ಸನ್ಮಾನ ಎನ್ನುವುದು ಶಿಕ್ಷಕರಿಗೆ ದೊಡ್ಡ ಬಹುಮಾನ: ಮುಖ್ಯಶಿಕ್ಷಕ ದೇವೇಂದ್ರಪ್ಪ ಅಭಿಮತ
ಸುದ್ದಿ360, ದಾವಣಗೆರೆ, ಜು.16: ಶಿಕ್ಷಕನಾದವನಿಗೆ ಸಮಾಜ ಅವನ ಸೇವೆಯನ್ನು ಗುರುತಿಸಿ ಸನ್ಮಾನಿಸಿದರೆ ಅದರಷ್ಟು ಹೆಮ್ಮೆ ತರುವ ವಿಚಾರ ಇನ್ನೊಂದಿಲ್ಲ. ಸನ್ಮಾನ ಎಂಬುದು ಶಿಕ್ಷಕರ ಪಾಲಿಗೆ ದೊಡ್ಡ ಬಹುಮಾನದಂತೆ ಎಂದು ಶಾಮನೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ದೇವೇಂದ್ರಪ್ಪ ಹೇಳಿದರು. ದಾವಣಗೆರೆ ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಕರನ್ನು ಗೌರವಿಸಿದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹದಾಯಕವಾಗುತ್ತದೆ. ತನ್ನನ್ನು ಪ್ರೀತಿಸುವ ವ್ಯಕ್ತಿಗಳಿದ್ದಾರೆ ಎಂದರೆ ಶಿಕ್ಷಕರಿಗೆ ನವಚೈತನ್ಯ ಮೂಡುತ್ತದೆ. … Read more