ದಸರಾ ರಜೆ: ಏನಾದ್ರೂ ಕಲೀಬೇಕಲ್ಲಾ ಅನ್ನೋ ಮಕ್ಕಳಿಗೆ – ಚೆಸ್‍ ತರಬೇತಿ ಶಿಬಿರ

ಸುದ್ದಿ360 ದಾವಣಗೆರೆ (Davangere): ದಸರಾ ರಜೆ (Dussehra Holidays) ಶುರುವಾಯಿತು. ಮನೆಯಲ್ಲೇ ಉಳಿಯುವ ಮಕ್ಕಳನ್ನು ಒಂದಿಷ್ಟು ಯ್ಯಾಕ್ಟಿವ್‍ ಮಾಡೋಣ ಎಂದೆಣಿಸುವ ಪೋಷಕರಿಗೆ ಇಲ್ಲೊಂದು ಅವಕಾಶ ಇದೆ ನೋಡಿ. ಏನು ಅಂತೀರ ಮಕ್ಕಳ ಮನಸನ್ನು ಹಿಡಿದಿಡುವ, ಹೊಸ ಹೊಸ ಟಾಸ್ಕ್ ಗಳನ್ನು ಮಕ್ಕಳ ಮುಂದಿರಿಸುವ ಗೇಮ್‍ ಚದುರಂಗ (chess) ಇದೇ ಅ.15ರಿಂದ 15 ದಿನಗಳ ಚೆಸ್‍ ತರಬೇತಿ ಶಿಬಿರ ಆರಂಭಗೊಂಡಿದೆ. ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ  15 ದಿನಗಳ ಚೆಸ್‍ ತರಬೇತಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು … Read more

ಅ.12: ಕನಕ‌ಜಯಂತಿ ಆಚರಣೆ ಪೂರ್ವಬಾವಿ ಸಭೆ

ಸುದ್ದಿ360, ದಾವಣಗೆರೆ ಅ.11: ನವೆಂಬರ್‌ ನಲ್ಲಿ ನಡೆಯಲಿರುವ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಅಂಗವಾಗಿ ಗುರುವಾರ ಅಕ್ಟೋಬರ್ 12 ರಂದು ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ  ಸಂಜೆ 5 ಗಂಟೆಗೆ ಸರಿಯಾಗಿ ಮಾಜಿ‌ ಕನಕ ಬ್ಯಾಂಕ್ ಅಧ್ಯಕ್ಷರು, ಕುರುಬಸಮಾಜದ ಹಿರಿಯ ಮುಖಂಡರು ಆದ ಪೈಲ್ವಾನ್ ‌ಹೆಚ್.ಜಿ.ಸಂಗಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿನಗರಸಭೆ ಸದಸ್ಯರಾದ ಎನ್.ಜೆ.ನಿಂಗಪ್ಪನವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಸಮಾಜ‌ಭಾಂದವರು  ಹಾಗೂ ಸಮಾಜದ ವಿವಿದ ಸಂಘಸಂಸ್ಥೆಗಳ ಪಧಾದಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಯಂತ್ಯೋತ್ಸವ ಅರ್ಥಪೂರ್ಣ ಆಚರಣೆಮಾಡಲು … Read more

ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್‍ ಕ್ರಿಕೆಟ್‍ ಸಾಂಗ್‍ ‘ಗೆದ್ದು ಬಾ ಓ ಇಂಡಿಯಾ’

ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್‍ ಕಪ್‍ ಕ್ರಿಕೆಟ್‍ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್‍ ಕ್ಯಾಟ್‍ ಕ್ರಿಯೇಟಿವ್ ಲ್ಯಾಬ್‍” ರಚಿಸಿರುವ  “ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆ ಸಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ. ನಗರದ ಪಿಬಿ ರಸ್ತೆಯಲ್ಲಿರುವ ಬಿಸಿಎಲ್‍ ಕ್ರಿಯೇಟಿವ್‍ ಏಜೆನ್ಸಿಯ ಮೂವಿ ಹಾಲ್‍ನಲ್ಲಿ ಇಂದು ಬ್ಲ್ಯಾಕ್‍ ಕ್ಯಾಟ್‍ ತಂಡ ಈ ಒಂದು ಗೀತೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಗೀತೆಯ ರಚನೆಯ ಕುರಿತು ಮಾಹಿತಿ ನೀಡಿದರು.  ಕನ್ನಡ, … Read more

