ದಾವಣಗೆರೆಯ ಪ್ರತಿಭೆ ಪೃಥ್ವಿ ಶಾಮನೂರ್‍ಗೆ  SIIMA (ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍) ದಿಂದ ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್ (best debut actor) ಪ್ರಶಸ್ತಿ

ಸುದ್ದಿ360, ದಾವಣಗೆರೆ: ಕನ್ನಡ ಚಿತ್ರ ರಂಗ ಹಾಗೂ ಮಾಡೆಲಿಂಗ್‍ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿ ಏರಿಸಿಕೊಂಡಿರುವ  ಯುವ ಪ್ರತಿಭೆ, ಯುವ ನಾಯಕ ನಟ ಪೃಥ್ವಿ ಶಾಮನೂರು ಈಗ ಕನ್ನಡ ಚಿತ್ರರಂಗದಲ್ಲಿ  ‘ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ ನಿಂದ “ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ (best debut actor) ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಸೆ.15ರ ಶುಕ್ರವಾರ ರಾತ್ರಿ ದುಬೈನಲ್ಲಿ ನಡೆದ  ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ (SIIMA AWARD) ನಿಂದ ಪೃಥ್ವಿ ಶಾಮನೂರು ಇವರಿಗೆ “ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ (best debut actor) ಪ್ರಶಸ್ತಿ ದೊರೆತಿದೆ.  ಈ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಪೃಥ್ವಿಯ ಸಾಧನೆಯನ್ನು ಹ್ಯಾಪಿ ಇವೆಂಟ್ಸ್ನ ಮಯೂರ್  ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

`ಪದವಿಪೂರ್ವ’ ಚಿತ್ರದಲ್ಲಿನ ಅಮೋಘ ನಟನೆಗಾಗಿ ಸೈಮಾ `ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ ಪ್ರಶಸ್ತಿ ಪಡೆದಿರುವ ಪೃಥ್ವಿ ಆರ್‍ ಜಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹ್ಯಾಪಿ ಇವೆಂಟ್ಸ್‍ನ ಕಾರ್ತಿಕ್ ಹಿರೇಮಠ, ನವೀನ್, ಗ್ರೀನ್‍ ಪಾರ್ಕ್‍ ಹೋಟೆಲ್‍ನ  ನಿಖಿತ್ ಶೆಟ್ಟಿ ಇದ್ದರು.

Leave a Comment

error: Content is protected !!