ಸಿಎಂ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ ಕೆಎಂಎಫ್ – ನೂತನ ದರ ಇಲ್ಲಿದೆ ನೋಡಿ

ಸುದ್ದಿ360, ಬೆಂಗಳೂರು, ಜು.18: ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ನಂದಿನಿ‌ ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಶೇ.5 ಜಿಎಸ್ ಟಿ ಆಕರಣೆಯಿಂದ ಹೆಚ್ಚಾಗಿದ್ದ ದರ ಮರು ಪರಿಷ್ಕರಣೆ ಮಾಡಿದ ಕೆ ಎಂ ಎಫ್. ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ. 5 ರಷ್ಟು ಜಿಎಸ್ ಟಿ ಯಿಂದ ದರ ಹೆಚ್ಚಾಗಿತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ದರ ಮರು ಪರಿಷ್ಕರಣೆ ಮಾಡಿದ … Read more

ಆಗಸ್ಟ್ 12ಕ್ಕೆ ಗಾಳಿಪಟ-2 ರಾಜ್ಯಾದ್ಯಂತ ತೆರೆಗೆ

ಸುದ್ದಿ360, ಬೆಂಗಳೂರು, ಜು.18: ರೋಚಕ ತಿರುವುಗಳನ್ನೊಳಗೊಂಡ, ಹಾಸ್ಯಭರಿತ ಪ್ರಸಂಗಗಳೊಂದಿಗೆ ಸಾಗುವ ಪ್ರಯಾಣದ ಮೂವರು ಹುಡುಗರು ಮತ್ತು ಅವರ ಪ್ರೇಮಗಳ ಕತೆ ಹೊಂದಿರುವ ಗಾಳಿಪಟ-2 ಚಲನಚಿತ್ರ ಮುಂಬರುವ ಆಗಸ್ಟ್ 12ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಮಡೆನೂರು ಮನು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಕಲಾವಿದರು, ಗಣೇಶ್, ದಿಗಂತ್ ಹಾಗೂ ಭೂಷಣ್ ಎನ್ನುವ ಮೂವರು ಪ್ರಾಣ ಸ್ನೇಹಿತರ ನಡುವೆ ನಡೆಯುವ ಕಥೆಯ ಹಂದರವನ್ನು ಹೊಂದಿದೆ. ಮೂವರು ಪ್ರಾಣ ಸ್ನೇಹಿತರು ನೀರುಕೋಟೆ ಎನ್ನುವ ಊರಿನ … Read more

ಜು.20ರಿಂದ 5 ದಿನಗಳ ಯೋಗ ಜೀವನ ದರ್ಶನ-2022

ಸುದ್ದಿ360, ಬೆಂಗಳೂರು, ಜು.18: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಜುಲೈ, 20 ರಿಂದ 24 ರವರೆಗೆ ನಗರದ 8 ಕಡೆಗಳಲ್ಲಿ ಯೋಗ ಜೀವನ ದರ್ಶನ-2022 ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಫೌಂಡೇಶನ್ನಿನ ಸಂಚಾಲಕ ಟಿ.ವಿ.ವಿ ಸತ್ಯನಾರಾಯಣ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಟೀಕರಿಸುವ ಕಾರ್ಯವನ್ನು ಮಾಡುತ್ತಿರುವ ಸಂಘಟನೆಯಾಗಿದೆ.  ಅಂತಾರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ … Read more

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮಾತದೊಂದಿಗೆ ಗೆಲುವು ನಿಶ್ಚಿತ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು, ಜು.18: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3  ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ  ದಾಖಲೆಯನ್ನ ಮುರಿಯುವ ಎಲ್ಲಾ ಸಾಧ್ಯತೆಗಳಿವೆ.  ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು. ದೇಶಾದ್ಯಂತ ರಾಷ್ಟ್ರಪತಿ … Read more

ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಪೂಜೆಗೆ ಆದ್ಯತೆ, ವ್ಯಕ್ತಿ ಪೂಜೆಗಲ್ಲ: ಎಸ್ ಎಸ್ ಮಲ್ಲಿಕಾರ್ಜುನ್

