ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ

ಸುದ್ದಿ 360, ವಿಜಯನಗರ,ಜೂ16: ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ 25 ಜನರು ಗಾಯಗೊಂಡಿದ್ದಾರೆ. ಹೊಸಪೇಟೆಯಿಂದ ಬಳ್ಳಾರಿ ಕಡೆ ಚಲಿಸುತ್ತಿದ್ದ ಸರಕಾರಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯತನ ಅಪಘಾತಕ್ಕೆ ಕಾರಣ ಎನ್ನಲಾಗಿದೆ‌.  ಅಪಘಾತದಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡ ಕೆಲವರನ್ನ ಕೂಡಲೇ ಹೊಸಪೇಟೆಯ ತಾಲೂಕು ಆಸ್ಪ್ರತ್ರೆಯಲ್ಲಿ ದಾಖಲಿಸಲಾಗಿದೆ.. ಗಾಯಗೊಂಡವರಲ್ಲಿ ಬಹುತೇಕರು … Read more

ಬಿದ್ದ ಮರಕ್ಕೆ ಬೈಕ್ ಡಿಕ್ಕಿ- ಬೈಕ್‌ ಸವಾರ  ಸ್ಥಳದಲ್ಲೆ ಸಾವು

ಸುದ್ದಿ360 ಬೆಳ್ತಂಗಡಿ, ಜೂ.15 : ಬೆಳಗ್ಗಿನ ಜಾವ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದ್ದು ಇದನ್ನು ಗಮನಿಸದ ಬೈಕ್ ಸವಾರ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಅಡ್ಯಾಲ ಚಡವು ಎಂಬಲ್ಲಿ ಬೆಳಗಿನ ಜಾವ ಸುಮಾರು 5.30ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಬೈಕ್ ಸವಾರ ಕನ್ಯಾಡಿ ಬಳಿ ಇರುವ ಹೊಟೇಲ್ ಮಾಲಿಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಗುಳಿಚತ್ರ ನಿವಾಸಿ ನೇಮಿರಾಜ್ … Read more

ಹಿಟ್ ಅಂಡ್ ರನ್ – ಬೈಕ್‍ ಸವಾರ ಗಂಭೀರ

ಶಿವಮೊಗ್ಗ, ಜೂ.14: ನಗರದ ಬೈಪಾಸ್‍ ರಸ್ತೆಯ ಕಿಯಾ ಶೋ ರೂಂ ಎದುರಿನಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ತೀವ್ರಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೆಂಪು ಬಣ್ಣದ ಐಟೆನ್ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಮುಂದೆ ಸಾಗಿದೆ. ಟ್ರಾಫಿಕ್ ಪೂರ್ವ ಪೊಲೀಸರು ಬೈಕ್ ಸವಾರನಿಗೆ ಆಸ್ಪತ್ರೆಗೆ ಸೇರಿಸಿ ಹಿಟ್ ಅಂಡ್ ರನ್ ಮಾಡಿದ ಕಾರು ಚಾಲಕನನ್ನು ಸಿಸಿ ಕ್ಯಾಮೇರ ದೃಶ್ಯಾವಳಿಗಳಿಂದ ಗುರುತಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

error: Content is protected !!