ದಾವಣಗೆರೆ ಡಿಆರ್‌ಆರ್ ಕಾಲೇಜು ವಿದ್ಯಾರ್ಥಿಗಳಿಂದ ‘ವಿ ವಾಂಟ್ ಜಸ್ಟೀಸ್’ ಫಲಕ ಹಿಡಿದು ಪ್ರತಿಭಟನೆ

ಸುದ್ದಿ 360 ದಾವಣಗೆರೆ, ಜ.10: ಇಲ್ಲಿನ ಡಿಆರ್ ಆರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ನಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಬೇಕು ಎಂಬ ಫಲಕಗಳೊಂದಿಗೆ ಇಂದು ಪ್ರತಿಭಟನೆ ನಡೆಸಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಡಿಆರ್ ಆರ್ ಪಾಲಿಟೆಕ್ನಿಕ್ ಕಾಲೇಜು ಆವರಣಗಳು ಪರಸ್ಪರ ಹೊಂದಿಕೊಂಡಿದ್ದು, ಡಿಆರ್‌ಆರ್ ಪಾಲಿಟೆಕ್ನಿಕ್‌ಗೆ ಸೇರಿದ ಜಾಗದಲ್ಲಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಿಸಲು ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಡಿಆರ್‌ಆರ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿದರು. ರಾಜ್ಯ ಸರಕಾರ ಕಾಲೇಜು ಮತ್ತು … Read more

ಪೋಷಕರನ್ನು ಬಾಲ್ಯದ ದಿನಕ್ಕೆ ಕರೆದೊಯ್ದ ದಾವಣಗೆರೆ ಪಿಬಿವಿ ವಿದ್ಯಾಲಯ

ಸುದ್ದಿ 360 ದಾವಣಗೆರೆ, ಜ.10: ದಿನಾ ಬೆಳಗೆದ್ದು ಮಕ್ಕಳ ಶಾಲೆಯ ಬ್ಯಾಗ್, ಲಂಚ್ ಬ್ಯಾಗ್, ನೀರು ಬಾಟಲ್, ಕರ್ಚಿಪ್, ಮಾಸ್ಕ್ ಹೀಗೆ ಮಕ್ಕಳನ್ನು ಶಾಲೆಗೆ ಸಜ್ಜುಗೊಳಿಸಿ ಶಾಲಾ ಆವರಣಕ್ಕೆ ತಲುಪಿಸಿ ಉಸ್ಸಪ್ಪ ಇವತ್ತಿನ ಅರ್ಧ ಕೆಲಸ ಮುಗೀತು ಎಂದು ನಿಟ್ಟುಸಿರು ಬಿಡುತ್ತಾ ಮನೆ ಕಡೆಗೆ ತೆರಳುತ್ತಿದ್ದ ಪೋಷಕರ ಈ ದಿನ ಕೊಂಚ ವಿಶೇಷವಾಗಿಯೇ ಇತ್ತು. ನಗರದ ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್ ನಲ್ಲಿರುವ ದೈವಜ್ಞ ವಿದ್ಯಾಸಂಸ್ಥೆ ಪಿಬಿವಿ ವಿದ್ಯಾಲಯದಲ್ಲಿ ಸೋಮವಾರ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ಹಲವು … Read more

ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ

ಸುದ್ದಿ360 ಬೆಂಗಳೂರು, ಜ.3: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ  ಹಿಂದಿರುಗಲಿದ್ದಾರೆ ಎಂದು ತಿಳಿಸಿದರು. ಜ.19 ರಂದು ಪ್ರಧಾನಿ ಮೋದಿಯವರು ನಾರಾಯಣಪುರ … Read more

ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಕೇಸ್; ಪಿಡಿಒ‌ ಸೇರಿ 11ಜನರ ವಿರುದ್ಧ ಎಫ್ ಐಆರ್ ದಾಖಲು

ಸುದ್ದಿ೩೬೦ ದಾವಣಗೆರೆ, ಜ.೯: ಜಿಲ್ಲೆಯ ಜಗಳೂರಿನಲ್ಲಿ ಆರ್ ಟಿ ಐ ಕಾರ್ಯಕರ್ತ ಹಾಗೂ ಕರವೇ ತಾಲ್ಲೂಕು ಅಧ್ಯಕ್ಷ ಜಿ.ಪಿ.ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಿಂತೆ ಪೊಲೀಸರು ಪಿಡಿಒ ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಪಿಡಿಓ ಎ.ಟಿ.ನಾಗರಾಜ್ ಸೇರಿ 11 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್, ದರ್ಶನ್ ಎಂಬುವರನ್ನು ಬಂಧಿಸಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲೆಯ ಜಗಳೂರು ತಾಲೂಕಿನ … Read more

ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ

ಸುದ್ದಿ360 ಕಲಬುರಗಿ ಜ.6: ಜೀವನದಲ್ಲಿ ಜಿಗುಪ್ಸೆಗೊಂಡು ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಆಳಂದ ಪಟ್ಟಣದ ಬಸ್ ಡಿಪೋ ಬಳಿ ನಡೆದ ಘಟನೆಯಲ್ಲಿ ಸಿದ್ದು ಮಹಾಮಲ್ಲಪ್ಪಾ (35), ಹಾಗೂ ಮಕ್ಕಳಾದ ಶ್ರೇಯಾ (11), ಮನೀಶ್ (12) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರು ಮಕ್ಕಳ ಮೃತದೇಹವನ್ನು ಶುಕ್ರವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದು,ಮೃತ ಮಕ್ಕಳ ತಂದೆಯ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟ ತಂದೆ … Read more

