ಡಿ ಬಸವರಾಜ್‍ರಿಂದ  ಟಿಕೆಟ್‍ಗಾಗಿ ಮನವಿ

ಸುದ್ದಿ360 ದಾವಣಗೆರೆ, ಡಿ.30: ಇಂದು ದಾವಣಗೆರೆ ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾದ ಡಿ ಬಸವರಾಜ್ ರವರು ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ತಮಗೆ ಕಾಂಗ್ರೆಸ್ ಪಕ್ಷದ  ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ನಿಷ್ಠೆಯಿಂದ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿದ್ದು ಭೋವಿ ಸಮಾಜಕ್ಕೆ ಸೇರಿರುವ ತಮಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ … Read more

‘ಅಮಿತ್ ಶಾ ಹತ್ರ ಏನು ಮಂತ್ರದಂಡ ಇಲ್ಲ – ನರೇಂದ್ರ ಮೋದಿ ಬಂದ್ರು ಇಲ್ಲಿ ಗೆಲ್ಲಲ್ಲ’

ಸುದ್ದಿ360 ದಾವಣಗೆರೆ, ಡಿ.30: ಅಮಿತ್ ಶಾ ರಾಜ್ಯಭೇಟಿ ಕುರಿತಂತೆ, ಅಮಿತ್ ಶಾ ಹತ್ರ ಏನು ಮಂತ್ರದಂಡ ಇದೆಯಾ, ಅವರು ಎಷ್ಟು ಬಾರಿ ಬಂದ್ರು ಅಷ್ಟೇ, ಅವರ ಜಾದೂ ಇಲ್ಲೆನು ನಡೆಯಲ್ಲ. ನರೇಂದ್ರ ಮೋದಿಯವರೇ ಬಂದ್ರೂ ಬಿಜೆಪಿ ಗೆಲ್ಲಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ನಗರದ ಬಾಪೂಜಿ ಕಾಲೇಜು ಗ್ರೌಂಡ್‍ನಲ್ಲಿ ಸಿದ್ಧರಾಮಯ್ಯನವರು ಹೆಲೆಕಾಪ್ಟರ್‍ನಿಂದ ಇಳಿಯುತ್ತಿದ್ದ ಹಾಗೆ ಚಾಮುಂಡೇಶ್ವರಿ ತಾಯಿ … Read more

ಚುನಾವಣಾ ಗಿಮಿಕ್ ಗೆ ಮುಂದಾಗಿರುವ ಸರ್ಕಾರದಿಂದ ಮೀಸಲಾತಿ ಗೊಂದಲ : ಸಿದ್ಧರಾಮಯ್ಯ

ಸುದ್ದಿ360 ದಾವಣಗೆರೆ, ಡಿ.30: ಮೀಸಲಾತಿಯಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿರುವ ಬಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಗೊಂದಲದಲ್ಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತವೊಲಿಕೆಯ ರಾಜಕಾರಣ ಮಾಡುತ್ತಿದೆ ಎಂದು ಮೀಸಲಾತಿ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಿಸರ್ವೇಷನ್ 50 ಪರ್ಸೆಂಟ್‍ಗಿಂತ ಹೆಚ್ಚಾಗಬಾರದು ಎಂದು 1992ರಲ್ಲಿ ಸುಪ್ರೀಂಕೋರ್ಟ್ ಬೆಂಚ್ ಬಹಳ ಸ್ಪಷ್ಟವಾಗಿ ಹೇಳಿದೆ.  ಆದರೆ ಈ ಮೊದಲು … Read more

‘ಹಳೇ ಪಿಂಚಣಿ ಸಾಧ್ಯವಿಲ್ಲ – ಕೆಲಸಕ್ಕೆ ಸೇರುವಾಗಲೇ ಇದಕ್ಕೆ ಒಪ್ಪಿದ್ದೀರಿ’

ಬೆಳಗಾವಿ ಅಧಿವೇಶನದ ಕೊನೆಯ ದಿನದಲ್ಲಿ ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷಗಳ ಸದಸ್ಯರು ಸೇರಿದಂತೆ ಹಲವರು ಸಭಾತ್ಯಾಗ

ನಾಳೆ ದಾವಣಗೆರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನಗರದಲ್ಲಿ ಶ್ರೀ ಎಲ್.ಬಿ.ಕೆ. ಕಲ್ಯಾಣ ಟ್ರಸ್ಟ್ ವತಿಯಿಂದ 7 ನೇ ಬಾರಿಗೆ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಡಿ.30ರಂದು ಬೆಳಿಗ್ಗೆ11 ಗಂಟೆಗೆ ನಗರದ ಶ್ರೀ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ. ಹರಿಹರ ರಾಜನಹಳ್ಳಿ ವಾಲ್ಮೀಕಿ ಸಂಸ್ಥಾನದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಜರುಗುವ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಮಾಜಿ … Read more

‘ಪೌರ ಕಾರ್ಮಿಕರಲ್ಲ, ಪೌರ ನೌಕರರು’ – ರಾಜ್ಯದ 42000 ಪೌರಕಾರ್ಮಿಕ ರನ್ನು ಖಾಯಂಗೊಳಿಸಲು ಕ್ರಮ : ಸಿಎಂ

ಸುದ್ದಿ360 ಬೆಳಗಾವಿ, ಡಿ.28 : ರಾಜ್ಯದಲ್ಲಿ  11133 ಪೌರ ಕಾರ್ಮಿಕರ  ನೌಕರಿಯನ್ನು ಖಾಯಂಗೊಳಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ : ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆಯನ್ನು ಅವರ … Read more

ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ. . . ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಕ್ರಮ ವನ್ಯಜೀವಿ ಸಾಕಾಣಿಕೆ?

