ದಾವಣಗೆರೆ: ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಕಿರಿಕಿರಿ- ಮಹಾನಗರ ಪಾಲಿಕೆ ಮೇಯರ್ ವಿನಾಯಕ್‍ ಪೈಲ್ವಾನ್ ಸ್ಥಳಕ್ಕೆ ಭೇಟಿ

davangere-corporation-mayor-spot-visit

ತ್ವರಿತ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮೇಯರ್ ಸೂಚನೆ

ಸುದ್ದಿ360 ದಾವಣಗೆರೆ: ನಗರದ ಕೆಲವೆಡೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿ(construction) ಗಳು ಶೀಘ್ರಗತಿಯಲ್ಲಿ ಸಾಗುತ್ತಿಲ್ಲ ಮತ್ತು ಇದರಿಂದ ಪಾದಚಾರಿಗಳು, ವಾಹನ ಸವಾರರು ಸೇರಿದಂತೆ ಸಾರ್ವಜನಿಕರಿಗೆ ಕಿರಿಕಿರಿ(annoyance)ಯಾಗುತ್ತಿದೆ ಎಂಬ ದೂರು(complaints)ಗಳು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ (Municipal Corporation Mayor) ವಿನಾಯಕ್‍ ಪೈಲ್ವಾನ್ ಹಾಗೂ ವಿರೋಧಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್‍ ಅಧಿಕಾರಿಗಳ ಜೊತೆ ಇಂದು ಸ್ಥಳ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ನಗರದ ಕೆಟಿಜೆ ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬ್ರಿಡ್ಜ್, ಜಲಸಿರಿ ಯೋಜನೆ, ರಾಜಕಾಲುವೆ ಕಾಮಗಾರಿ, ಡಾಂಗೆ ಪಾರ್ಕ್ ಹಾಗೂ ಆಂಜನೇಯ ಸ್ವಾಮಿ ಸಮೀಪದಲ್ಲಿ ಬ್ರಿಡ್ಜ್ ಅಥವಾ ಕಲ್ಲು ಒಡ್ಡು ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಮೇಯರ್ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲಿ ಶಾಲೆಗಳಿಗೆ ಹೋಗಲು, ಬೈಕ್, ಸಾಮಾನ್ಯ ಜನರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು. ಯಾವುದೇ ಕಾರಣಕ್ಕೂ ಜನರಿಂದ ದೂರು ಬರಬಾರದು. ನೀವು ನಿಗಧಿತ ಸಮಯ(fixed time)ದೊಳಗೆ ಕೆಲಸ ಮುಗಿಸಬೇಕು. ಜನರು ಎಂದಿನಂತೆ ಓಡಾಡಲು ಆದಷ್ಟು ಬೇಗ ಶ್ರಮ ವಹಿಸಿ ಬ್ರಿಡ್ಜ್ ನಿರ್ಮಾಣ ಮಾಡಬೇಕು. ಯಾವುದೇ ನೆಪ ಹೇಳದೇ  ಜನರಿಗಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ನಂತರ ನಿಟುವಳ್ಳಿ ಹಾಗೂ ಭಗತ್ ಸಿಂಗ್ ನಗರಕ್ಕೂ ಭೇಟಿ ನೀಡಿದ ಮೇಯರ್ ಹಾಗೂ ಗಡಿಗುಡಾಳ್ ಮಂಜುನಾಥ್ ಅವರು, ಜಲಸಿರಿ ಯೋಜನೆ ಹಾಗೂ ರಾಜಕಾಲುವೆ ಕಾಮಗಾರಿಗಳನ್ನೂ ಸಹ ವೀಕ್ಷಿಸಿದರು. ಮೇಯರ್ ಅವರು, ಜಲಸಿರಿ ಯೋಜನೆ ಶುರುವಾಗಿ ಕೆಲ ವರ್ಷಗಳೇ ಉರುಳಿದವು. ಇನ್ನೂ ಕಾಮಗಾರಿ ಮುಗಿದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸುವ ಕೆಲಸ ಮಾಡಿ. ರಾಜಕಾಲುವೆ ಒತ್ತುವರಿ ತೆರವು, ಈಗ ತೆಗೆದುಕೊಂಡಿರುವ ಕಾಮಗಾರಿಗಳನ್ನು ಆದ್ಯತಾನುಸಾರ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಪಾಲಿಕೆಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಮನೋಹರ್ ಮಾತನಾಡಿ, ಕೆಟಿಜೆ ನಗರದಲ್ಲಿ ಕೈಗೊಳ್ಳಲಾಗಿರುವ ಬ್ರಿಡ್ಜ್ ಬೇಗನೇ ಮುಗಿಯುತಿತ್ತು. ವಿಧಾನಸಭೆ ಚುನಾವಣೆಯ  ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿತ್ತು.

ಈಗ ಕೆಲಸ ಆರಂಭಿಸಲಾಗಿದೆ. ಬ್ರಿಡ್ಜ್ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಸ್ಲ್ಯಾಬ್ ಹಾಕಬೇಕು. ಇನ್ನು 15 ರಿಂದ 20 ದಿನಗಳೊಳಗೆ ಪೂರ್ಣಗೊಳಿಸಿ ಜನರ ಸೇವೆಗೆ ಅನುವು ಮಾಡಿಕೊಡಲಾಗುವುದು. ಭಗತ್ ಸಿಂಗ್ ನಗರದ ರಾಜಕಾಲುವೆ, ಬ್ರಿಡ್ಜ್  ನಿರ್ಮಾಣ ಸೇರಿದಂತೆ ಒಟ್ಟು 1. 50 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಬ್ರಿಡ್ಜ್ ನಿರ್ಮಾಣದ ಸಮೀಪ ಕಸ, ಕಡ್ಡಿ, ತ್ಯಾಜ್ಯ ಇದ್ದು,ಅದನ್ನು ತೆರವುಗೊಳಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಜಲಸಿರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯೂ ವೇಗ ಪಡೆದಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಜಲಸಿರಿ ಯೋಜನೆಯ ಇಂಜಿನಿಯರ್ ಶಿವಕುಮಾರ್, ಪಾಲಿಕೆಯ ಮಾಜಿ ಉಪ ಮಹಾಪೌರರಾದ ದ್ಯಾಮಪ್ಪ ಮತ್ತಿತರರು ಹಾಜರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!