ಬಾದಾಮಿಯಿಂದ ಸ್ಪರ್ಧಿಸಿದರೆ ಒಳ್ಳೆಯದಾಗುತ್ತೆ – ಸಿದ್ಧರಾಮಯ್ಯನವರಿಗೆ ಬನಶಂಕರಿ ದೇಗುಲದ ಅರ್ಚಕರ ಮನವಿ

ಸುದ್ದಿ360 ಬಾಗಲಕೋಟೆ ಜ.6: ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಸಿದ್ದರಾಮಯ್ಯ ಗೆ ಒಳ್ಳೆಯದಾಗುತ್ತದೆ ಎಂದು ಬಾದಾಮಿ ಬನಶಂಕರಿ ದೇಗುಲದ ಅರ್ಚಕರು ಹೇಳಿದ್ದಾರೆ. ಬನಶಂಕರಿ ಜಾತ್ರೆಯ ಮಹಾರಥೋತ್ಸವ ನಿಮಿತ್ತ ಬಾದಾಮಿಗೆ ಆಗಮಿಸಿದ್ದ ಸಿದ್ದರಾಮಯ್ಯರಿಗೆ ಇಲ್ಲಿನ ಅರ್ಚಕರು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯನವರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ಕೈಂಕರ್ಯ ಮುಗಿದ ಬಳಿಕ ಆಶೀರ್ವಾದ ಮಾಡಿದ ಅರ್ಚಕರು ಬಾದಾಮಿಯಿಂದ ಸ್ಫರ್ಧೆ ಮಾಡಿದರೆ ಒಳ್ಳೆಯದಾಗುತ್ತೆ ಎಂದು ಹೇಳಿದ್ದಾರೆ.

ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ತಿರುಗೇಟು

ಸುದ್ದಿ360 ಬೀದರ್ ಜ.6: ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಕುಮಾರಣ್ಣ ಇಂದು ಬೀದರ್ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಒಂದು ವೀಡಿಯೋ ಕ್ಲಿಪ್ ಇಲ್ಲಿದೆ.

ಬನಶಂಕರಿ ನಿನ್ನ ಪಾದಕ ಶಂಭೂಕೋ – ಬನಶಂಕರಿ ರಥೋತ್ಸವಕ್ಕೆ ಸಂಭ್ರಮದ ಚಾಲನೆ

ಸುದ್ದಿ360 ಬಾಗಲಕೋಟೆ ಜ.6: ಜಿಲ್ಲೆಯ ಬಾದಾಮಿಯ ಬನಶಂಕರಿ ರಥೋತ್ಸವಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ದೊರೆತಿದ್ದು, ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಪುಷ್ಪಾರ್ಪಣೆ ಮಾಡು ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಜನ ಸಾಗರದಿಂದ “ಬನಶಂಕರಿ ನಿನ್ನ ಪಾದಕ ಶಂಭೂಕೋ” ಎಂಬ ಉದ್ಘೋಷ ಕೇಳಿಬರುತ್ತಿತ್ತು. ಉದ್ಘೋಷದೊಂದಿಗೆ ನಮಿಸಿದ ಭಕ್ತಸಾಗರ ದೇವಿಯ ಕೃಪೆಗೆ ಪಾತ್ರರಾದರು. ಒಂದು ತಿಂಗಳ ಜಾತ್ರೆ ಇದಾಗಿದ್ದು ಇಂದಿನಿಂದ ಅಧಿಕೃತವಾಗಿ ಪ್ರಾರಂಭಗೊಂಡಿದೆ.

ಟ್ರ್ಯಾಕ್ಟರ್ ಪಲ್ಟಿ, ಸ್ಥಳದಲ್ಲೇ ಇಬ್ಬರ ಸಾವು – ಇಬ್ಬರ ಸ್ಥಿತಿ ಗಂಭೀರ

ಸುದ್ದಿ360 ಬಾಗಲಕೋಟೆ ಜ.6: ಸವದತ್ತಿ ಯಲ್ಲಮ್ಮನ ಗುಡ್ಡದ ಜಾತ್ರೆಗೆ  ಹೋಗಿ ಬರುತ್ತಿದ್ದ ವೇಳೆ ಎರಡೂ ಟ್ರ್ಯಾಕ್ಟರ್ ಚಾಲಕರು ಓವರ್ ಟೇಕ್ ಮಾಡಲು ಹೋಗಿ ಹಿಂಬದಿಯ ಟ್ರ್ಯಾಕ್ಟರ್ ಮುಂದಿನ ಟ್ರ್ಯಾಕ್ಟರ್ಗೆ ಗುದ್ದಿರುವ ಕಾರಣ ದುರಂತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಪಲ್ಟಿಯಾದ ಸ್ಥಳದಲ್ಲೇ ಇಬ್ಬರು ಸಾವುಗೀಡಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಗೋವಿಂದ್( 20), ಹಣಮಂತ (20) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಹನಮಂತ ಹುಣಸಿಕಟ್ಟಿ ಅವರಿಗೆ ಸೇರಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, … Read more

ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು – ಜೆಪಿ ನಡ್ಡಾ

ಸುದ್ದಿ360 ತುಮಕೂರು (ಶಿರಾ) ಜ.6:  80 ಕೋಟಿ ಜನರಿಗೆ ಉಚಿತ ರೇಷನ್ ಕೊಟ್ಟಿರುವ  ಬಿಜೆಪಿ ಸರ್ಕಾರ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ  ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಶಿರಾ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,  ಯಡಿಯೂರಪ್ಪನವರು ಕರ್ನಾಟಕದ ಸರ್ವೊಚ್ಚ ನಾಯಕರು. ಎನ್ ಡಿ ಎ ಸರ್ಕಾರ ಬಂದಾಗ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ‌ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನದ್ದು ಜಾತಿ ಜಾತಿ ಎಂದು ಒಡೆದು … Read more

error: Content is protected !!