ರೈತರಿಗೆ ನಿರಂತರ ಏಳು ತಾಸು ಕರೆಂಟ್ ಕೊಡದಿದ್ದರೆ, ವಿದ್ಯುತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ – ಬಸವರಾಜ ಬೊಮ್ಮಾಯಿ

electricity-office-will-be-locked-and-protested-basavaraja-bommai

ಸುದ್ದಿ360 ಚಿಕ್ಕಬಳ್ಳಾಪುರ (chikkaballapura) ಅ.11: ಸರ್ಕಾರ ರೈತರಿಗೆ ಏಳು ಗಂಟೆ ಥ್ರಿಫೆಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ‌ಕಚೇರಿಗಳಿಗೆ ಬೀಗ ಹಾಕಿ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಾಜಿ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರೆಂಟ್ ಪಡೆಯುವುದು ನಮ್ನ ಹಕ್ಕು, ಅಕ್ಕಿ ಪಡೆಯುವುದು ನಮ್ಮ ಹಕ್ಕು. … Read more

ಎಚ್ ಡಿಕೆ ಹೇಳಿಕೆಗೆ  ಮಹಬೂಬ್ ಭಾಷಾ ತೀವ್ರ ಖಂಡನೆ

ಸುದ್ದಿ360 ದಾವಣಗೆರೆ, ಅ.11: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಹಾರ್ ಜೈಲ್ಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿರುವುದನ್ನು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ, ತೀವ್ರವಾಗಿ ಖಂಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಇರುವ ಜನರ ಬೆಂಬಲ, ಅವರು ಒಬ್ಬ  ಉಪ ಮುಖ್ಯಮಂತ್ರಿಗಳಾಗಿ ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಸಹಿಸಿಕೊಳ್ಳದೆ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಡಿಕೆಶಿ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. 136 ಶಾಸಕರಿಂದ ಸಂವಿಧಾನಬದ್ಧವಾಗಿ … Read more

ಶಿವಮೊಗ್ಗ: ಮಕ್ಕಳ ದಸರಾ ಪ್ರಯುಕ್ತ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ

ಸುದ್ದಿ360 ಶಿವಮೊಗ್ಗ(Shivamogga) ಅ.11: ಶಿವಮೊಗ್ಗ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ಇದೇ ಅ.16 ರಂದು ಮಕ್ಕಳ ದಸರಾ ಪ್ರಯುಕ್ತ ನಗರದ  ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 17 ವರ್ಷ ದೊಳಗಿನ ವಯಸ್ಸಿನ ಮಕ್ಕಳಿಗೆ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ (State Level Karate Tournament for Childrens) ಆಯೋಜಿಸುತ್ತಿರುವುದಾಗಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ನ ಮುಖೀಬ್ ಅಹಮದ್ ತಿಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಕುಮಿತಿ ವಿಭಾಗಗಳು ಇದ್ದು ಶಿವಮೊಗ್ಗ ನಗರದ ಮಕ್ಕಳಿಗೆ ಮೊದಲ ಆದ್ಯತೆಯಾಗಿದ್ದು … Read more