ಸಿದ್ದರಾಮಯ್ಯ ಅಮೃತಮಹೋತ್ಸವ ಅಭಿಮಾನಿಗಳಿಂದಲೇ ರೂಪುಗೊಂಡಿರುವ ಕಾರ್ಯಕ್ರಮ ಸುದ್ದಿ360, ದಾವಣಗೆರೆ, ಜು.18: ಸಿದ್ದರಾಮಯ್ಯ ಅವರು ನಮ್ಮ ಬಲವಂತಕ್ಕೆ ಮಣಿದು ಅಮೃತ ಮಹೋತ್ಸವಕ್ಕೆ ಒಪ್ಪಿ  ಸಮ್ಮತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಪೂಜೆಗೆ ಆದ್ಯತೆ ಇದೆಯೇ ಹೊರತು ವ್ಯಕ್ತಿ ಪೂಜೆಗಲ್ಲ. ಹೀಗಾಗಿ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವ ವ್ಯಕ್ತಿ ಪೂಜೆಯಲ್ಲ ಎಂದು  ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು. ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯಕ್ರಮಕ್ಕೆ ಸೋಮವಾರ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ … Read more

ಬಿಜೆಪಿಯವರಿಗೆ ಅಭಿವೃದ್ಧಿಯ ಇಚ್ಛಾಶಕ್ತಿ ಇಲ್ಲ – ಎಸ್ ಎಸ್ ಮಲ್ಲಿಕಾರ್ಜುನ್ ಆರೋಪ

ಸುದ್ದಿ360, ದಾವಣಗೆರೆ, ಜು.18:  ಯಾವುದೇ ಕಾಮಗಾರಿಗಳು ಪರಿಪೂರ್ಣಗೊಳ್ಳಲು ಕ್ರಮಬದ್ಧವಾದ ಯೋಜನೆ ಇರಬೇಕು. ಆದರೆ ಬಿಜೆಪಿ ಜನಪ್ರತಿನಿಗಳಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಚ್ಛಾಶಕ್ತಿ ಇಲ್ಲ ಎಂದು ನಗರದಲ್ಲಿನ ಕಾಮಗಾರಿಗಳ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ್  ಆರೋಪಿಸಿದರು. ನಗರದ ಹೊರವಲಯದ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಸೋಮವಾರ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕುಂದವಾಡ ಕೆರೆ ಏರಿ ಅಭಿವೃದ್ಧಿ ಕುಂಟುತ್ತಾ ಸಾಗಿದ್ದು, ನಗರದೆಲ್ಲೆಡೆ ಕಳಪೆ ಕಾಮಗಾರಿಗಳು … Read more

ದಾವಣಗೆರೆ ಜಿಲ್ಲೆಯಲ್ಲಿ ಕನ್ನಡ ತೇರಿನ ಯಶಸ್ವೀ ಸಂಚಾರ – ಚಿತ್ರದುರ್ಗಕ್ಕೆ ಮುಂದುವರೆದ ಸಂಚಾರ

ಸುದ್ದಿ360, ದಾವಣಗೆರೆ, ಜು.18: ಸ್ವರಾಜ್ಯಕ್ಕೆ 75 ರ ಸಂಭ್ರಮಕ್ಕಾಗಿ ಯುವಾಬ್ರಿಗೇಡ್ ಆಯೋಜಿಸಿರುವ ಕನ್ನಡ ತೇರು ಭಾನುವಾರದಂದು ದಾವಣಗೆರೆ ಜಿಲ್ಲೆಯ ವಿವಿಧ ಭಾಗದಲ್ಲಿ ಸಂಚರಿಸಿತು. ಹೆಬ್ಬಾಳು ಗ್ರಾಮದಲ್ಲಿ ಬೆಳಗ್ಗೆ ಶ್ರೀ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳಿಂದ ಕನ್ನಡತೇರಿನ ಪೂಜೆ ಹಾಗೂ ಸ್ವಾಗತದೊಂದಿಗೆ ಪ್ರಾರಂಭವಾದ ಕನ್ನಡ ತೇರು, ಗ್ರಾಮದ ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರಿಗೆ ಸ್ವಾತಂತ್ರ್ಯ ಹೋರಾಟಗಾರರ, ದೇಶಕ್ಕಾಗಿ ತಮ್ಮ ಜೀವನವನ್ನೇ  ಮುಡಿಪಾಗಿಟ್ಟ ವೀರಯೋಧರ ಕುರಿತಾದ ಸಾಕ್ಟ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಸಂತೇಬೆನ್ನೂರು ಗ್ರಾಮಸ್ಥರು ಕಹಳೆ ಸದ್ದಿನೊಂದಿಗೆ ಕನ್ನಡ ತೇರಿಗೆ … Read more

