ಬೆಂಗಳೂರು: ಹೆಚ್.ಎಂ.ಟಿ ಬಡಾವಣೆಯಲ್ಲಿ ರಾಜಯೋಗಕೇಂದ್ರ ಮತ್ತು ಬೆಸ್ಟ್ ಕಂಪ್ಯೂಟರ್ ಸಲ್ಯೂಷನ್ ಸಹಯೋಗದಲ್ಲಿ ನವರಾತ್ರಿ ಉತ್ಸವಪ್ರಯುಕ್ತ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಮಾರಾಟ ಮಳಿಗೆಗಳನ್ನ ಎರ್ಪಡಿಸಲಾಗಿತ್ತು.ಮಳಿಗೆಗಳಲ್ಲಿ ಹಲವಾರು ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಮಾಡಿದರು ಇದನ್ನು ರೋಟರಿ ಸಂಸ್ಥೆಗಳಾದ ರೋಟರಿ ಜಾಲಹಳ್ಳಿ ರೋಟರಿ ನೆಲಮಂಗಲ ರೋಟರಿ ಸೋಂಪುರ ರೋಟರಿ ವಿಶ್ವನೀಡಂ ರೋಟರಿ ಮಹಾಲಕ್ಷ್ಮೀ ಸೆಂಟ್ರಲ್ ರೋಟರಿ ಹೆಸರಘಟ್ಟ ರೋಡ್ ರೋಟರಿ ಕಾಮಧೇನು ರೋಟರಿ ತುರುವೇಕೆರೆ ರೋಟರಿ ಉದ್ಯೋಗ್ ರೋಟರಿ ಬೆಂಗಳೂರು ಸೆಂಟ್ರಲ್ ಹಾಗೂ ಲಘುಉದ್ಯೋಗಭಾರತಿ
ವತಿಯಿಂದ ಆಯೋಜನೆ ಮಾಡಲಾಗಿತ್ತು. ಜಾಲಹಳ್ಳಿ ರೋಟರಿ ಅಧ್ಯಕ್ಷೆಯಾದ ರೊ. ರಮಣಿ ಉಪ್ಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಲಘು ಉದ್ಯಮಗಳು ಸಹಕಾರಿಯಾಗಲಿವೆ ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಮಾರು 28 ಮಹಿಳಾ ಸ್ವಾವಲಂಬಿ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮೊದಲ ಬಾರಿ ಹೊರಜಗತ್ತಿಗೆ ಪರಿಚಯಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಈ ವೇದಿಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

By admin

Leave a Reply

Your email address will not be published. Required fields are marked *

error: Content is protected !!