ಎಚ್ ಡಿಕೆ ಹೇಳಿಕೆಗೆ  ಮಹಬೂಬ್ ಭಾಷಾ ತೀವ್ರ ಖಂಡನೆ

ಸುದ್ದಿ360 ದಾವಣಗೆರೆ, ಅ.11: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಹಾರ್ ಜೈಲ್ಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿರುವುದನ್ನು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ, ತೀವ್ರವಾಗಿ ಖಂಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಇರುವ ಜನರ ಬೆಂಬಲ, ಅವರು ಒಬ್ಬ  ಉಪ ಮುಖ್ಯಮಂತ್ರಿಗಳಾಗಿ ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಸಹಿಸಿಕೊಳ್ಳದೆ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡು ಡಿಕೆಶಿ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. 136 ಶಾಸಕರಿಂದ ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರವನ್ನು,  ಪಿತೂರಿ ಇಂದ ಅಸ್ಥಿರಗೊಳಿಸುವ  ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಹೆಚ್‍ಡಿಕೆ ಅವರು ಘನತೆಗೆ  ತಕ್ಕಂತೆ ಮಾತಾಡಬೇಕು. ಮುಂದೆ ಇದೇ ರೀತಿ ವರ್ತಿಸಿದರೆ, ಅವರ ವಿರುದ್ಧ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಹಬೂಬ್ ಭಾಷಾ ಹೇಳಿದ್ದಾರೆ.

Leave a Comment

error: Content is protected !!