‘ಗೆದ್ದು ಬಾ ಓ ಇಂಡಿಯಾ-2023’ ಗೀತೆ ಲೋಕಾರ್ಪಣೆ

indian-cricket-anthem-geddu-ba-o-india-2023-launch

ಸುದ್ದಿ360 ದಾವಣಗೆರೆ (Davangere), ಅ.10: ದಾವಣಗೆರೆಯ ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ (Black Cats Creative Lab) ನಿಂದ ‘ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ (geddu ba o india) ಕ್ರಿಕೆಟ್ ಗೀತೆ ರೂಪಿಸಲಾಗಿದ್ದು, ಅ.11ರಂದು ಮಧ್ಯಾಹ್ನ 12.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಬ್ಲಾಕ್‍ ಕ್ಯಾಟ್ಸ್ ತಂಡದ ಎಂ.ಎಸ್. ಚೇತನ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‍ ತಂಡವನ್ನುಮತ್ತು ಪ್ರೇಕ್ಷಕರನ್ನು  ಹುರಿದುಂಬಿಸುವ ನಿಟ್ಟಿನಲ್ಲಿ ‘ಭಾರತೀಯ ಕ್ರಿಕೆಟ್‍ ಗೀತೆ2023’ ‘ಗೆದ್ದು … Read more

‘ರಾಜ್ಯ ಸರ್ಕಾರಕ್ಕೆ ಕೇಂದ್ರದ ಸ್ಟ್ರೋಕ್’ – ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೀಗೆ ಹೇಳಿದ್ದೇಕೆ..?

centers-stroke-to-state-government-basavaraja-bommai-hubli

ಸುದ್ದಿ360 ಹುಬ್ಬಳ್ಳಿ(hubli) ಅ.10: ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಸ್ಟ್ರೋಕ್‍ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು  ಮಾಧ್ಯಮಗಳಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸುತ್ತಿರುವ ಕುರಿತು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದ ಸ್ಟ್ರೋಕ್ ಆಗಿದೆ. ಬರ ಆದರೂ ಕಾವೇರಿ ಆದರೂ ಎಲ್ಲದಕ್ಕೂ ಕೇಂದ್ರ. ಕಡೆಗೆ ಬೆರಳು ತೋರಿಸುತ್ತಾರೆ. ಈಗ ವಿದ್ಯುತ್ … Read more

ಚದುರಂಗ: ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

ಸುದ್ದಿ360 ದಾವಣಗೆರೆ (davangere), ಅ.09: ನಗರದ ಗುರುಭವನದಲ್ಲಿ ಇಂದು  ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಚದುರಂಗ (chess) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಸ್ಪರ್ಧಿಗಳ ಆಯ್ಕೆ ನಡೆಯಿತು. ಸ್ಪರ್ಧೆಯಲ್ಲಿ 14/17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ಎರಡು ವಿಭಾಗದಲ್ಲಿ ಆಯ್ಕೆ ನಡೆಸಲಾಯಿತು. 14 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಹೊನ್ನಳ್ಳಿಯ ಆಕಾಶ್ ಕೆಪಿ ಪ್ರಥಮ ಸ್ಥಾನ, ಜನಾರ್ಧನ್ ದ್ವಿತೀಯ ಸ್ಥಾನ,  ದಾವಣಗೆರೆಯ ಶರತ್ ಎಂ ಎನ್ ತೃತೀಯ ಸ್ಥಾನ, ಹರಿಹರದ ಚಂದನ್ ಎಸ್ ಜಾದವ್ … Read more

ಭೀಕರ ಅಪಘಾತ: ಬಾಲಕ ಸೇರಿ 7 ಮಂದಿ ದುರ್ಮರಣ

ಸುದ್ದಿ360, ಹೊಸಪೇಟೆ (hospet) ಅ.09: ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಮತ್ತು ಕ್ರ್ಯೂಸರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (accident) 7 ಜನರ ದುರ್ಮಣ ಹೊಂದಿದ್ದಾರೆ. ಹೊಸಪೇಟೆ ನಗರದ ಹೊರವಲಯದ ಟನಲ್ ಬಳಿ ಈ ಅಪಘಾತ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್‍ನಲ್ಲಿದ್ದ 7 ಜನರು ಮೃತಪಟ್ಟಿದ್ದು, ವಾಹನದಲ್ಲಿ ಸಿಲುಕಿರುವ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಕ್ರೂಸರ್‍ನಲ್ಲಿದ್ದವರು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ‌. ಕ್ರ್ಯೂಸರ್ … Read more

error: Content is protected !!