ಕಲಾವಿದರಿಗೆ ಅಗತ್ಯ ನೆರವು ನೀಡಲು ಎಸ್‌ಎಸ್ ಕೇರ್ ಟ್ರಸ್ಟ್ ಸಿದ್ಧ – ಡಾ. ಪ್ರಭಾ ಮಲ್ಲಿಕಾರ್ಜುನ್

chitrakala-pradarshana-davangere

ಸುದ್ದಿ360, ದಾವಣಗೆರೆ, ಸೆ.27: ಒಂದು ಕಲಾಕೃತಿ ಮೂಡಿಬರಲು ಕಲಾವಿದನ ನೈಪುಣ್ಯತೆ ಮತ್ತು ಕಠಿಣ ಪರಿಶ್ರಮದ ಅರಿವು ನಮಗಿದೆ. ಕಲಾವಿದರ ಶ್ರೇಯಸ್ಸಿಗಾಗಿ ಎಸ್‌ಎಸ್ ಕೇರ್ ಟ್ರಸ್ಟ್ ಮೂಲಕ ಅಗತ್ಯವಿರುವ ನೆರವು ನೀಡಲು ಸಿದ್ಧರಿರುವುದಾಗಿ ಟ್ರಸ್ಟ್ ಆಜೀವ ವಿಶ್ವಸ್ಥರಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಎಂಸಿಸಿ ಎ ಬ್ಲಾಕ್ 6ನೇ ಮುಖ್ಯರಸ್ತೆಯಲ್ಲಿರುವ ತೊಗಟವೀರ ಸಮುದಾಯ ಭವನದಲ್ಲಿ ಇಂದು ಬುಧವಾರ ದಾವಣಗೆರೆ ಚಿತ್ರಕಲಾ ಪರಿಷತ್ ವತಿಯಿಂದ ಹಿಂದೂ ಯುವ ಶಕ್ತಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ವರ್ಣ ಗಣೇಶ’ ಚಿತ್ರಕಲಾ ಪ್ರದರ್ಶನದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಿತ್ರ ಕಲಾವಿದರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರ ಮಾಹಿತಿ ನಮಗೆ ಇದೆ. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸ್ವತಃ ಕಲಾವಿದರು ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದರು.

ಗಣೇಶನ ನಾನಾ ರೂಪಗಳು ಕಲಾವಿದನ ಕೈಯಿಂದ  ಇಲ್ಲಿ ಅರಳಿವೆ. ಕಲಾವಿದನಿಗೆ ನಿಖರತೆ ಇದ್ದರೆ ಮಾತ್ರ ಕಲಾಕೃತಿ ಸುಂದರವಾಗಿ ಮೂಡಿ ಬರಲು ಸಾಧ್ಯ. ಮಹಾಭಾರತದ ಸನ್ನಿವೇಶಗಳನ್ನು ವಿವರಿಸುವ ಚಿತ್ರಗಳೂ ಇಲ್ಲಿ ಅತ್ಯುತ್ತಮವಾಗಿ ಮೂಡಿಬಂದಿವೆ ಎಂದು ಕಲಾವಿದರನ್ನು ಪ್ರಶಂಸಿಸಿದರು.

ಗ್ಲಾಸ್‍ಹೌಸ್‍ನಲ್ಲಿ ಒಂದು ತಿಂಗಳು ಕಲಾಪ್ರದರ್ಶನ:

ಬರಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಗರದ ಗ್ಲಾಸ್‍ ಹೌಸ್‍ನಲ್ಲಿ ಫಲಪುಷ್ಪ ಪ್ರದರ್ಶನದ ಜತೆಗೆ, ಗಾಜಿನ ಮನೆಯ ಒಂದು ಭಾಗದಲ್ಲಿ ನಗರದ ಚಿತ್ರ ಕಲಾವಿದರು ತಾವು ರಚಿಸಿದ ಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅಲ್ಲಿ ಒಂದು ತಿಂಗಳ ಕಾಲ ಪ್ರದರ್ಶನ ಏರ್ಪಡಿಸಿದರೆ ಸಾರ್ವಜನಿಕರು ಚಿತ್ರಗಳನ್ನು ವೀಕ್ಷಿಸುತ್ತಾರೆ. ಇದರಿಂದ ಕಲಾವಿದರಿಗೆ ಹೆಚ್ಚು ಮಾನ್ಯತೆ ದೊರೆಯುತ್ತದೆ.

-ಡಾ. ಪ್ರಭಾ ಮಲ್ಲಿಕಾರ್ಜುನ್, ಆಜೀವ ವಿಶ್ವಸ್ಥರು, ಎಸ್‌ಎಸ್ ಕೇರ್‌ಟ್ರಸ್ಟ್.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಸದಾನಂದ ಹೆಗಡೆ ವಹಿಸಿದ್ದರು. ಇದೇ ವೇಳೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಕಲಾವಿದರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ದಾವಣಗೆರೆ ಚಿತ್ರಕಲಾ ಪರಿಷತ್ ಕಾರ್ಯದರ್ಶಿ ಡಿ. ಶೇಷಾಚಲ, ಎ. ಮಹಾಲಿಂಗಪ್ಪ, ದತ್ತಾತ್ರೇಯ ಭಟ್, ರಾಮನಾಥ್, ಡಿ.ಡಿ. ಬಸಣ್ಣ, ಬಿ. ಅಚ್ಯುತಾನಂದ, ಶಾಂತಯ್ಯ ಪರಡೀಮಠ, ಚಂದ್ರಶೇಖರ ಸಂಗಾ, ಆರ್. ಶಿವಕುಮಾರ್, ರಂಗನಾಥ ಕುಲಕರ್ಣಿ, ಪ್ರಶಾಂತ್ ಕಲಾಕುಠೀರ, ಚಂಧ್ರಶೇಖರ ತೆಗ್ಗಿನಮಠ, ಡಿ.ಕೆ. ಅಶೋಕ, ಸಂತೋಷ್ ಕುಲಕರ್ಣಿ, ಹರಿಶ್ಚಂದ್ರ ಪತ್ತಾರ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!