ಆಡಳಿತ ಪಕ್ಷಕ್ಕೆ ನುಂಗಲಾರದ ತುತ್ತಾಯಿತೆ. . . !? ಸುದ್ದಿ360 ದಾವಣಗೆರೆ: ಇಲ್ಲಿ ಯಾರನ್ನಾದರೂ ರಾಜಕೀಯ ಕುರಿತು ಮಾತಿಗೆಳೆದರೆ, ಜಿಂಕೆ ನಿಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಅಷ್ಟೇ ಅಲ್ಲ ಕೃಷ್ಣಮೃಗ, ಕಾಡು ಹಂದಿ, ನರಿ, ಮುಂಗಸಿ ಇವುಗಳೂ ಕೂಡ ನಿಮ್ಮ ಕಣ್ಣಮುಂದೆ ಬರದೇ ಇರವು. ಅರೆರೆ ರಾಜಕೀಯಕ್ಕು ಈ ವನ್ಯಜೀವಿಗಳಿಗೂ ಏನು ಸಂಬಂಧ ಅಂತೀರಾ . . .? ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವನ್ಯಜೀವಿಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದಾವಣಗೆರೆಯಲ್ಲಿ … Read more

ದಾವಣಗೆರೆ: ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರ ವಿರುದ್ಧ ಇಲಾಖಾ ಶಿಸ್ತುಕ್ರಮ

ಸುದ್ದಿ360 ದಾವಣಗೆರೆ ಡಿ.27:  ಚೆಕ್ ಬೌನ್ಸ್ ಪ್ರಕರಣದಲ್ಲಿ  ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್  ಭರತ್ ಹಾಗೂ ಲಂಚದ ಹಣವನ್ನು ಪಡೆಯಲು ಸಹಕರಿಸಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರವರ ಸಂಬಂಧಿ  ಸುರೇಶ ಇವರ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯ  ಹೆಡ್ ಕಾನ್ಸ್ಟೇಬಲ್ ಭರತ್ ರವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ … Read more

ಕೋವಿಡ್ ಎದುರಿಸಲು ದಾವಣಗೆರೆ ಜಿಲ್ಲೆ ಸನ್ನದ್ದ – ಅಧಿಕಾರಿಗಳು ಹೇಳಿದ್ದೇನು?

ಸುದ್ದಿ360 ದಾವಣಗೆರೆ ಡಿ.27: ಕೋವಿಡ್ ತವರು ರಾಷ್ಟ್ರ ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್ 19ರ ರೂಪಾಂತರಿ ತಳಿ ಬಿಎಫ್-7 ವ್ಯಾಪಕವಾಗಿ ಹರಡುತ್ತಿರುವ ಮುನ್ಸೂಚನೆಯಿಂದ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ಕೋವಿಡ್ ನ್ನು ಸಮರ್ಥವಾಗಿ ಎದುರಿಸಲು ಶಸ್ತ್ರಸಜ್ಜಿತವಾಗತೊಡಗಿವೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೂಡ ಮಂಗಳವಾರ ಸಿದ್ಧತೆಗಳ ಅಣಕು ತಾಲೀಮು ನಡೆಸಲಾಯಿತು. ಸರಕಾರಿ ಆಸ್ಪತ್ರೆಗಳಲ್ಲಿನ ಕೋವಿಡ್ ಸಂಬಂಧಿಸಿದ ಸೌಲಭ್ಯಗಳ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಕೇಳಿ ಪಡೆಯಲಾಯಿತು. ಅದರಂತೆ ದಾವಣಗೆರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, … Read more

‘ವನ್ಯಜೀವಿ ಸಾಕಾಣಿಕೆ ಲೈಸನ್ಸ್ ಬಹಿರಂಗಪಡಿಸಿ – ಅಮಾಯಕರನ್ನು ಕೈಬಿಡಲು ಆಗ್ರಹ

ಸುದ್ದಿ360  ದಾವಣಗೆರೆ ಡಿ.27: ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಶೆಡ್ಯೂಲ್ಡ್ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಲಾಗಿದ್ದ ಪ್ರಕರಣದಲ್ಲಿ ಸ್ಥಳದ ಮಾಲೀಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಆರೋಪಿ ನಂ.-1ನ್ನಾಗಿ ನಮೂದಿಸಲಾಗಿಲ್ಲ. ಅಲ್ಲದೆ ಇಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್‌ ಆರೋಪಿಸಿದರು. ವನ್ಯಜೀವಿಗಳು ಸಿಕ್ಕಿರುವ ರೈಸ್ ಮಿಲ್ಲು ಯಾರ ಒಡೆತನದಲ್ಲಿ ಇದೆ ಎಂಬುದನ್ನು ಎಸ್‍ಎಸ್‍ ಮಲ್ಲಿಕಾರ್ಜುನ್ ಅವರು  ಹೇಳಲಿ. ವನ್ಯಜೀವಿಗಳ ಸಾಕಾಣಿಕೆಗೆ ಅಧಿಕೃತ ಲೈಸನ್ಸ್ … Read more

error: Content is protected !!