ದಾವಣಗೆರೆ ನೇತಾರನ ಅಂತಿಮ ದರ್ಶನ

ದಾವಣಗೆರೆ: ಮಾಜಿ ಸಚಿವರು ಹಾಗೂ ಶಾಸಕರಾದ
ಡಾ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರವನ್ನು ಇಂದು ಸೋಮವಾರ ದಾವಣಗೆರೆ ಮನೆಯಲ್ಲಿ ಬೆಳೆಗ್ಗೆ 7 ಗಂಟೆಯಿಂದ 10.30 ಗಂಟೆ ತನಕ ಪೂಜಾ ವಿಧಿವಿದಾನ ಹಾಗೂ ಕುಟುಂಬಸ್ಥರಿಗೆ ದರ್ಶನಕ್ಕೆ ಅನುವುಮಾಡಲಾಗಿದೆ.

ಸಾರ್ವಜನಿಕರಿಗೆ ಅಂತಿಮದರ್ಶನ:

ದಾವಣಗೆರೆ ಹೈ ಸ್ಕೂಲ್ ಮೈದಾನದಲ್ಲಿ ಸೋಮವಾರ ಮಾಧ್ಯಾಹ್ನ12 ಗಂಟೆಯಿಂದ – 3 ಗಂಟೆವರೆಗೆ ಸಾರ್ವಜನಿಕರು ಅಂತಿಮದರ್ಶನ ಮಾಡಬಹುದಾಗಿದೆ.
ಅಂತಿಮ ವಿಧಿವಿಧಾನ :
ಇಂದು ಸಂಜೆ 4.30 ಗಂಟೆಗೆ ಅಂತಿಮ ವಿಧಿವಿಧಾನಗಳನ್ನು ದಾವಣಗೆರೆಯ ಬಂಬೂಬಜಾರ್ ರಸ್ತೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ನೆರವೇರಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

Leave a Comment

error: Content is protected !!