ಕಾಳಿಕಾದೇವಿಗೆ ಅಪಮಾನ: ಕಾಳೀ ಚಿತ್ರ ತಡೆಗೆ ವಿಶ್ವಕರ್ಮ ಸಮಾಜ ಒತ್ತಾಯ

ಸುದ್ದಿ360, ದಾವಣಗೆರೆ, ಜು.10: ಕಾಳಿ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಧೂಮಪಾನ ಮಾಡುವ ರೀತಿಯಲ್ಲಿ ಬಿಂಬಿಸುವ ಮೂಲಕ ನಮ್ಮ ಕುಲದೇವತೆಗೆ ಘೋರ ಅಪಮಾನ ಎಸಗಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ವಿ. ಶಿವಾನಂದ  ಆರೋಪಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಕಾಳಿ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ಮಿಸಿರುವ ಕಾಳಿ ಚಿತ್ರದ ಈ ಪೋಸ್ಟರ್ನಿಂದ ನಮ್ಮ ವಿಶ್ವಕರ್ಮ ಸಮಾಜದ ಸನಾತನ ಸಂಸ್ಕೃತಿಗೆ ಘನಘೋರ ಅಪಮಾನವಾಗಿದೆ. ಇಂತಹ ಚಿತ್ರ ಬಿಡುಗಡೆಗೆ ಕೇಂದ್ರ ಸರ್ಕಾರ ಅವಕಾಶ … Read more

ಗಾಂಜಾಕ್ಕೆ ಚಾಕೊಲೇಟ್ ರೂಪ ನೀಡಿ ಮಾರಾಟ – ಓರ್ವನ ಬಂಧನ

ಸುದ್ದಿ360, ಕೋಲಾರ, ಜು.9:  ಚಾಕೊಲೇಟ್, ಗುಟ್ಕಾ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ  ವ್ಯಕ್ತಿಯನ್ನು ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಕುರುಗಲ್ ಕ್ರಾಸ್ನಲ್ಲಿ ಈ ರೀತಿಯಾಗಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಶುಭಂ ಎಂಬಾತನನ್ನು ಬಂಧಿಸಿ, 17 ಕೆ.ಜಿ. ತೂಕದ ಗಾಂಜಾ ಚಾಕೊಲೇಟ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಮಹಾಕಾಲ್ ಎಂಬ ಹೆಸರಿರುವ ಈ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಚಾಕೋಲೇಟ್ ರೂಪದಲ್ಲಿ ಉಂಡೆ ಮಾಡಿ, ಚಿಲ್ಲರೆ ಅಂಗಡಿ, ಬೀಡಾ, … Read more

ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಸುದ್ದಿ360, ಶಿವಮೊಗ್ಗ, ಜು.9:  ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ. ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ … Read more

ಜು.11: ಯುಬಿಡಿಟಿಯಲ್ಲಿ ಅಭಿನಂದನಾ ಸಮಾರಂಭ

ಸುದ್ದಿ360, ದಾವಣಗೆರೆ, ಜು.9:  ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಹೆಸರಾಂತ ಕಂಪನಿಗಳಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜು.11ರಂದು ಬೆಳಿಗ್ಗೆ 11.30ಕ್ಕೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿವಿಧ ವಿಭಾಗಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಲ್, ಡಿಸಿಎಸ್, ಇನ್‌ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ ಸೇರಿದಂತೆ ವಿವಿಧ ಹೆಸರಾಂತ ಕಂಪನಿಗಳಲ್ಲಿ ಆಯ್ಕೆಯಾಗಿರುವ ಕಾರಣ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ಜು.10- ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ

ಸುದ್ದಿ360, ದಾವಣಗೆರೆ, ಜು.9:  ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜು.10ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಡೆಯಲಿದೆ. ಶಿಬಿರದಲ್ಲಿ ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ರಕ್ತ ಪರೀಕ್ಷೆ, ವಿಶೇಷವಾದ ಗರ್ಭಚೀಲದ ಬಾಯಿ ಸ್ರಾವ ಪರೀಕ್ಷೆ ಮಾಡಲಾಗುವುದು, ಇದರ ಜೊತೆಗೆ ಉಚಿತವಾಗಿ ಔಷಧ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: 96060 48423 ಗೆ ಕರೆ ಮಾಡಿ ಹೆಸರು ನೊಂದಣಿ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಕಮಿಟಿ … Read more

12ನೇ ಶತಮಾನದ ವಚನ ಸಾಹಿತ್ಯ ಸಾರ್ವಕಾಲಿಕ

ಶರಣರ ಸಮ ಸಮಾಜದ ಮಾರ್ಗದಲ್ಲಿ ಸಾಗಬೇಕಿದೆ : ಡಾ.ಬಿ.ಪಿ. ಕುಮಾರ್ ಸುದ್ದಿ360, ದಾವಣಗೆರೆ, ಜು.9:  ವಚನಗಳಲ್ಲಿ ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ತಾರತಮ್ಯ, ಪ್ರಾದೇಶಿಕ ಭಿನ್ನತೆ ಹೀಗೆ ಹತ್ತು ಹಲವಾರು ತಾರತಮ್ಯದ ವಿಚಾರಗಳಿಗೆ ಪರಿಹಾರ ಸೂಚಿಸಲಾಗಿದ್ದು, ಶರಣರು ಹಾಕಿಕೊಟ್ಟ ಸಮ ಸಮಾಜದ ಮಾರ್ಗದಲ್ಲಿ ನಮಗೆ ಸಾಗಲು ಆಗುತ್ತಿಲ್ಲ ಎಂದು ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ವಿಷಾದಿಸಿದರು. ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ವಚನ … Read more