ದಾವಣಗೆರೆಯಲ್ಲಿ ಯುವಾಬ್ರಿಗೇಡ್ ನಿಂದ ಕನ್ನಡ ತೇರಿನ ಯಶಸ್ವಿ ನಗರ ಸಂಚಾರ

ಸುದ್ದಿ360, ದಾವಣಗೆರೆ, ಜು.16: ಸ್ವರಾಜ್ಯಕ್ಕೆ 75 ರ ಸಂಭ್ರಮಕ್ಕಾಗಿ ಯುವಾಬ್ರಿಗೇಡ್ ಆಯೋಜಿಸಿರುವ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಸಂಚಾಲಕ ಕೆ.ಎಸ್. ಗಜೇಂದ್ರ  ಶನಿವಾರ ಬೆಳಿಗ್ಗೆ 8 ಗಂಟೆಗೆ  ನಗರ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನ ಸನ್ನಿಧಿಯಲ್ಲಿ ತೇರಿಗೆ ಪೂಜೆ ಸಲ್ಲಿಸಿ ನಗರ ಸಂಚಾರಕ್ಕೆ ಚಾಲನೆ ನೀಡಿದರು. ತದನಂತರ ನಗರ ಮಟ್ಟದ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡಿ,   ಎಲ್ಇಡಿ ಟಿವಿ ಮೂಲಕ 13 ನಿಮಿಷದ ಸಾಕ್ಷ್ಯ … Read more

ಆಹಾರ ಧಾನ್ಯಗಳ ಮೇಲಿನ ಜಿಎಸ್ ಟಿ ವಿರೋಧಿಸಿ ಕರೆದ ಬಂದ್ ಗೆ ಅಭೂತಪೂರ್ವ ಸಹಕಾರ: ಕೋಗುಂಡಿ ಬಕ್ಕೇಶಪ್ಪ

ಸುದ್ದಿ360, ದಾವಣಗೆರೆ, ಜು.16: ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ 5% ಜಿ ಎಸ್ ಟಿ ವಿರೋಧಿಸಿ ನಡೆಸಿದ ಬಂದ್ ಗೆ ಅಭೂತ ಪೂರ್ವ ಸಹಕಾರ ನೀಡಿದ  ಎಲ್ಲರಿಗೂ ಜಿಲ್ಲಾ ಅಕ್ಕಿಗಿರಣಿದಾರರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇತರ ಆಹಾರ ಧಾನ್ಯಗಳ ವರ್ತಕರು ವಾಣಿಜ್ಯ ಸಂಸ್ಥೆಗಳು ಚೌಕಿಪೇಟೆ ವರ್ತಕರು ದಲಾಲರು ಮೆಕ್ಕೆಜೋಳದ ವರ್ತಕರು ನಮ್ಮೊಂದಿಗೆ ಸಹಕರಿಸುವ ಮೂಲಕ ದಾವಣಗೆರೆ ಇತಿಹಾಸದಲ್ಲೇ ಅಭೂತ ಪೂರ್ವವಾಗಿ ಬಂದ್ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲು … Read more

ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಹುಬ್ಬಳ್ಳಿ, ಜು.16: ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಕೈಗಾರಿಕೆಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಉದ್ಯೋಗ ನೀತಿಯನ್ನು ಹೊರತರುತ್ತಿದೆ. ನಮ್ಮ ಯುವಕರು ಹಾಗೂ ಮಹಿಳೆಯರ ಕೈಗೆ ಉದ್ಯೋಗ ನೀಡಬೇಕು. ಮಹಿಳೆಯರು ಉದ್ದಿಮೆದಾರರಾಗಬೇಕು. ದೇಶದ ಅತ್ಯಂತ ಹೆಚ್ಚಿನ ರಫ್ತನ್ನು ಕರ್ನಾಟದಿಂದ ಮಾಡಲಾಗುತ್ತದೆ. ರಾಜ್ಯದಲ್ಲಿ ಬಹಳಷ್ಟು ಕೆಲಸಗಳಾಗುತ್ತಿದ್ದು, ಮೌನಕ್ರಾಂತಿಯಾಗುತ್ತಿದೆ. … Read more

error: Content is protected !!