ಎಸ್ ಎಸ್ ಎಂ ಜನ್ಮದಿನ; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ (DAVANAGERE); ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ಒಂದು ದಿನದ ರಾಜ್ಯಮಟ್ಟದ 3×3 ಆಹ್ವಾನಿತ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ವತಃ ಬಾಸ್ಕೆಟ್ ಬಾಲ್ ಆಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಸದೃಢತೆ ಹೆಚ್ಚಾಗುತ್ತದೆ.ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.ಈ ರೀತಿಯ ಪಂದ್ಯಾವಳಿಗಳು‌ ಹೆಚ್ಚಾಗಿ ನಡೆಯಲಿ‌ ಎಂದರು.

ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ರಾಜ್ಯದ ವಿವಿಧ ತಂಡಗಳು ಭಾಗವಹಿಸಿದ್ದವು. ಇದರ ಜೊತೆಗೆ 16 ವರ್ಷ ವಯೋಮಿತಿಯ ಬಾಲಕರಿಗೆ ಜಿಲ್ಲಾ ಮಟ್ಟದ 3X3 ಬಾಸ್ಕೆಟ್ ಬಾಲ್ ಪಂದ್ಯಗಳು ನಡೆದವು. ಈ ವೇಳೆ ಜಿಲ್ಲಾ ಬಾಸ್ಕೆಟ್ ಬಾಲ್ ಕ್ಲಬ್ ನ ಗೌರವಾಧ್ಯಕ್ಷರಾದ ಸಿ.ರಾಮಮೂರ್ತಿ, ಉಪಾಧ್ಯಕ್ಷರಾದ ಗಡಿಗುಡಾಳ್ ಮಂಜುನಾಥ್, ವಸಂತಕುಮಾರ್, ದರ್ಶನ್, ಸಚಿನ್ ಹಾಗೂ‌ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!