದ್ದಿ360 ಬೆಂಗಳೂರು ಮಾ.01: ರಾಜ್ಯ ಸರ್ಕಾರಿ ನೌಕರರೊಂದಿಗಿನ ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್ಯ ಸರ್ಕಾರಿ ನೌಕರರ ವೇತನ ಶೇ.17 ರಷ್ಟು ಹೆಚ್ಚಳ ಮಾಡಿ ಮಧ್ಯಂತರ ಆದೇಶ ಮಾಡಿರುವ ಮುಖ್ಯಮಂತ್ರಿಗಳು ಇಂದೇ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಷರತ್ತುಬದ್ಧವಾಗಿ ಹಿಂಪಡೆಯಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ. ವಿಧಾನ ಸೌಧದ ಹಣಕಾಸು ಇಲಾಖೆಯ  ಐಎಸ್ ಎನ್ ಪ್ರಸಾದ್ ಕೊಠಡಿಯಲ್ಲಿ ಇಂದು … Read more

ದಾವಣಗೆರೆಯ ಶಿವಗಂಗೋತ್ರಿಯಲ್ಲಿ ಘಟಿಕೋತ್ಸವ: ವಿದ್ಯಾರ್ಥಿನಿಯರದೇ ಮೇಲುಗೈ

81ಸ್ವರ್ಣಪದಕಗಳನ್ನು ಹಂಚಿಕೊಂಡ 45 ವಿದ್ಯಾರ್ಥಿಗಳು – 3 ಗೌರವ ಡಾಕ್ಟರೇಟ್ ಸುದ್ದಿ360 ದಾವಣಗೆರೆ ಫೆ.28:  ದಾವಣಗೆರೆ ವಿಶ್ವ ವಿದ್ಯಾಲಯ ಶಿವಗಂಗೋತ್ರಿಯ ಜ್ಞಾನಸೌಧದಲ್ಲಿ ಇಂದು ಹತ್ತನೇ ಘಟಿಕೋತ್ಸವ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 81 ವಿದ್ಯಾರ್ಥಿಗಳು ಸ್ವರ್ಣ ಪದಕದೊಂದಿಗೆ ತೇರ್ಗಡೆ ಹೊಂದಿದರು. ಇದೇ ವೇಳೆ ಟಿ.ಎಂ. ಚಂದ್ರಶೇಖರಯ್ಯ, ಅಥಣಿ ಎಸ್ ವೀರಣ್ಣ ಹಾಗೂ ಮರಣೋತ್ತರವಾಗಿ ಎಂ.ಎಸ್. ಶಿವಣ್ಣ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಯಿತು. ಒಟ್ಟು 81 ಸ್ವರ್ಣ ಪದಕಗಳಲ್ಲಿ ಸ್ನಾತಕ … Read more

ವೇತನ ಪರಿಷ್ಕರಣೆ ಇಂದು ಇತ್ಯರ್ಥ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಇಂದು ಸಂಜೆ ವೇತನ ಆಯೋಗ ಹಾಗೂ  ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಸರ್ಕಾರಿ ನೌಕರರು ನಮ್ಮವರು. ಅವರ ವೇತನ  ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ … Read more

ಅಬಕಾರಿ ಟೆಂಡರ್ ಅವ್ಯವಹಾರ – ಕಾಂಗ್ರೆಸ್ ವಿವರ ನೀಡಲಿ: ಸಿಎಂ ಬೊಮ್ಮಾಯಿ

Excise Tender Absence – Let the Congress give details ಉತ್ತರ ಕನ್ನಡ ( ಸಿದ್ಧಾಪುರ) ಫೆ. 28:  ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಇಂದು ಸಿದ್ಧಾಪುರ ವಿವಿಧ  ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ  ನೀಡಿದರು. ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ … Read more

ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

ದಾವಣಗೆರೆ, ಫೆ 28: ಶಿಕ್ಷಣದ ಜೊತೆಗೆ ಕ್ರೀಡಾ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುವ ಜೊತೆಗೆ ನೀವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಮುನ್ನಡೆಸುವ ಅವಕಾಶವನ್ನು ಪಡೆಯುತ್ತೀರಿ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಣ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಜೋಡಿಸುವ ಮೂಲಕ ನವ ಭಾರತ, … Read more

ಆಸರೆಯಾದ ಅಜ್ಜಿಯ ನಿವೃತ್ತಿಯ ದಿನದಂದೆ ಹಾಲಮ್ಮನ ಕೊರಳಿಗೆ 5 ಸ್ವರ್ಣ ಪದಕ

ಸುದ್ದಿ360 ದಾವಣಗೆರೆ.ಫೆ.28: ತಾನು 3ನೇ ತರಗತಿಯಲ್ಲಿ ಓದುತ್ತಿರುವಾಗಲೇ ತನ್ನ ಅಮ್ಮನನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಹಾಲಮ್ಮ ಬಿ. ಇಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಐದು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪದವಿಯೊಂದಿಗೆ ಐದು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿರುವ ಹಾಲಮ್ಮ ‘ಸುದ್ದಿ360’ ಯೊಂದಿಗೆ ಸಂತಸವನ್ನು ಹಂಚಿಕೊಂಡರು. ನನ್ನನ್ನು ಸಾಕಿ ಸಲಹಿದ ನನ್ನ ಅಜ್ಜಿಗೆ ಇಂದು ನಿವೃತ್ತಿಯ ದಿನವಾಗಿದೆ. ಇದೇ … Read more

error: Content is protected !!