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುಧ್ಧ ಜಿಲ್ಲಾ ಯುವ ಕಾಂಗ್ರೆಸ್ ಆಕ್ರೋಶ

ಸುದ್ದಿ360, ದಾವಣಗೆರೆ, ಜು.9:  ಅಗತ್ಯ ವಸ್ತುಗಳ ಬೆಲ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುಧ್ಧ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಶನಿವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿತು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಕೇಂದ್ರ ಸರ್ಕಾರವು ಸಾಮಾನ್ಯ ಜನರನ್ನ ಅಕ್ಷರಶಃ ಬೀದಿಗೆ ತಳ್ಳಿದೆ ದಿನೇ ದಿನೇ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕು ದುಸ್ತರವಾಗಿಸುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಉಪಾಧ್ಯಕ್ಷ  ರಂಜಿತ್ … Read more

ಸಿದ್ದರಾಮಯ್ಯ ಅಮೃತ ಮಹೋತ್ಸವ – ದಾವಣಗೆರೆಯಲ್ಲಿ ಸ್ಥಳ ವೀಕ್ಷಿಸಿದ‌ ಕಾಂಗ್ರೆಸ್ ಮುಖಂಡರು

ಶಾಮನೂರು ಶಿವಶಂಕರಪ್ಪ ಅವರ ಒಡೆತನದ 50 ಎಕರೆ ಸ್ಥಳದಲ್ಲಿ ಕಾರ್ಯಕ್ರಮ ಸುದ್ದಿ360, ದಾವಣಗೆರೆ, ಜು.9: ಈಗಾಗಲೇ ಭಾರೀ ಪ್ರಚಾರ ಗಿಟ್ಟಿಸಿರುವ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನದ ಅಮೃತ ಮಹೋತ್ಸವ ಆಗಸ್ಟ್ 3ರಂದು ಬೆಳಿಗ್ಗೆ 11ಕ್ಕೆ ದಾವಣಗೆರೆ ನಗರದಲ್ಲಿ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ  ಆಪ್ತರ ತಂಡ ಶನಿವಾರ ದಾವಣಗೆರೆಗೆ ದೌಡಾಯಿಸಿ ಪರಿಶೀಲನೆಯಲ್ಲಿ ತೊಡಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ದಾವಣಗೆರೆ- ಹರಿಹರ  ರಸ್ತೆಯ ಬಳಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಒಡೆತನದ … Read more

ದೇಹ ಮನಸ್ಸನ್ನು ಸದೃಢಗೊಳಿಸುವ ಆಟ-ಪಾಠಗಳಲ್ಲಿ ಕಿಕ್ ಕಂಡುಕೊಳ್ಳಿ

ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್ ಜಿಲ್ಲಾ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಕಿವಿಮಾತು ಸುದ್ದಿ360, ದಾವಣಗೆರೆ, ಜು.9: ಯುವ ಪೀಳಿಗೆ ಹೊಗೆ ಉಗುಳುವುದರಲ್ಲಿ, ಮದ್ಯ ಸೇವನೆಯಲ್ಲಿ ಕಿಕ್ ಕಂಡುಕೊಳ್ಳುತ್ತಿದೆ. ಅದರ ಬದಲು, ದೇಹ ಮತ್ತು ಮನಸನ್ನು ಸ್ಥಿಮಿತದಲ್ಲಿಡುವ ವಿವಿಧ ಆಟಗಳಲ್ಲಿ, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವುದರಲ್ಲಿ ಹಾಗೂ ಉತ್ತಮ ಆಹಾರ ಸೇವಿಸುವುದರಲ್ಲಿ ಕಿಕ್ ಕಂಡುಕೊಂಡರೆ ಜೀವನ ಉತ್ತಮವಾಗುವುದರ ಜೊತೆಗೆ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ರೆಡ್‌ಕ್ರಾಸ್ ಜಿಲ್ಲಾ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಡಿಆರ್‌ಎಂ ವಿಜ್ಞಾನ … Read more

ಅಮರನಾಥ: ಶಿವಮೊಗ್ಗದ 16 ಮಹಿಳೆಯರು ಸೇಫ್

ಸುದ್ದಿ360, ಶಿವಮೊಗ್ಗ, ಜು.09: ಶಿವಮೊಗ್ಗದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ 16 ಮಹಿಳೆಯರು ಸುರಕ್ಷಿತವಾಗಿದ್ದು, ಇವರು ಈಗ ಹೆಲಿಪ್ಯಾಡ್ ಬಳಿ ತಂಗಿದ್ದು, ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಹಿಂತಿರುಗಲಿದ್ದಾರೆ. ಮೈಸೂರಿನಿಂದ ಯಾತ್ರೆ ಕೈಗೊಂಡಿದ್ದ ವಕೀಲರ ತಂಡ ಕೂಡ ಸುರಕ್ಷಿತವಾಗಿದೆ. ಬೀದರ್ ನಿಂದ ತೆರಳಿದ್ದ ಯುವಕರ ತಂಡ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದು ಸುರಕ್ಷಿತವಾಗಿರುವುದಾಗಿ ತಿಳಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡಿಯನ್ ಟಿಬೆಟ್ ಫೋರ್ಸ್ ಸೇರಿದಂತೆ  ಎಲ್ಲ ಘಟಕಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸಹಾಯವಾಣಿಯ ವಿವರ: ಎನ್.ಡಿ.ಆರ್.ಎಫ್: 011-23438252, 011-23438253 ಕಶ್ಮೀರ್ ಡಿವಿಷನಲ್ … Read more

error: Content is protected !!